ಪತ್ರಕರ್ತೆಯ ಪ್ರಶ್ನೆಗೆ ಗರಂ ಆದ ಅಣ್ಣಾಮಲೈ; ವೇದಿಕೆಯಲ್ಲೇ ಕಿರಿಕ್

ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹಾಗೂ ಪತ್ರಕರ್ತರ ನಡುವಿನ ಗೊಂದಲ ಮತ್ತೆ ಮುಂದುವರೆದಿದ್ದು, ಪತ್ರಕರ್ತೆಯ ಪ್ರಶ್ನೆಗೆ ಗರಂ ಆದ ಅಣ್ಣಾಮಲೈ ವೇದಿಕೆಯಲ್ಲೇ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ.
ಅಣ್ಣಾಮಲೈ
ಅಣ್ಣಾಮಲೈ
Updated on: 

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಹಾಗೂ ಪತ್ರಕರ್ತರ ನಡುವಿನ ಗೊಂದಲ ಮತ್ತೆ ಮುಂದುವರೆದಿದ್ದು, ಪತ್ರಕರ್ತೆಯ ಪ್ರಶ್ನೆಗೆ ಗರಂ ಆದ ಅಣ್ಣಾಮಲೈ ವೇದಿಕೆಯಲ್ಲೇ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ.

ಭಾನುವಾರ ಕೊಯಮತ್ತೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಸಿಡಿಮಿಡಿಗೊಂಡು ಕಿರಿಕ್‌ ಮಾಡಿಕೊಂಡಿದ್ದು, ಇದು ತಮಿಳುನಾಡಿನಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಿದರೆ ಪಕ್ಷದಲ್ಲಿ ಮುಂದುವರಿಯುತ್ತೀರಾ ಎಂಬ ಪ್ರಶ್ನೆಯನ್ನು ಅಣ್ಣಾಮಲೈ ಅವರಿಗೆ ಮಹಿಳಾ ವರದಿಗಾರ್ತಿ ಕೇಳಿದ್ದಾರೆ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ, ಮಹಿಳಾ ಪತ್ರಕರ್ತೆಗೆ ಕ್ಯಾಮೆರಾ ಮುಂದೆ ಬರಲು ಹೇಳಿದ್ದಾರೆ.

ಯಾರು ಇಂತಹ 'ಬುದ್ಧಿವಂತ' ಪ್ರಶ್ನೆ ಕೇಳುತ್ತಿದ್ದಾರೆಂದು ತಮಿಳುನಾಡಿನ ಜನರು ನೋಡಲಿ. ಇಲ್ಲಿ ಬಾ ಅಕ್ಕ, ಇಲ್ಲಿಗೆ ಬಂದು ಮಾತಾಡು. ಇಂತಹ ಅದ್ಭುತ ಪ್ರಶ್ನೆಯನ್ನು ಯಾರು ಕೇಳುತ್ತಿದ್ದಾರೆಂದು ತಮಿಳುನಾಡಿನ ಜನತೆ ನೋಡಲಿ' ಎಂದು ಹೇಳಿದ್ದಾರೆ. ಅಲ್ಲದೆ ಪ್ರಶ್ನೆ ಕೇಳುವುದಕ್ಕೆ ಒಂದು ರೂಢಿ ಇದೆ. ಒಬ್ಬ ವ್ಯಕ್ತಿಯು ಪ್ರಶ್ನೆಗಳನ್ನು ಕೇಳುವ ಹಕ್ಕನ್ನು ಹೊಂದಿರುವಾಗ, ಅವರು ಲಕ್ಷ್ಮಣ ರೇಖೆಯನ್ನು ದಾಟಬಾರದು. ಇದಕ್ಕೆ ಮಿತಿ ಇದೆ. ಯಾರೇ ಆಗಲಿ ಆ ರೂಢಿಯನ್ನು ದಾಟಬಾರದು. ಅಂತಹ ಜನರನ್ನು ನಾನು ಸುಮ್ಮನೇ ಬಿಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ.

ಅಣ್ಣಾಮಲೈಗೆ ಹೈಕಮಾಂಡ್‌ ಬುಲಾವ್‌
ಬಿಜೆಪಿ ಜೊತೆಗಿನ ದೀರ್ಘ ಕಾಲದ ಸಂಬಂಧವನ್ನು ಎಐಎಡಿಎಂಕೆ ಕಡಿದುಕೊಂಡಿದೆ. ಈ ಬೆಳವಣಿಗೆಗಳ ನಡುವೆಯೇ ಅಣ್ಣಾಮಲೈ ಅವರನ್ನು ದೆಹಲಿ ಬರುವಂತೆ ಬಿಜೆಪಿ ಹೈಕಮಾಂಡ್‌ ಸೂಚಿಸಿದೆ. ಇದು ಭಾರೀ ಮಹತ್ವ ಪಡೆದುಕೊಂಡಿದೆ. ಅಣ್ಣಾಮಲೈ ಅವರು ಸೋಮವಾರ ದೆಹಲಿಗೆ ತೆರಳಿದ್ದಾರೆ ಎಂದು ಮೂಲಗಳು ಹೇಳಿವೆ.

ಅಣ್ಣಾಮಲೈ ಅವರು ಬಿಜೆಪಿಯ ಉನ್ನತ ನಾಯಕತ್ವದೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭಾಗವಹಿಸುವ ಸಾಧ್ಯತೆ ಇದೆ. ಅವರಿಬ್ಬರೂ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಣ್ಣಾಮಲೈ ಜೊತೆ ಮಾಹಿತಿ ಪಡೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಅಣ್ಣಾಮಲೈ ಅವರು ದೆಹಲಿ ಭೇಟಿ ಮುಗಿದ ಬಳಿಕ ಮುಂದಿನ ವಾರ ಹೊಸ ಮೈತ್ರಿಕೂಟ ರಚಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಮಿಳುನಾಡು ಬಿಜೆಪಿ ಹೇಳಿದೆ. ಎಐಎಡಿಎಂಕೆ ಹೊರತುಪಡಿಸಿದ ಮೈತ್ರಿಕೂಟ ಇದಾಗಲಿದೆ ಎಂದು ಬಿಜೆಪಿ ತಿಳಿಸಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com