ಇಸ್ರೇಲ್-ಹಮಾಸ್ ಸಂಘರ್ಷ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಗೆ ಬಿಗಿ ಭದ್ರತೆ

ಇಸ್ರೇಲ್-ಹಮಾಸ್ ಸಂಘರ್ಷ ಯುದ್ಧ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಇಸ್ರೇಲಿ ರಾಯಭಾರ ಕಚೇರಿ ಮತ್ತು ದೆಹಲಿಯ ಚಾಬಾದ್ ಹೌಸ್ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಪೊಲೀಸರಿಂದ ಭದ್ರತೆ
ಪೊಲೀಸರಿಂದ ಭದ್ರತೆ

ಜೆರುಸಲೇಂ: ಇಸ್ರೇಲ್-ಹಮಾಸ್ ಸಂಘರ್ಷ ಯುದ್ಧ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಇಸ್ರೇಲಿ ರಾಯಭಾರ ಕಚೇರಿ ಮತ್ತು ದೆಹಲಿಯ ಚಾಬಾದ್ ಹೌಸ್ ಸುತ್ತಲೂ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ದೆಹಲಿಯ ರಾಯಭಾರ ಕಚೇರಿ ಮತ್ತು ಮಧ್ಯ ದೆಹಲಿಯ ಚಾಂದಿನಿ ಚೌಕ್‌ನಲ್ಲಿರುವ ಚಾಬಾದ್ ಹೌಸ್ ಸುತ್ತಮುತ್ತ ಬೀಡುಬಿಟ್ಟಿರುವ ಸ್ಥಳೀಯ ಪೊಲೀಸರಿಗೆ ಬಿಗಿ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಎರಡೂ ಕಡೆ ನಿಗಾ ಹೆಚ್ಚಿಸಲು ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಅಧಿಕಾರಿ ಹೇಳಿದರು.

ಕಳೆದ ಶನಿವಾರ ಬೆಳಗ್ಗೆ ತನ್ನ ದಕ್ಷಿಣ ಭಾಗಗಳಲ್ಲಿ ಗಾಜಾ ಪಟ್ಟಿಯನ್ನು ಆಳುವ ಹಮಾಸ್‌ನ ಹಠಾತ್ ಭೀಕರ ದಾಳಿಗೆ ಇಸ್ರೇಲ್ ಸಾಕ್ಷಿಯಾಯಿತು. ಇಸ್ರೇಲ್‌ನಲ್ಲಿ ಕನಿಷ್ಠ 700 ಜನರು ಇದುವರೆಗೆ ಮೃತಪಟ್ಟಿದ್ದಾರೆ. 2,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ನ ಪ್ರತಿ ದಾಳಿಯಲ್ಲಿ ಸುಮಾರು 500 ಸಾವುಗಳು ಮತ್ತು 2,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com