'ನನ್ನ ವಿರೋಧಿಗಳು ಸಹ ನನ್ನ ಗುರುಗಳು': ರಾಹುಲ್ ಗಾಂಧಿ
ನನ್ನ ವಿರೋಧಿಗಳನ್ನು ಕೂಡ ಶಿಕ್ಷಕರು ಎಂದು ಪರಿಗಣಿಸುತ್ತೇನೆ ಎಂದಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ. ಸಮಾಜದಲ್ಲಿ ಸಮಾನತೆಯ ಜ್ಞಾನವನ್ನು ನಮಗೆ ನೀಡಿದ ಮಹಾತ್ಮಾ ಗಾಂಧಿ, ಗೌತಮ ಬುದ್ಧ, ಶ್ರೀ ನಾರಾಯಣ ಗುರುಗಳಂತಹ ಮಹಾನ್ ವ್ಯಕ್ತಿಗಳನ್ನು ನಾನು ನನ್ನ ಗುರುಗಳು ಎಂದು ಪರಿಗಣಿಸುತ್ತೇನೆ" ಎಂದು ರಾಹುಲ್ ಗಾಂಧಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ನವದೆಹಲಿ: ನನ್ನ ವಿರೋಧಿಗಳನ್ನು ಕೂಡ ಶಿಕ್ಷಕರು ಎಂದು ಪರಿಗಣಿಸುತ್ತೇನೆ ಎಂದಿದ್ದಾರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ.
ಸಮಾಜದಲ್ಲಿ ಸಮಾನತೆಯ ಜ್ಞಾನವನ್ನು ನಮಗೆ ನೀಡಿದ ಮಹಾತ್ಮಾ ಗಾಂಧಿ, ಗೌತಮ ಬುದ್ಧ, ಶ್ರೀ ನಾರಾಯಣ ಗುರುಗಳಂತಹ ಮಹಾನ್ ವ್ಯಕ್ತಿಗಳನ್ನು ನಾನು ನನ್ನ ಗುರುಗಳು ಎಂದು ಪರಿಗಣಿಸುತ್ತೇನೆ" ಎಂದು ರಾಹುಲ್ ಗಾಂಧಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.
ಶಿಕ್ಷಕರ ದಿನದಂದು ಎಲ್ಲಾ ಶಿಕ್ಷಕರಿಗೆ ನನ್ನ ಗೌರವ ನಮನಗಳು. ಭಾರತದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಅವರ ಜನ್ಮದಿನದಂದು ವಿನಮ್ರ ನಮನಗಳು. ಒಬ್ಬ ಶಿಕ್ಷಕ ಜೀವನದಲ್ಲಿ ಉನ್ನತ ಮಟ್ಟವನ್ನು ಹೊಂದಿರುತ್ತಾರೆ. ಜೀವನದ ದಾರಿ ತೋರಿಸುವವರು, ಬೆಳಗುವವರು ಶಿಕ್ಷಕರು. ನೀವು ಸರಿಯಾದ ದಿಕ್ಕಿನಲ್ಲಿ ಸಾಗುವಂತೆ ದಾರಿ ತೋರಿಸುತ್ತಾರೆ ಎಂದಿದ್ದಾರೆ.
ಭಾರತದ ಜನರು ಸಹ ಶಿಕ್ಷಕರಂತೆ, ಅವರು ವಿವಿಧತೆಯಲ್ಲಿ ಏಕತೆಗೆ ಉದಾಹರಣೆ ನೀಡುತ್ತಾರೆ, ಪ್ರತಿ ಸಮಸ್ಯೆಯನ್ನು ಧೈರ್ಯದಿಂದ ಹೋರಾಡಲು ನಮಗೆ ಸ್ಫೂರ್ತಿ ನೀಡುತ್ತಾರೆ ಮತ್ತು ನಮ್ರತೆ ಮತ್ತು ತಪಸ್ಸಿನ ಸಾಕಾರರಾಗಿದ್ದಾರೆ.
"ನಾನು ನನ್ನ ವಿರೋಧಿಗಳನ್ನು ಸಹ ನನ್ನ ಶಿಕ್ಷಕರೆಂದು ಪರಿಗಣಿಸುತ್ತೇನೆ, ಅವರ ನಡವಳಿಕೆ, ಸುಳ್ಳು ಮತ್ತು ಮಾತುಗಳಿಂದ ನಾನು ಅನುಸರಿಸುತ್ತಿರುವ ಮಾರ್ಗವು ಸಂಪೂರ್ಣವಾಗಿ ಸರಿ ಎಂದು ನನಗೆ ಕಲಿಸುತ್ತದೆ ಎಂದು ರಾಹುಲ್ ಗಾಂಧಿ ಬರೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


