ಪಾಟ್ನಾದಲ್ಲಿ ರಾಹುಲ್ ಗಾಂಧಿಯನ್ನು 'ದೇವದಾಸ್'ಗೆ ಹೋಲಿಸಿ ಪೋಸ್ಟರ್ ಹಾಕಿದ ಬಿಜೆಪಿ!

ಪಾಟ್ನಾದಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಗೆ ಮುನ್ನ ನಡೆಯುತ್ತಿರುವ ಪೋಸ್ಟರ್ ಸಮರಕ್ಕೆ ಇದೀಗ ಮತ್ತೊಂದು ಪೋಸ್ಟರ್ ಸೇರಿಕೊಂಡಿದೆ. ಬಿಜೆಪಿ ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಾಲಿವುಡ್‌ನ ಪ್ರಸಿದ್ಧ ಪಾತ್ರ 'ದೇವದಾಸ್' ಎಂದು ಬಿಂಬಿಸುವ ಪೋಸ್ಟರ್ ಅನ್ನು ವೀರಚಂದ್ ಪಟೇಲ್ ಮಾರ್ಗದ ಪಕ್ಷದ ಕಚೇರಿಯ ಗೇಟ್‌ನಲ್ಲಿ ಹಾಕಿದೆ.
ಬಿಜೆಪಿ ಹಾಕಿರುವ ಫೋಸ್ಟರ್
ಬಿಜೆಪಿ ಹಾಕಿರುವ ಫೋಸ್ಟರ್

ಪಾಟ್ನಾ: ಇಲ್ಲಿ ನಡೆಯುತ್ತಿರುವ ಪ್ರತಿಪಕ್ಷಗಳ ಸಭೆಗೆ ಮುನ್ನ ನಡೆಯುತ್ತಿರುವ ಪೋಸ್ಟರ್ ಸಮರಕ್ಕೆ ಇದೀಗ ಮತ್ತೊಂದು ಪೋಸ್ಟರ್ ಸೇರಿಕೊಂಡಿದೆ. ಬಿಜೆಪಿ ಶುಕ್ರವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಾಲಿವುಡ್‌ನ ಪ್ರಸಿದ್ಧ ಪಾತ್ರ 'ದೇವದಾಸ್' ಎಂದು ಬಿಂಬಿಸುವ ಪೋಸ್ಟರ್ ಅನ್ನು ವೀರಚಂದ್ ಪಟೇಲ್ ಮಾರ್ಗದ ಪಕ್ಷದ ಕಚೇರಿಯ ಗೇಟ್‌ನಲ್ಲಿ ಹಾಕಿದೆ.

ಪೋಸ್ಟರ್‌ನಲ್ಲಿ ಒಂದು ತುದಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಇನ್ನೊಂದು ತುದಿಯಲ್ಲಿ ಕಾಂಗ್ರೆಸ್ ನಾಯಕನ ಚಿತ್ರವಿದೆ. ಶಾರುಖ್ ಖಾನ್ ಚಿತ್ರದ ಪಕ್ಕ ಬಾಲಿವುಡ್ ಚಲನಚಿತ್ರ 'ದೇವದಾಸ್'ನ ಪ್ರಸಿದ್ಧ ಸಂಭಾಷಣೆಯಾದ 'ಬಾಬುಜಿ ನೆ ಕಹಾ ಗಾಂವ್ ಚೋರ್ ದೋ, ಪರೋ ನೆ ಕಹಾ ಶರಬ್ ಚೋರ್ ದೋ' ಎಂದು ಬರೆಯಲಾಗಿದೆ.

ರಾಹುಲ್ ಗಾಂಧಿಯವರ ಚಿತ್ರದ ಜೊತೆಗೆ, 'ಮಮತಾ ದೀದಿ ನೆ ಕಹಾ ಬೆಂಗಾಲ್ ಚೋರ್ ದೋ, ಕೇಜ್ರಿವಾಲ್ ನೆ ಕಹಾ ದೆಹಲಿ ಔರ್ ಪಂಜಾಬ್ ಚೋರ್ ದೋ, ಲಾಲು-ನಿತೀಶ್ ನೆ ಕಹಾ ಬಿಹಾರ್ ಚೋರ್ ದೋ, ಅಖಿಲೇಶ್ ನೇ ಕಹಾ ಉತ್ತರ ಪ್ರದೇಶ ಚೋರ್ ದೋ, ಸ್ಟಾಲಿನ್ ನೆ ಕಹಾ ತಮಿಳುನಾಡು ಚೋರ್ ದೋ, ವೋ ದಿನ್ ದೂರ್ ನಹೀ ಜಬ್ ಸಬ್ ಮಿಲ್ ಕಹೆಗೆ ಕಿ ಕಾಂಗ್ರೆಸಿ (ರಾಹುಲ್) ರಜನೀತಿ ಚೋರ್ ದೋ' ಎಂದು ಬರೆಯಲಾಗಿದೆ.

2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯೇತರ ಪಕ್ಷಗಳ ಸಭೆಗಾಗಿ ಪಾಟ್ನಾಕ್ಕೆ ಬರುವ ಪ್ರತಿಪಕ್ಷ ನಾಯಕರನ್ನು ಬಿಜೆಪಿ ಗುರಿಯಾಗಿಸಿರುವ ಬಿಜೆಪಿ, ಬಿಹಾರದಲ್ಲಿ ಗುರುವಾರದಿಂದ ಪೋಸ್ಟರ್ ವಾರ್ ಮುಂದುವರಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com