ನಟಿ ಸ್ವರ ಭಾಸ್ಕರ್-ಫಹಾದ್ ಅಹ್ಮದ್ 'ಶಾದಿ' ರಿಸೆಪ್ಷನ್ ಗೆ ತೆರಳಿ ಶುಭಕೋರಿದ ರಾಹುಲ್ ಗಾಂಧಿ

ಇತ್ತೀಚೆಗಷ್ಟೇ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದ ಖ್ಯಾತ ನಟಿ ಸ್ವರಾ ಭಾಸ್ಕರ್ ಹಾಗೂ ರಾಜಕಾರಣಿ ಫಹಾದ್ ಅಹ್ಮದ್ ಅವರ ಮದುವೆ ಆರತಕ್ಷತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಜರಾಗಿ ನವದಂಪತಿಗಳಿಗೆ ಶುಭ ಕೋರಿದ್ದಾರೆ.
ಸ್ವರಾ ಭಾಸ್ಕರ್ ಮದುವೆಯಲ್ಲಿ ರಾಹುಲ್ ಗಾಂಧಿ
ಸ್ವರಾ ಭಾಸ್ಕರ್ ಮದುವೆಯಲ್ಲಿ ರಾಹುಲ್ ಗಾಂಧಿ
Updated on: 

ನವದೆಹಲಿ: ಇತ್ತೀಚೆಗಷ್ಟೇ ದಾಪಂತ್ಯ ಜೀವನಕ್ಕೆ ಕಾಲಿಟ್ಟಿದ್ದ ಖ್ಯಾತ ನಟಿ ಸ್ವರಾ ಭಾಸ್ಕರ್ ಹಾಗೂ ರಾಜಕಾರಣಿ ಫಹಾದ್ ಅಹ್ಮದ್ ಅವರ ಮದುವೆ ಆರತಕ್ಷತೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಜರಾಗಿ ನವದಂಪತಿಗಳಿಗೆ ಶುಭ ಕೋರಿದ್ದಾರೆ.

ನಿನ್ನೆ ದೆಹಲಿಯಲ್ಲಿ ಆಯೋಜನೆಯಾಗಿದ್ದ ಮದುವೆಯ ಆರತಕ್ಷತೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿದ್ದರು. ರಾಹುಲ್ ಗಾಂಧಿ ಜೊತೆ ಹಲವು ಕಾಂಗ್ರೆಸ್ ಮುಖಂಡರೂ ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ನಟಿ ಮತ್ತು ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ಅವರು ಟಿಎಂಸಿ ನಾಯಕ ಡೆರೆಕ್ ಒ'ಬ್ರಿಯಾನ್ ಮತ್ತು ಶಶಿ ತರೂರ್‌ ಪಾಲ್ಗೊಂಡಿದ್ದರು.

ಇನ್ನು ಮದುವೆಯಲ್ಲಿ ಪಾಲ್ಗೊಂಡ ಕುರಿತು ರಾಹುಲ್ ಗಾಂಧಿ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಅಪ್ಲೋಡ್ ಮಾಡಿ ನವದಂಪತಿಗಳಿಗೆ ಶುಭಕೋರಿದ್ದಾರೆ. ಅಲ್ಲದೆ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಬಿಳಿ ಕುರ್ತಾ ಮತ್ತು ಪೈಜಾಮಾ ಧರಿಸಿದ್ದರು. ಸ್ವರಾ ಗುಲಾಬಿ ಮತ್ತು ಗೋಲ್ಡನ್ ಲೆಹೆಂಗಾದಲ್ಲಿ ಕಾಣಿಸಿಕೊಂಡರೆ, ಫಹಾದ್ ಕೆನೆ ಬಣ್ಣದ ಶೇರ್ವಾನಿ ಮತ್ತು ಬಿಳಿ ಪೈಜಾಮಾವನ್ನು ಧರಿಸಿದ್ದರು. ಕ್ಲಿಪ್‌ನಲ್ಲಿ ರಾಹುಲ್ ಜೊತೆ ಸ್ವರಾ ಅವರ ತಾಯಿ ನಗುತ್ತಲೇ ಮಾತನಾಡಿದರು.

ಇನ್ನು ರಾಹುಲ್ ಗಾಂಧಿ ಸ್ವರಾ ಅವರನ್ನು ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ, ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಸ್ವರಾ ಭಾಸ್ಕರ್ ಪಾಲ್ಗೊಂಡಿದ್ದರು.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com