ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್

Prajwal Revanna: ಅತಿದೊಡ್ಡ Sex Scandal, ತಕ್ಷಣ ಪ್ರಜ್ವಲ್ ರೇವಣ್ಣ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು- Swathi Maliwal ಕಿಡಿ!

ಸೆಕ್ಸ್ ವಿಡಿಯೋ ಹಗರಣದ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸರಿ.. ಆತನನ್ನು ಭಾರತ ಸರ್ಕಾರ ಹಿಡಿದು ತಂದು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಕಿಡಿಕಾರಿದ್ದಾರೆ.

ನವದೆಹಲಿ: ಸೆಕ್ಸ್ ವಿಡಿಯೋ ಹಗರಣದ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಸರಿ.. ಆತನನ್ನು ಭಾರತ ಸರ್ಕಾರ ಹಿಡಿದು ತಂದು ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್ ಕಿಡಿಕಾರಿದ್ದಾರೆ.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಹಗರಣದ ಕುರಿತು ದೆಹಲಿಯಲ್ಲಿ ಮಾತನಾಡಿದ ಸ್ವಾತಿ ಮಳಿವಾಳ್, 'ಕರ್ನಾಟಕದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ 3 ಸಾವಿರ ಸೆಕ್ಸ್ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆತ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮೊಮ್ಮಗ.. ಅವರ ಮನೆಯಲ್ಲಿ ಸಾಕಷ್ಟು ಬಡ ಮತ್ತು ಅಮಾಯಕ ಮಹಿಳೆಯರು ಕೆಲಸ ಮಾಡುತ್ತಿದ್ದರು. ಪಕ್ಷದ ಕಾರ್ಯಕರ್ತೆಯರು ಅವರ ಮನೆಗೆ ಆಗಮಿಸುತ್ತಿದ್ದರು. ಇಂತಹವರೆನ್ನೆಲ್ಲಾ ಬೆದರಿಸಿ, ತಮ್ಮ ಪ್ರಭಾವ ಬಳಸಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದಿದ್ದಾರೆ.

ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಲ್
ಪ್ರಜ್ವಲ್ ರೇವಣ್ಣ ವಿರುದ್ಧ ಜೆಡಿಎಸ್ ಕ್ರಮ ಕೈಗೊಳ್ಳಲಿದೆ: ಹೆಚ್.ಡಿ.ಕುಮಾರಸ್ವಾಮಿ

ಅಲ್ಲದೆ ಕೆಲವು ಸರ್ಕಾರಿ ಮಹಿಳಾ ಉದ್ಯೋಗಿಗಳೂ ಕೂಡ ಇವರ ಒತ್ತಡ, ಬೆದರಿಕೆ, ಪ್ರಭಾವಕ್ಕೆ ಹೆದರಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಈ ವ್ಯಕ್ತಿ ಅವರ ಮೇಲೆ ಅತ್ಯಾಚಾರವನ್ನಷ್ಟೇ ಮಾಡಿಲ್ಲ.. ಅತ್ಯಾಚಾರದ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಆ ವಿಡಿಯೋಗಳನ್ನು ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿ ಅವರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ'.

ಈ ವಿಚಾರ ಕರ್ನಾಟಕದ ಬಿಜೆಪಿ ನಾಯಕರಿಗೂ ತಿಳಿದಿದ್ದು, ಆದರೂ ಕೂಡ ಅವರಿಗೆ ಚುನಾವಣಾ ಟಿಕೆಟ್ ನೀಡಿದ್ದಾರೆ. ಮತದಾನ ಮುಕ್ತಾಯದ ಬಳಿಕ ಈ ಅಸಹ್ಯಕರ ವ್ಯಕ್ತಿಗೆ ಟಿಕೆಟ್ ನೀಡಿರುವುದು ಗೊತ್ತಾಗಿದೆ. ಆದರೆ ಈತ ಯಾರ ಸೂಚನೆ ಮೇರೆಗೆ ಈತ ದೇಶ ತೊರೆದಿದ್ದಾನೆ?...ಈ ವ್ಯಕ್ತಿ ಜಗತ್ತಿನ ಯಾವ ಮೂಲೆಯಲ್ಲಿ ಅಡಗಿದ್ದರೂ ಆತನನ್ನು ದೇಶಕ್ಕೆ ಕರೆತಂದು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನಾನು ಭಾರತ ಸರ್ಕಾರಕ್ಕೆ ಮನವಿ ಮಾಡುತ್ತೇನೆ.

ಅಲ್ಲದೆ ಆತನ ವಿರುದ್ಧ ನಾನು ಭಾರತದ ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ, ಈ ಪ್ರಕರಣವು ತುಂಬಾ ಅಸಹ್ಯಕರವಾಗಿದ್ದು, ಇದು ಅತೀ ದೊಡ್ಡ ಲೈಂಗಿಕ ಹಗರಣವಾಗಿದೆ. ಕೂಡಲೇ ಆತನನ್ನು ಚುನಾವಣೆಯಿಂದ ಅನರ್ಹಗೊಳಿಸಬೇಕು ಮತ್ತು ಆ ಕ್ಷೇತ್ರದಲ್ಲಿ ಮರು ಮತದಾನ ಮಾಡಬೇಕು ಎಂದು ಸ್ವಾತಿ ಮಳಿವಾಲ್ ಆಗ್ರಹಿಸಿದರು.

Related Stories

No stories found.

Advertisement

X
Kannada Prabha
www.kannadaprabha.com