
ಹೈದರಾಬಾದ್: ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟಿ ಪೂನಂ ಕೌರ್ ಕಿಡಿಕಾರಿದ್ದು, ನಾವು ಹೀಗೆಯೇ ಇದ್ದರೆ ಈತ ಕೂಡ ತನ್ನ ಪ್ರಭಾವ ಬಳಸಿ ಬಚಾವ್ ಆಗ್ತಾರೆ ಎಂದು ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಲೈವ್ ವಿಡಿಯೋ ಮಾಡಿರುವ ನಟಿ ಪೂನಂ ಕೌರ್, 'ಸಚಿವರ ಮಗ ಹುಡುಗಿಯ ಫೋನ್ ಕದ್ದಾಲಿಕೆ ಮಾಡಿದ್ದಾನೆ. ಮತ್ತೊಬ್ಬ ಸಚಿವರ ಮಗ ಅಂಕಿತಾ ಎಂಬ ಹುಡುಗಿಯನ್ನು ಬೆಟ್ಟದಿಂದ ತಳ್ಳಿದ. ಮತ್ತೊಬ್ಬ ಹುಡುಗಿಗೆ ಸಚಿವರ ಮಗ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ. ಮತ್ತೊಬ್ಬ ಸಚಿವ ಬಾಲಕಿಯ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿ ಪರಾರಿಯಾಗಿದ್ದಾನೆ ಎಂಬ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ಇದೀಗ ಮಾಜಿ ಸಚಿವರ ಮಗನ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬಂದಿದೆ'.
'ಆತ 2,800ಕ್ಕೂ ಹೆಚ್ಚು ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಅವರೆಲ್ಲರ ವಿಡಿಯೋ ಮಾಡಿರುವ ಬಗ್ಗೆ ಸಾವಿರಾರು ವಿಡಿಯೋಗಳು ಹರಿದಾಡುತ್ತಿವೆ. ಆತ ಹಣ ಮತ್ತು ಅಧಿಕಾರದಿಂದ ತಪ್ಪಿಸಿಕೊಂಡು ಜರ್ಮನಿಗೆ ಪರಾರಿಯಾಗಿದ್ದಾನೆ. ಪ್ರತಿ ಮಹಿಳೆಗೆ, ಪ್ರತಿ ಹೆಣ್ಣು ಮಗುವಿಗೆ, ಪ್ರತಿ ಸಹೋದರನಿಗೆ ನಾನು ಎರಡು ಕೈಗಳನ್ನು ಮುಗಿದು ಮನವಿ ಮಾಡುತ್ತೇನೆ.
ನಿಮ್ಮ ಪ್ರೀತಿಯ ಮಗಳು ಮತ್ತು ಸಹೋದರಿಗೆ ನ್ಯಾಯ ಸಿಗಬೇಕಾದರೆ. ಮಹಿಳೆಯರು ಎಚ್ಚೆತ್ತುಕೊಳ್ಳಬೇಕಿದೆ. ಯಾರು ನಿಜ ಅರ್ಥದಲ್ಲಿ ಮಹಿಳಾ ಶಕ್ತಿಯನ್ನು ಗೌರವಿಸುತ್ತಾರೋ ಅವರಿಗೆ ಮಾತ್ರ ಮತ ನೀಡಬೇಕು. ಹೆಣ್ಣನ್ನು ಹೆಣ್ಣೆಂದು ಪರಿಗಣಿಸುವ ವ್ಯಕ್ತಿಗೆ ಮತ ಹಾಕಬೇಕು'.
ಇಂಥವರು ನಿಮ್ಮ ಮತ ಪಡೆದು ಅಧಿಕಾರಕ್ಕೆ ಬಂದರೆ ನಮ್ಮ ಮನೆ ಹೆಣ್ಣುಮಕ್ಕಳ ಗತಿಯೇನು?. ಅಲ್ಲದೇ ಜನ ತಿರುಗಿ ಬೀಳುವವರಿಗೂ ಇಂತವರನ್ನು ಶಿಕ್ಷಿಸಲು ಸಾಧ್ಯವೇ ಇಲ್ಲ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರಿಗೆ ಮತ ಹಾಕಬೇಡಿ ಎಂದು ವಿಡಿಯೋ ಮೂಲಕ ನಟಿ ಪೂನಂ ಕೌರ್ ಮನವಿ ಮಾಡಿಕೊಂಡಿದ್ದಾರೆ.
Advertisement