ದೆಹಲಿ: ಅಪ್ರಾಪ್ತ ಸ್ನೇಹಿತರಿಂದ ಬಾಲಕನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ!

ದಕ್ಷಿಣ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ಮೂವರು ಸ್ನೇಹಿತರು, 14 ವರ್ಷದ ಬಾಲಕನೊಬ್ಬನಿಗೆ ಶೂ ನೆಕ್ಕುವಂತೆ ಮಾಡಿ, ಆತನೊಂದಿಗೆ "ಅಸ್ವಾಭಾವಿಕ ಲೈಂಗಿಕ ಕ್ರಿಯೆ" ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ದಕ್ಷಿಣ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ಮೂವರು ಸ್ನೇಹಿತರು, 14 ವರ್ಷದ ಬಾಲಕನೊಬ್ಬನಿಗೆ ಶೂ ನೆಕ್ಕುವಂತೆ ಮಾಡಿ, ಆತನೊಂದಿಗೆ "ಅಸ್ವಾಭಾವಿಕ ಲೈಂಗಿಕ ಕ್ರಿಯೆ" ನಡೆಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಭಾನುವಾರ ರಾತ್ರಿ ಈ ಘಟನೆ ಬೆಳಕಿಗೆ ಬಂದಿದ್ದು, ಮೂವರು ಬಾಲಾಪರಾಧಿಗಳಲ್ಲಿ ಒಬ್ಬ, ಬಾಲಕನ ತಾಯಿಗೆ ವೀಡಿಯೊವನ್ನು ಕಳುಹಿಸಿದ್ದು, ಅವರು ಸ್ಥಳೀಯ ಪೊಲೀಸರು ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ವಿಡಿಯೋದಲ್ಲಿ ಬಾಲಕನಿಗೆ ಚಾಕುವಿನಿಂದ ಚುಚ್ಚುವುದಾಗಿ ಬೆದರಿಕೆ ಹಾಕಿ, ಮೊದಲು ಅವರು ಬೂಟುಗಳನ್ನು ನೆಕ್ಕುವಂತೆ ಮಾಡಿದ್ದಾರೆ. ನಂತರ "ಅಸ್ವಾಭಾವಿಕ ಲೈಂಗಿಕ ಕ್ರಿಯೆ" ನಡೆಸಲು ಒತ್ತಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕನ ತಾಯಿ ಭಾನುವಾರ ರಾತ್ರಿ ಪಿಸಿಆರ್ ಕರೆ ಮಾಡಿ,"ಕೆಲವು ಹುಡುಗರು ತನ್ನ 14 ವರ್ಷದ ಮಗನೊಂದಿಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದಾರೆ ಮತ್ತು ಅದನ್ನು ವಿಡಿಯೋ ಮಾಡಿ, ಅದರ ಕ್ಲಿಪ್ ಅನ್ನು ನನ್ನ ಮೊಬೈಲ್ ಗೆ  ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿದರು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. . 
ಬಾಲಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕೌನ್ಸೆಲಿಂಗ್ ಮಾಡಲಾಗಿದೆ. ಸಂತ್ರಸ್ತ ಬಾಲಕನ ಪ್ರಕಾರ, ಶನಿವಾರ ಸಂಜೆ 6.30 ರ ಸುಮಾರಿಗೆ ಹೌಜ್ ಖಾಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಆಟವಾಡುತ್ತಾ ಮನೆಗೆ ಹೋಗುತ್ತಿದ್ದ ವೇಳೆ 12 ರಿಂದ 14 ವರ್ಷ ವಯಸ್ಸಿನ ಆತನ ಮೂವರು ಸ್ನೇಹಿತರು ತಮ್ಮೊಂದಿಗೆ ಪ್ರತ್ಯೇಕ ಸ್ಥಳಕ್ಕೆ ಬರುವಂತೆ ಬಾಲಕನಿಗೆ ಒತ್ತಾಯಿಸಿದ್ದಾರೆ.

"ಆರೋಪಿಗಳಲ್ಲಿ ಒಬ್ಬ ತರಕಾರಿ ಕತ್ತರಿಸುವ ಚಾಕನ್ನು ತೋರಿಸಿ, ತನ್ನ ಖಾಸಗಿ ಅಂಗವನ್ನು ಆತನ ಬಾಯಿಗೆ ಹಾಕಿದ್ದಾನೆ. ಇತರರು ತಮ್ಮ ಮೊಬೈಲ್ ಫೋನ್‌ನಲ್ಲಿ ಆ ಕೃತ್ಯವನ್ನು ಸೆರೆಹಿಡಿದಿದ್ದಾರೆ" ಎಂದು ಇನ್ನೊಬ್ಬ ಅಧಿಕಾರಿ ತಿಳಿಸಿದ್ದಾರೆ.

ಕೃತ್ಯದ ಬಗ್ಗೆ ಯಾರಿಗಾದರೂ ತಿಳಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆರೋಪಿ, ಬಾಲಕನಿಗೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಭಯದಿಂದ, ಬಾಲಕ ತನ್ನ ಕಷ್ಟವನ್ನು ಪೋಷಕರಿಗೆ ಹೇಳಿಲ್ಲ.

ಬಾಲಕನ ಹೇಳಿಕೆಯ ಆಧಾರದ ಮೇಲೆ, ಹೌಜ್ ಖಾಸ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಮತ್ತು ಪೋಕ್ಸೊ ಕಾಯ್ದೆಯ 12 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com