ಕರೌಲಿಯಲ್ಲಿ ಟ್ರಕ್-ಬೊಲೆರೋ ನಡುವೆ ಭೀಕರ ಅಪಘಾತ: 6 ಮಹಿಳೆಯರು, 2 ಮಕ್ಕಳು ಸೇರಿದಂತೆ 9 ಮಂದಿ ದುರ್ಮರಣ

ಕರೌಲಿ-ಮಂದರಯಾಲ್ ರಸ್ತೆಯಲ್ಲಿ ಸಂಜೆ 5 ಗಂಟೆ ಸುಮಾರಿಗೆ ಬೊಲೆರೋ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ.
ರಸ್ತೆ ಅಪಘಾತದ ದೃಶ್ಯ
ರಸ್ತೆ ಅಪಘಾತದ ದೃಶ್ಯ
Updated on: 

ರಾಜಸ್ಥಾನದ ಕರೌಲಿಯಲ್ಲಿ ಟ್ರಕ್ ಮತ್ತು ಬೊಲೆರೋ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ 9 ಜನರು ಸಾವನ್ನಪ್ಪಿದ್ದು, 4 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದಲ್ಲಿ ಆರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

ಮಾಹಿತಿ ಪ್ರಕಾರ, ಕರೌಲಿ-ಮಂದರಯಾಲ್ ರಸ್ತೆಯಲ್ಲಿ ಸಂಜೆ 5 ಗಂಟೆ ಸುಮಾರಿಗೆ ಬೊಲೆರೋ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿದೆ. ಭೀಕರ ರಸ್ತೆ ಅಪಘಾತದಲ್ಲಿ ಬೊಲೆರೊ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ದುಂಡಾಪುರ ತಿರುವಿನ ಬಳಿ ಈ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ರಕ್ಷಣಾ ತಂಡಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ಅಪಘಾತದ ಸಮಯದಲ್ಲಿ, ಪೊಲೀಸರು ಸ್ಥಳೀಯ ಜನರ ಸಹಾಯದಿಂದ ಬೊಲೆರೋದಿಂದ ಮೃತ ದೇಹಗಳನ್ನು ಹೊರತೆಗೆದರು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಒಟ್ಟು 13 ಮಂದಿಯನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಅದರಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಉಳಿದ 4 ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ರಸ್ತೆ ಅಪಘಾತದ ದೃಶ್ಯ
ಮತ್ತೊಂದು ಹುಚ್ಚಾಟ: ತುಂಬಿ ಹರಿಯುತ್ತಿದ್ದ Tamhini Ghat ಜಲಪಾತಕ್ಕೆ ಬಿದ್ದು ಕೊಚ್ಚಿ ಹೋದ ಯುವಕ; video

ಬೊಲೆರೋ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದೆ ಎಂದು ಕರೌಲಿ ಎಸ್‌ಪಿ ಬ್ರಿಜೇಶ್ ಜ್ಯೋತಿ ಉಪಾಧ್ಯಾಯ ಹೇಳಿದ್ದಾರೆ. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದು, 4 ಮಂದಿ ಚಿಂತಾಜನಕ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಮೃತರನ್ನು ಗುರುತಿಸಿ ಅವರ ಕುಟುಂಬಗಳಿಗೆ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com