ಬಿಜೆಪಿ, ಕಾಂಗ್ರೆಸ್ ಸೇರಿದಂತೆ 8 ಅಭ್ಯರ್ಥಿಗಳಿಂದ EVM ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಮನವಿ

ಇವಿಎಂ ಟ್ಯಾಂಪರಿಂಗ್ ಅಥವಾ ಮಾರ್ಪಾಡುಗಳನ್ನು ಪರಿಶೀಲಿಸುವಂತೆ ಕೋರಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ನೊಂದ ಅಭ್ಯರ್ಥಿಗಳು ಚುನಾವಣಾ ಆಯೋಗವು ಎಂಟು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಇವಿಎಂ ಸಾಂದರ್ಭಿಕ ಚಿತ್ರ
ಇವಿಎಂ ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಜೂನ್ 4 ರಂದು ಲೋಕಸಭಾ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಇವಿಎಂಗಳಲ್ಲಿ ಅಳವಡಿಸಲಾಗಿರುವ ಮೈಕ್ರೋ ಕಂಟ್ರೋಲರ್ ಚಿಪ್‌ಗಳಲ್ಲಿ ಟ್ಯಾಂಪರಿಂಗ್ ಅಥವಾ ಮಾರ್ಪಾಡುಗಳನ್ನು ಪರಿಶೀಲಿಸುವಂತೆ ಕೋರಿ ಬಿಜೆಪಿ ಮತ್ತು ಕಾಂಗ್ರೆಸ್ ಸೇರಿದಂತೆ ನೊಂದ ಅಭ್ಯರ್ಥಿಗಳು ಚುನಾವಣಾ ಆಯೋಗವು ಎಂಟು ಅರ್ಜಿಗಳನ್ನು ಸಲ್ಲಿಸಲಾಗಿದೆ.

ವಿದ್ಯುನ್ಮಾನ ಮತಯಂತ್ರಗಳ ದುರ್ಬಳಕೆಯ ಅನುಮಾನ "ಆಧಾರರಹಿತ" ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್, ಹಳೆಯ ಪೇಪರ್ ಬ್ಯಾಲೆಟ್ ಸಿಸ್ಟಮ್ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ಏಪ್ರಿಲ್ 26 ರಂದು ತಿರಸ್ಕರಿಸಿತ್ತು. ಆದರೆ ಅದೇ ಸಮಯದಲ್ಲಿ, ಸರ್ವೋಚ್ಚ ನ್ಯಾಯಾಲಯವು ಮತದಾನದ ಫಲಿತಾಂಶಗಳಲ್ಲಿ ಎರಡನೇ ಮತ್ತು ಮೂರನೇ ಸ್ಥಾನ ಗಳಿಸಿದ ಅಭ್ಯರ್ಥಿಗಳಿಗೆ ಒಂದು ಅವಕಾಶವನ್ನು ನೀಡಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶೇ. 5 ರಷ್ಟು ಇವಿಎಂಗಳಲ್ಲಿ ಅಳವಡಿಸಲಾಗಿರುವ ಮೈಕ್ರೋ-ಕಂಟ್ರೋಲರ್ ಚಿಪ್‌ಗಳನ್ನು ಲಿಖಿತವಾಗಿ ಪರಿಶೀಲಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿತ್ತು.

ಇದೀಗ ಬಿಜೆಪಿಯ ಅಹಮದ್‌ನಗರ(ಮಹಾರಾಷ್ಟ್ರ) ಅಭ್ಯರ್ಥಿ ಸುಜಯ್ ವಿಖೆ-ಪಾಟೀಲ್ ಅವರು 40 ಮತಗಟ್ಟೆಗಳಲ್ಲಿ ಇವಿಎಂ ಯಂತ್ರಗಳ ಪರಿಶೀಲನೆಗೆ ಕೋರಿ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದಾರೆ. ವಿಖೆ ಪಾಟೀಲ್ ಅವರು ಎನ್‌ಸಿಪಿ(ಶರದ್ ಪವಾರ್) ಬಣದ ನೀಲೇಶ್ ಲಂಕೆ ವಿರುದ್ಧ ಸೋತಿದ್ದಾರೆ.

ಇವಿಎಂ ಸಾಂದರ್ಭಿಕ ಚಿತ್ರ
ಮುಂಬೈ ವಾಯುವ್ಯ ಲೋಕಸಭಾ ಸ್ಥಾನ ಮೊಬೈಲ್ ಫೋನ್-ಇವಿಎಂ ಲಿಂಕ್ , ಮಾಧ್ಯಮ ವರದಿ ನಿರಾಕರಿಸಿದ ಚುನಾವಣಾಧಿಕಾರಿ!

ಚುನಾವಣಾ ಆಯೋಗ ಹಂಚಿಕೊಂಡ ಮಾಹಿತಿಯ ಪ್ರಕಾರ ವೈಎಸ್‌ಆರ್‌ಸಿಪಿ ಮತ್ತು ಡಿಎಂಡಿಕೆ ಅಭ್ಯರ್ಥಿ ಕೂಡ ಇವಿಎಂ ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಒಟ್ಟು ಆರು ರಾಜ್ಯಗಳ ಎಂಟು ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಇವಿಎಂ ಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿದ್ದು, ಒಟ್ಟು 92 ಮತಗಟ್ಟೆಗಳ ಇವಿಎಂ ಪರಿಶೀಲಿಸುವಂತೆ ಮನವಿ ಮಾಡಲಾಗಿದೆ.

ಜೂನ್ 1 ರಂದು ಚುನಾವಣಾ ಆಯೋಗ ಹೊರಡಿಸಿದ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನದ ಪ್ರಕಾರ, ಎರಡನೇ ಅಥವಾ ಮೂರನೇ ಸ್ಥಾನ ಪಡೆಯುವ ಅಭ್ಯರ್ಥಿಗಳು ಇವಿಎಂಗಳ ಪರಿಶೀಲನೆಗಾಗಿ ಅರ್ಜಿ ಸಲ್ಲಿಸಲು ಪ್ರತಿ ಇವಿಎಂ ಸೆಟ್‌ಗೆ 47,200 ರೂ. ಪಾವತಿಸಬೇಕಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com