ಕೇಜ್ರಿವಾಲ್‌ ಪತ್ನಿಯನ್ನು ಬಿಹಾರ ಮಾಜಿ ಸಿಎಂ ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿಯನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಗೆ ಹೋಲಿಸಿದ್ದಾರೆ ಮತ್ತು ಅವರು (ಸುನೀತಾ ಕೇಜ್ರಿವಾಲ್) ಬಹುಶಃ ತಮ್ಮ ಪತಿಯ (ಕೇಜ್ರಿವಾಲ್) ಹುದ್ದೆಯನ್ನು ಅಲಂಕರಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಸುನೀತಾ ಕೇಜ್ರಿವಾಲ್ - ಹರ್ದೀಪ್ ಸಿಂಗ್ ಪುರಿ - ರಾಬ್ರಿ ದೇವಿ
ಸುನೀತಾ ಕೇಜ್ರಿವಾಲ್ - ಹರ್ದೀಪ್ ಸಿಂಗ್ ಪುರಿ - ರಾಬ್ರಿ ದೇವಿ
Updated on

ನವದೆಹಲಿ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿಯನ್ನು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಗೆ ಹೋಲಿಸಿದ್ದಾರೆ ಮತ್ತು ಅವರು (ಸುನೀತಾ ಕೇಜ್ರಿವಾಲ್) ಬಹುಶಃ ತಮ್ಮ ಪತಿಯ (ಕೇಜ್ರಿವಾಲ್) ಹುದ್ದೆಯನ್ನು ಅಲಂಕರಿಸಲು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ದೆಹಲಿ ಬಿಜೆಪಿ ಚುನಾವಣಾ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನೀವು ಹೆಸರಿಸುತ್ತಿರುವ ಮೇಡಂ ಬಹುಶಃ ಬಿಹಾರದಲ್ಲಿ ರಾಬ್ರಿ ದೇವಿ ಮಾಡಿದಂತೆ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲು ತಯಾರಿ ನಡೆಸುತ್ತಿದ್ದಾರೆ' ಎಂದು ತಿಳಿಸಿದರು.

ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಕುರಿತಾದ ಪ್ರಶ್ನೆಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಪ್ರತಿಕ್ರಿಯಿಸಿದರು.

ಸುನೀತಾ ಕೇಜ್ರಿವಾಲ್ - ಹರ್ದೀಪ್ ಸಿಂಗ್ ಪುರಿ - ರಾಬ್ರಿ ದೇವಿ
ಜೈಲಿನಿಂದಲೇ ಸಿಎಂ ಆಡಳಿತ! ಅರವಿಂದ್ ಕೇಜ್ರಿವಾಲ್ ಉತ್ತರಾಧಿಕಾರಿ ಯಾರು? ಪತ್ನಿ ಸುನೀತಾಗೆ ಮುಖ್ಯಮಂತ್ರಿ ಸ್ಥಾನ?

ಇದಕ್ಕೂ ಮುನ್ನ ಸುನೀತಾ ಕೇಜ್ರಿವಾಲ್ ಅವರು ವಾಟ್ಸಾಪ್ ಅಭಿಯಾನವನ್ನು ಪ್ರಾರಂಭಿಸಿದರು. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿಯಿಂದ ಬಂಧಿತರಾಗಿರುವ ತಮ್ಮ ಪತಿ ಅರವಿಂದ ಕೇಜ್ರಿವಾಲ್ ಅವರನ್ನು ಬೆಂಬಲಿಸುವಂತೆ ಜನರನ್ನು ಒತ್ತಾಯಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀತಾ, ತಮ್ಮ ಪತಿ ದೇಶದ ಅತ್ಯಂತ ಭ್ರಷ್ಟ ಮತ್ತು ಸರ್ವಾಧಿಕಾರಿ ಶಕ್ತಿಗಳಿಗೆ ಸವಾಲು ಹಾಕಿದ್ದಾರೆ ಮತ್ತು ಜನರು ತಮ್ಮ ಆಶೀರ್ವಾದ ಮತ್ತು ಪ್ರಾರ್ಥನೆಯ ಮೂಲಕ ಅವರನ್ನು ಬೆಂಬಲಿಸುವಂತೆ ಕೇಳಿಕೊಂಡರು.

ಸುನೀತಾ ಕೇಜ್ರಿವಾಲ್ - ಹರ್ದೀಪ್ ಸಿಂಗ್ ಪುರಿ - ರಾಬ್ರಿ ದೇವಿ
ಕೇಜ್ರಿವಾಲ್ ಫೋನ್‌ನಿಂದ AAP ಲೋಕಸಭಾ ಚುನಾವಣೆ ಕಾರ್ಯತಂತ್ರದ ವಿವರ ಪಡೆಯಲು ED ಯತ್ನ: ಅತಿಶಿ ಆರೋಪ

ದೆಹಲಿಯಲ್ಲಿ ಈಗ ರದ್ದುಗೊಂಡಿರುವ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21 ರಂದು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿತ್ತು.

ಗುರುವಾರ ನ್ಯಾಯಾಲಯವು ಅವರನ್ನು ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com