ಮುಂದಿನ ಪೀಳಿಗೆಗೆ ಬಿಟ್ಟುಕೊಡುವ ಬದಲು ಮರಳಿ ಪ್ರಧಾನಿ ಹುದ್ದೆಗೇರಲು ಮೋದಿ ಉತ್ಸುಕ: ಉದ್ಧವ್ ಠಾಕ್ರೆ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದು, ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಬದಲು ಪ್ರಧಾನಿ ಹುದ್ದೆಯನ್ನು ಮರಳಿ ಪಡೆಯಲು ಅವರು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Updated on: 

ಥಾಣೆ: ತಮ್ಮನ್ನು ಮತ್ತು ಎನ್‌ಸಿಪಿ (ಎಸ್‌ಪಿ) ಅಧ್ಯಕ್ಷ ಶರದ್ ಪವಾರ್ ಅವರನ್ನು ಪದೇ ಪದೆ ಗುರಿಯಾಗಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ತೀವ್ರ ವಾಗ್ದಾಳಿ ನಡೆಸಿದ್ದು, ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಬದಲು ಪ್ರಧಾನಿ ಹುದ್ದೆಯನ್ನು ಮರಳಿ ಪಡೆಯಲು ಅವರು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.

ಗುರುವಾರ ಥಾಣೆಯಲ್ಲಿ ಹಾಲಿ ಸಂಸದ ಮತ್ತು ತಮ್ಮ ಪಕ್ಷದ ಅಭ್ಯರ್ಥಿ ರಾಜನ್ ವಿಚಾರೆ ಅವರ ಪರವಾಗಿ ಪ್ರಚಾರ ಮಾಡಲು ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಈ ಸ್ಪರ್ಧೆಯು ನಿಷ್ಠೆ ಮತ್ತು ದ್ರೋಹದ ನಡುವಿನ ಘರ್ಷಣೆ ಎಂದು ಕರೆದರು.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯು ಥಾಣೆ ಲೋಕಸಭಾ ಕ್ಷೇತ್ರಕ್ಕೆ ನರೇಶ್ ಮ್ಹಾಸ್ಕೆ ಅವರನ್ನು ಕಣಕ್ಕಿಳಿಸಿದೆ. ಮುಂಬೈನ ಆರು ಸ್ಥಾನಗಳು ಸೇರಿದಂತೆ 12 ಇತರ ಸ್ಥಾನಗಳಿಗೆ ಮೇ 20ರಂದು ಐದನೇ ಹಂತದಲ್ಲಿ ಇಲ್ಲಿ ಮತದಾನ ನಡೆಯಲಿದೆ.

ಉದ್ಧವ್ ಠಾಕ್ರೆ
ನಮ್ಮ ಹಿಂದುತ್ವ ಒಲೆ ಹೊತ್ತಿಸಿದರೆ, ಬಿಜೆಪಿಯ ಹಿಂದುತ್ವ ಮನೆಗಳನ್ನು ಹೊತ್ತಿ ಉರಿಸುತ್ತೆ: ಉದ್ಧವ್ ಠಾಕ್ರೆ

2022ರಲ್ಲಿ ಮೂಲ ಶಿವಸೇನೆಯನ್ನು ವಿಭಜಿಸಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಈ ಪ್ರದೇಶದ ಪ್ರಭಾವಿ ನಾಯಕ ಶಿಂಧೆ ಅವರಿಗೆ ಥಾಣೆಯಲ್ಲಿನ ಸ್ಪರ್ಧೆಯು ಪ್ರತಿಷ್ಠೆಯ ಕಣವಾಗಿದೆ.

ಮೋದಿ ಅವರು ತಮ್ಮ ವಾಕ್ಚಾತುರ್ಯದ ಮೂಲಕ ವಿವಾದಗಳನ್ನು ಹುಟ್ಟುಹಾಕುತ್ತಿದ್ದಾರೆ ಮತ್ತು ಬಿಜೆಪಿ ಬಹುಮತ ಪಡೆಯುವ ಭರವಸೆಯಿಂದ ಕುಟುಂಬ ರಾಜಕಾರಣವನ್ನು ಮುಂದಿಟ್ಟು ಪ್ರಚಾರ ಮಾಡುತ್ತಿದೆ. ಮುಂದಿನ ಪೀಳಿಗೆಗೆ ದಾರಿ ಮಾಡಿಕೊಡುವ ಬದಲು ಪ್ರಧಾನಿ ಹುದ್ದೆಯನ್ನು ಮರಳಿ ಪಡೆಯಲು ಮೋದಿ ಉತ್ಸುಕರಾಗಿದ್ದಾರೆ ಎಂದು ಆರೋಪಿಸಿದರು.

ತಮ್ಮ ಇತ್ತೀಚಿನ ಭಾಷಣಗಳಲ್ಲಿ ಮೋದಿ ಅವರು ಠಾಕ್ರೆಯವರ ಪಕ್ಷವನ್ನು 'ನಕಲಿ ಸೇನಾ' ಎಂದು ಕರೆದರು ಮತ್ತು ಪವಾರ್ ಅವರನ್ನು 'ಭತಕ್ತಿ ಆತ್ಮ' (ಅಲೆದಾಡುವ ಆತ್ಮ) ಎಂದು ಬಣ್ಣಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com