ಟರ್ಕಿಯ ಭಾರತದ ನೂತನ ರಾಯಭಾರಿಯಾಗಿ ಮುಕ್ತೇಶ್ ಕುಮಾರ್ ಪರದೇಶಿ ನೇಮಕ

ಪರದೇಶಿ ಅವರು, 1991-ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದು,, ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (MEA) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಶೀಘ್ರದಲ್ಲಿಯೇ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.
ಮುಕ್ತೇಶ್ ಕುಮಾರ್ ಪರದೇಶಿ
ಮುಕ್ತೇಶ್ ಕುಮಾರ್ ಪರದೇಶಿ
Updated on

ನವದೆಹಲಿ: ಮಧ್ಯಪ್ರಾಚ್ಯ ಸೇರಿದಂತೆ ಪ್ರಾದೇಶಿಕ ಬಿಕ್ಕಟ್ಟುಗಳ ಪರಿಹಾರದಲ್ಲಿ ಭಾರತ ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿರುವಂತೆಯೇ ಅನುಭವಿ ರಾಯಭಾರಿ ಮುಕ್ತೇಶ್ ಕುಮಾರ್ ಪರದೇಶಿ ಅವರನ್ನು ಟರ್ಕಿಯ ಭಾರತದ ನೂತನ ರಾಯಭಾರಿಯಾಗಿ ನೇಮಿಸಲಾಗಿದೆ.

ಪರದೇಶಿ ಅವರು, 1991-ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವಾ ಅಧಿಕಾರಿಯಾಗಿದ್ದು,, ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (MEA) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಶೀಘ್ರದಲ್ಲಿಯೇ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ ಎಂದು MEA ಹೇಳಿಕೆಯಲ್ಲಿ ತಿಳಿಸಿದೆ.

ಮುಕ್ತೇಶ್ ಕುಮಾರ್ ಪರದೇಶಿ
ಮಧ್ಯಪ್ರಾಚ್ಯ ಸಂಘರ್ಷ ಮುಂದುವರಿದರೆ ತೈಲ ಬೆಲೆ ಏರುತ್ತದೆ: ವಿದೇಶಾಂಗ ಸಚಿವ ಜೈಶಂಕರ್

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತ ಯಶಸ್ವಿಯಾಗಿ ಆಯೋಜಿಸಿದ್ದ G20 ಶೃಂಗಸಭೆಯ ಯಶಸ್ವಿ ಹಾಗೂ ಉಕ್ರೇನ್ ಸಂಘರ್ಷದ ಬಗ್ಗೆ ಭಿನ್ನಾಭಿಪ್ರಾಯ ನಿವಾರಿಸುವ ಮೂಲಕ ನಾಯಕರ ಘೋಷಣೆ ತಯಾರಿಕೆಯಲ್ಲಿ

ಪ್ರಮುಖ ಪಾತ್ರ ವಹಿಸಿದ ಉನ್ನತ ಅಧಿಕಾರಿಗಳ ಗುಂಪಿನಲ್ಲಿ ಪರದೇಶಿ ಪ್ರಮುಖರಾಗಿದ್ದರು. ವಿರಂದರ್ ಪಾಲ್ ಅವರ ನಿಧನದ ನಂತರ ಟರ್ಕಿಯ ಭಾರತದ ರಾಯಭಾರಿ ಹುದ್ದೆಯು ಜೂನ್‌ನಿಂದ ತೆರವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com