ವಕ್ಫ್ ಮಸೂದೆ ಇನ್ಮುಂದೆ UMEED ವಿಧೇಯಕ ಎಂದು ಮರುನಾಮಕರಣ: ಕಿರಣ್ ರಿಜಿಜು

"ನಮ್ಮ ಸರ್ಕಾರ ವಕ್ಫ್ ಮಸೂದೆ ಮಂಡಿಸದೇ ಹೋಗಿದ್ದರೆ, ಸಂಸತ್ ಭವನವನ್ನೂ ವಕ್ಫ್ ಆಸ್ತಿ ಎಂದು ಹೇಳಿಕೊಳ್ಳುವ ಸಾಧ್ಯತೆ ಇತ್ತು.." ಎಂದು ಕಿರಣ್‌ ರಿಜಿಜು ಗಂಭೀರ ಆರೋಪ ಮಾಡಿದ್ದಾರೆ.
ಕಿರಣ್ ರಿಜಿಜು
ಕಿರಣ್ ರಿಜಿಜು
Updated on

ನವದೆಹಲಿ: ಪ್ರತಿಪಕ್ಷಗಳ ತೀವ್ರ ಗದ್ದಲ ಹಾಗೂ ವಿರೋಧದ ನಡುವೆಯೂ ಬುಧವಾರ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ಮಸೂದೆ 2024 ಅನ್ನು ಮಂಡಿಸಿದ್ದಾರೆ.

ಲೋಕಸಭೆಯಲ್ಲಿ ವಕ್ಫ್(ತಿದ್ದುಪಡಿ) ಮಸೂದೆ ಮಂಡಿಸಿ ಮಾತನಾಡಿದ ಕಿರಣ್ ರಿಜಿಜು ಅವರು, "ವಕ್ಫ್ ಮಸೂದೆಯನ್ನು ಏಕೀಕೃತ ವಕ್ಫ್ ನಿರ್ವಹಣಾ ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ(UMEED) ಮಸೂದೆ ಎಂದು ಮರುನಾಮಕರಣ ಮಾಡಲಾಗುವುದು" ಎಂದರು.

ಈ ಮಸೂದೆಯು ವಕ್ಫ್ ಆಸ್ತಿಗಳ ಆಡಳಿತವನ್ನು ಸುಧಾರಿಸಲು, ತಂತ್ರಜ್ಞಾನ ಆಧಾರಿತ ನಿರ್ವಹಣೆಯನ್ನು ಪರಿಚಯಿಸಲು, ಸಂಕೀರ್ಣತೆಗಳನ್ನು ಪರಿಹರಿಸಲು ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತದೆ. ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ನಡೆಸಿದ ಸಮಾಲೋಚನಾ ಪ್ರಕ್ರಿಯೆಯು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿಯೇ ಅತಿದೊಡ್ಡ ಪ್ರಕ್ರಿಯೆಯಾಗಿದೆ ಎಂದರು.

"ಭಾರತವು ವಿಶ್ವದಲ್ಲೇ ಅತಿ ಹೆಚ್ಚು ವಕ್ಫ್ ಆಸ್ತಿಗಳನ್ನು ಹೊಂದಿದೆ. ವಕ್ಫ್ ಮಸೂದೆ ಬೆಂಬಲಿಸುವ ಮತ್ತು ವಿರೋಧಿಸುವವರನ್ನು ದೇಶ ಯುಗಯುಗಾಂತರಗಳಿಂದ ನೆನಪಿಸಿಕೊಳ್ಳುತ್ತದೆ. 70 ವರ್ಷಗಳಿಂದ ಮತ ಬ್ಯಾಂಕ್ ರಾಜಕೀಯಕ್ಕಾಗಿ ಮುಸ್ಲಿಮರನ್ನು ದಾರಿ ತಪ್ಪಿಸಲಾಯಿತು; ನೀವು ಅವರನ್ನು ಎಷ್ಟು ದಿನ ದಾರಿ ತಪ್ಪಿಸಲು ಬಯಸುತ್ತೀರಿ. ವಕ್ಫ್ ಆಸ್ತಿಯನ್ನು ಬಡ ಮುಸ್ಲಿಮರಿಗಾಗಿ ಬಳಸಬೇಕು, ಈ ಉದ್ದೇಶವನ್ನು ಸಾಧಿಸಲು ವಕ್ಫ್ ಮಸೂದೆ ಅಗತ್ಯವಿದೆ" ಎಂದರು.

"ಈ ಹಿಂದಿನ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವು, ವಕ್ಫ್ ಕಾನೂನುಗಳಲ್ಲಿ ಭಾರೀ ತಪ್ಪುಗಳನ್ನು ಮಾಡಿದೆ. ಒಂದು ವೇಳೆ ನಮ್ಮ ಸರ್ಕಾರ ಈ ತಿದ್ದುಪಡಿಗಳನ್ನು ಮಾಡದೇ ಹೋಗಿದ್ದರೆ, ಸಂಸತ್ ಭವನವನ್ನೂ ವಕ್ಫ್ ಆಸ್ತಿ ಎಂದು ಹೇಳಿಕೊಳ್ಳುವ ಸಾಧ್ಯತೆ ಇತ್ತು.." ಎಂದು ಕಿರಣ್‌ ರಿಜಿಜು ಗಂಭೀರ ಆರೋಪ ಮಾಡಿದ್ದಾರೆ.

ಕಿರಣ್ ರಿಜಿಜು
Waqf Amendment Bill ಲೋಕಸಭೆಯಲ್ಲಿ ಮಂಡನೆ: ಇದು ಯಾವುದೇ ಧರ್ಮಕ್ಕೆ ಸಂಬಂಧಿಸಿದ್ದಲ್ಲ- ಕೇಂದ್ರ ಸರ್ಕಾರ

"ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ವಕ್ಫ್ ಕಾನೂನುಗಳಿಗೆ ಅನುಮಾನಾಸ್ಪದ ಬದಲಾವಣೆಗಳನ್ನು ಮಾಡಿದೆ. 123 ಪ್ರಮುಖ ಕಟ್ಟಡಗಳನ್ನು ವಕ್ಫ್‌ಗೆ ನೀಡಲಾಗಿತ್ತು. ಯುಪಿಎ ಸರ್ಕಾರವು ಸಂಸತ್ತನ್ನೂ ವಕ್ಫ್‌ಗೆ ನೀಡಲು ಸಿದ್ಧವಾಗಿತ್ತು. ಆದರೆ 2014ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ಬದ ಎನ್‌ಡಿಎ ಸರ್ಕಾರ, ಈ ಪ್ರಯತ್ನಗಳನ್ನು ತಡೆಹಿಡಿಯಿತು.." ಎಂದು ಕಿರಣ್‌ ರಿಜಿಜು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com