

ನವದೆಹಲಿ: ಅಮೆರಿಕ ಮತ್ತು ಇಸ್ರೇಲ್‌ನ ಕ್ರಮಗಳು ಹಾಗೂ ಅವರ ನಡವಳಿಕೆ, ವಾಕ್ಚಾತುರ್ಯದಲ್ಲಿ ಆಧುನಿಕ ಅನಾಗರಿಕತೆಯನ್ನು ಪ್ರದರ್ಶಿಸುತ್ತಿದೆ ಎಂದು ಭಾರತದಲ್ಲಿನ ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರು ಸೋಮವಾರ ಕಿಡಿ ಕಾರಿದ್ದಾರೆ.
ANIಗೆ ನೀಡಿದ ಲಿಖಿತ ಸಂದರ್ಶನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಬಗ್ಗೆ ಪ್ರತಿಕ್ರಿಯಿಸಿದ ಫಥಾಲಿ ಅವರು, ಇರಾನ್ ಅನ್ನು "ಶಿಲಾಯುಗಕ್ಕೆ" ಅಟ್ಟುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಮತ್ತು ಇತ್ತೀಚೆಗೆ ಟೆಹ್ರಾನ್ ಬಳಿಯ ಪ್ರಮುಖ ಸೇತುವೆಯನ್ನು ನಾಶಪಡಿಸಲಾಗಿದೆ ಎಂದು ಹೇಳಿದ್ದಾರೆ. ಆದರೆ "ನಮ್ಮದು ಸಾವಿರಾರು ವರ್ಷಗಳ ನಾಗರಿಕತೆಯನ್ನು ಹೊಂದಿರುವ ರಾಷ್ಟ್ರ ಮತ್ತು ನಾವು ಎಂದಿಗೂ "ಶಿಲಾಯುಗಕ್ಕೆ" ಹಿಂತಿರುಗುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಂದು ನಾವು ನೋಡುತ್ತಿರುವುದು ಟ್ರಂಪ್ ಮತ್ತು ಬೆಂಜಮಿನ್ ನೆತನ್ಯಾಹು ಅವರಂತಹ ವ್ಯಕ್ತಿಗಳ ನಡವಳಿಕೆ ಮತ್ತು ವಾಕ್ಚಾತುರ್ಯದಲ್ಲಿ ಆಧುನಿಕ ಅನಾಗರಿಕತೆ. ಇಂದು ಖಂಡನೀಯ ಎಂದು ಇರಾನ್ ಅನ್ನು ಅಶ್ಲೀಲ ಪದಗಳಿಂದ ನಿಂದಿಸಿದ ಟ್ರಂಪ್ ಗೆ ತಿರುಗೇಟು ನೀಡಿದ್ದಾರೆ.
ಮಕ್ಕಳ ಹತ್ಯೆ, ಶಾಲೆಗಳು, ವಿಶ್ವವಿದ್ಯಾಲಯಗಳು, ಆಸ್ಪತ್ರೆಗಳು ಮತ್ತು ಲಸಿಕೆ ಹಾಗೂ ಔಷಧ ಉತ್ಪಾದನಾ ಕೇಂದ್ರಗಳ ಮೇಲಿನ ದಾಳಿಗಳು ಈ ಹಿಂಸಾತ್ಮಕ ದಾಳಿಗಳು ಅಮಾನವೀಯ ವಿಧಾನದ ಸ್ಪಷ್ಟ ಸೂಚನೆಗಳಾಗಿವೆ. ಟ್ರಂಪ್ ಅವರ ಹೇಳಿಕೆಗಳು, ಅವರ ಶಕ್ತಿಯನ್ನು ಪ್ರತಿಬಿಂಬಿಸುವ ಬದಲು, ಹತಾಶೆ ಮತ್ತು ಅಸಹಾಯಕತೆಯನ್ನು ಬಹಿರಂಗಪಡಿಸುತ್ತಿವೆ" ಎಂದು ಫಥಾಲಿ ಹೇಳಿದ್ದಾರೆ.
Advertisement