ಮಾಲ್ಡಾ ಘೇರಾವ್ ಪ್ರಕರಣ: ಕಾಂಗ್ರೆಸ್ ಅಭ್ಯರ್ಥಿ ಸೇರಿ 6 ಮಂದಿಯನ್ನು ಬಂಧಿಸಿದ NIA

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಒಬ್ಬ ಅಭ್ಯರ್ಥಿಯೂ ಇವರಲ್ಲಿದ್ದಾರೆ.
NIA
ಎನ್ಐಎ online desk
Updated on

ಮಾಲ್ಡ: ಮಾಲ್ಡಾದಲ್ಲಿ ನಡೆದ ವಿಶೇಷ ತೀವ್ರ ಮತದಾರರ ಪಟ್ಟಿಯ ಪರಿಷ್ಕರಣೆ (ಎಸ್‌ಐಆರ್) ಸಂದರ್ಭದಲ್ಲಿ, ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದ ವಿರುದ್ಧ ಸ್ಥಳೀಯರು ನಡೆಸಿದ ಪ್ರತಿಭಟನೆಯಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಘೇರಾವ್ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಏಳು ಮಂದಿಯನ್ನು ವಶಕ್ಕೆ ಪಡೆದು, ಒಬ್ಬ ಪಂಚಾಯತ್ ಸದಸ್ಯನನ್ನು ಬಂಧಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಒಬ್ಬ ಅಭ್ಯರ್ಥಿಯೂ ಇವರಲ್ಲಿದ್ದಾರೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಘೇರಾವ್ ಪ್ರಕರಣವನ್ನು ತನಿಖೆ ಮಾಡುತ್ತಿರುವ ಎನ್‌ಐಎ, ಮಾಲ್ಡಾದ ಮಥಾಬಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಯೇಮ್ ಚೌಧುರಿ ಅವರನ್ನು, ಅವರು ಅಲಿನಗರ ಪಂಚಾಯತ್ ಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ, ಅವರ ಕೆಲವು ಸಹಚರರೊಂದಿಗೆ ವಶಕ್ಕೆ ಪಡೆದಿದೆ ಎಂದು ಒಬ್ಬ ಅಧಿಕಾರಿ ತಿಳಿಸಿದ್ದಾರೆ.

NIA
ಬೆಂಗಳೂರು: 500 ರೂ ನಲ್ಲಿ ಪುಲ್ ಡೇ ಬಿಂದಾಜ್ ಲೈಫ್! ಪಶ್ಚಿಮ ಬಂಗಾಳ ಯುವತಿಯ ವಿಡಿಯೋ ವೈರಲ್

ಪ್ರಾಥಮಿಕ ಮಾಹಿತಿಯ ಪ್ರಕಾರ, ರಾಜ್ಯ ಪೊಲೀಸರಿಂದ ಮೊದಲು ಬಂಧಿತರಾಗಿದ್ದ AIMIM ಸದಸ್ಯ ಮೊಫಕ್ಕರುಲ್ ಇಸ್ಲಾಂ ಅವರ ವಿಚಾರಣೆಯಿಂದ ಲಭಿಸಿದ ಸುಳಿಗಳ ಆಧಾರದ ಮೇಲೆ ISF ಪಕ್ಷದ ಗ್ರಾಮ ಪಂಚಾಯತ್ ಸದಸ್ಯ ಗೋಲಂ ರಬ್ಬಾನಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

NIA ಮೂಲಗಳ ಪ್ರಕಾರ, ರಬ್ಬಾನಿಯನ್ನು ಕೊಲ್ಕತ್ತಗೆ ಕರೆತರಲಾಗುವ ಸಾಧ್ಯತೆ ಇದ್ದು, ನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು. "ಅವರನ್ನು ವಿಚಾರಣೆ ಮಾಡುವುದರಿಂದ ಈ ಘಟನೆಗೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಪಡೆಯಬಹುದು ಎಂದು ನಮ್ಮ ಅಧಿಕಾರಿಗಳು ನಂಬಿದ್ದಾರೆ," ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com