ಟ್ರಂಪ್ ಆದೇಶದ ಮೇರೆಗೆ ಮೋದಿ ಇಸ್ರೇಲ್ ಭೇಟಿ: ರಾಹುಲ್ ಗಾಂಧಿ

ಬಿಜೆಪಿಯನ್ನು ಗುರಿಯಾಗಿಸಿಕೊಂಡು ತಮಿಳುನಾಡಿನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಟ್ರಂಪ್ ಹೇಳಿದಂತೆ ಪ್ರಧಾನಿ ಮೋದಿ ನಡೆಯುತ್ತಾರೆ" ಎಂದು ಹೇಳಿದ್ದಾರೆ.
Rahul Gandhi and PM Narendra Modi
ಪ್ರಧಾನಿ ನರೇಂದ್ರ ಮೋದಿ-ರಾಹುಲ್ ಗಾಂಧಿ online desk
Updated on

ಚೆನ್ನೈ: ಇರಾನ್‌ನಲ್ಲಿ ಯುದ್ಧ ಪ್ರಾರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದನ್ನು ಪಾಲಿಸುವ ಸಲುವಾಗಿ ಇಸ್ರೇಲ್‌ಗೆ ಭೇಟಿ ನೀಡಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.

ಬಿಜೆಪಿಯನ್ನು ಗುರಿಯಾಗಿಸಿಕೊಂಡು ತಮಿಳುನಾಡಿನಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, "ಟ್ರಂಪ್ ಹೇಳಿದಂತೆ ಪ್ರಧಾನಿ ಮೋದಿ ನಡೆಯುತ್ತಾರೆ" ಎಂಬ ತಮ್ಮ ಆರೋಪವನ್ನು ಪುನರುಚ್ಚರಿಸಿದರು.

Rahul Gandhi and PM Narendra Modi
ಅವರು ಜಿಗಿ ಎಂದರೆ ಜಿಗಿಯುತ್ತಾರೆ, ಹೇಳಿದ್ದು ಮಾಡ್ತಾರೆ; ಮೋದಿ ಸಂಪೂರ್ಣ ಟ್ರಂಪ್ ನಿಯಂತ್ರಣದಲ್ಲಿದ್ದಾರೆ: ರಾಹುಲ್ ಗಾಂಧಿ

ಇದಲ್ಲದೆ, ಇರಾನ್‌ನಲ್ಲಿ ಯುದ್ಧದ ಮೊದಲು, ಇದ್ದಕ್ಕಿದ್ದಂತೆ ಮೋದಿಗೆ ಇಸ್ರೇಲ್‌ಗೆ ಭೇಟಿ ನೀಡಲು ಹೇಳಲಾಯಿತು, ಮತ್ತು ಅವರು ವಿಮಾನ ಹತ್ತಿ, ಅಲ್ಲಿಗೆ ಹೋಗಿ ಹಿಂತಿರುಗಿದರು ಎಂದು ರಾಹುಲ್ ಗಾಂಧಿ ಆರೋಪಿಸಿದರು.

ಮೋದಿ ಟ್ರಂಪ್ ಹೇಳುವುದನ್ನೆಲ್ಲಾ ಕೇಳುತ್ತಿರುವ ನಡವಳಿಕೆಗೆ ಕಾರಣ ಸರಳವಾಗಿದ್ದು ಅದಕ್ಕೆ ಇರುವ ಕಾರಣವೆಂದರೆ ಅದು "ಎಪ್ಸ್ಟೀನ್ ಫೈಲ್ಸ್ ಮತ್ತು ಅದಾನಿ" ಎಂದು ಅವರು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com