IPL ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಐವರ ಬಂಧನ; 3.91 ಕೋಟಿ ರೂ ನಗದು, ನೋಟು ಎಣಿಸೋ ಯಂತ್ರ ವಶ!

ದಾಳಿಯ ಸಮಯದಲ್ಲಿ, ಪೊಲೀಸರು 3.91 ಕೋಟಿ ರೂಪಾಯಿ ನಗದು, ಮೂರು ನೋಟು ಎಣಿಕೆ ಯಂತ್ರಗಳು, ಕರೆನ್ಸಿ ಪರಿಶೀಲನಾ ಯಂತ್ರ, ಮೊಬೈಲ್ ಫೋನ್‌ಗಳು ಮತ್ತು ಬೆಟ್ಟಿಂಗ್ ಕಾರ್ಯಾಚರಣೆಗೆ ಬಳಸಿದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Five Arrested, Rs 3.91 Crore Cash Seized: IPL Betting Racket In UP Busted
ಐಪಿಎಲ್ ಟೂರ್ನಿ (ಸಾಂದರ್ಭಿಕ ಚಿತ್ರ)
Updated on

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರ ಪೊಲೀಸರು ಬುಧವಾರ ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ ನಡೆಸಿ, ಐದು ಜನರನ್ನು ಬಂಧಿಸಿದ್ದಾರೆ ಮತ್ತು ಬೆಟ್ಟಿಂಗ್ ಉಪಕರಣಗಳೊಂದಿಗೆ 3.91 ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಅಕ್ರಮ ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್, ಬೆಥಬ್ 24.ಕಾಮ್ ಮೂಲಕ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಆನ್‌ಲೈನ್ ಜೂಜಾಟಕ್ಕೆ ಅನುಕೂಲವಾಗುವಂತೆ "ಮಾಸ್ಟರ್ ಐಡಿಗಳು" ಮತ್ತು ಸಬ್-ಐಡಿಗಳ ನೆಟ್‌ವರ್ಕ್ ಅನ್ನು ಬಳಸುತ್ತಿದ್ದರು ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ಪಿಟಿಐಗೆ ಮಾಹಿತಿ ನೀಡಿದ್ದಾರೆ.

ನಗರದಲ್ಲಿ ದೊಡ್ಡ ಪ್ರಮಾಣದ ಐಪಿಎಲ್ ಬೆಟ್ಟಿಂಗ್ ಬಗ್ಗೆ ಹಲವಾರು ದೂರುಗಳು ಬಂದ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಲಾಲ್ ಹೇಳಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಮಂಗಳವಾರ ರಾತ್ರಿ ಗೋವಿಂದಪುರಿ ಸೇತುವೆಯ ಬಳಿ ವಾಹನವನ್ನು ತಡೆಹಿಡಿದು, ಮೊಬೈಲ್ ಫೋನ್‌ಗಳಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Five Arrested, Rs 3.91 Crore Cash Seized: IPL Betting Racket In UP Busted
ಬೆಟ್ಟಿಂಗ್ ಪ್ರಕರಣಕ್ಕೆ ಹೈಕೋರ್ಟ್ ತಡೆ: ಗೃಹ ಸಚಿವ ಪರಮೇಶ್ವರ​​​ಗೆ ಬಿಗ್ ರಿಲೀಫ್!

ಅವರ ವಿಚಾರಣೆಯ ನಂತರ ಪೊಲೀಸರು ಕಿದ್ವೈ ನಗರದಲ್ಲಿ ಬಾಡಿಗೆ ಪಡೆದಿದ್ದ ಮನೆಗೆ ತೆರಳಿದರು. ಅಲ್ಲಿ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಲಾಯಿತು ಎಂದು ಲಾಲ್ ಹೇಳಿದ್ದಾರೆ.

ದಾಳಿಯ ಸಮಯದಲ್ಲಿ, ಪೊಲೀಸರು 3.91 ಕೋಟಿ ರೂಪಾಯಿ ನಗದು, ಮೂರು ನೋಟು ಎಣಿಕೆ ಯಂತ್ರಗಳು, ಕರೆನ್ಸಿ ಪರಿಶೀಲನಾ ಯಂತ್ರ, ಮೊಬೈಲ್ ಫೋನ್‌ಗಳು ಮತ್ತು ಬೆಟ್ಟಿಂಗ್ ಕಾರ್ಯಾಚರಣೆಗೆ ಬಳಸಿದ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ಬೆಟ್ಟಿಂಗ್ ನಿರ್ವಹಿಸುತ್ತಿದ್ದ ಕಾರ್ತಿಕ್ ಲಖ್ವಾನಿ ಮತ್ತು ರಾಜ್‌ಕುಮಾರ್ ಎಂದು ಹಾಗೂ ನಗದು ಸಾಗಣೆ ಮತ್ತು ನಿರ್ವಹಣೆ ಮಾಡುತ್ತಿದ್ದ ಗುಜರಾತ್‌ನ ಕಲ್ಪೇಶ್, ರವಿ ನಾಯ್ಕ್ ಹಾಗೂ ವಿಷ್ಣು ಎಂದು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬೆಟ್ಟಿಂಗ್ ಕಿಂಗ್‌ಪಿನ್ ಮನೀಶ್ ಅಲಿಯಾಸ್ "ಪ್ರೊಫೆಸರ್" ತಲೆಮರೆಸಿಕೊಂಡಿದ್ದಾನೆ. ಆತನನ್ನು ಪತ್ತೆಹಚ್ಚಲು ಮತ್ತು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com