ಭಾರತವನ್ನು ‘ನರಕಕೂಪ’ವೆಂದು ಹೀಯಾಳಿಸಿದ ಟ್ರಂಪ್: ಅಜ್ಞಾನಪೂರ್ಣ ಹೇಳಿಕೆ; ವಿದೇಶಾಂಗ ಇಲಾಖೆ ತೀವ್ರ ಕಿಡಿ

ಭಾರತ ಸೇರಿದಂತೆ ಕೆಲವು ದೇಶಗಳನ್ನು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ವಲಸೆ ನೀತಿ ಮತ್ತು ಜನ್ಮಸಿದ್ಧ ಪೌರತ್ವದ ಕುರಿತು ತೀವ್ರ ಟೀಕೆಗಳನ್ನು ಮಾಡಲಾಗಿತ್ತು.
PM Modi, Donald Trump Casual Images
ಪ್ರಧಾನಿ ಮೋದಿ, ಡೊನಾಲ್ಡ್ ಟ್ರಂಪ್ ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತವನ್ನು “ನರಕಕೂಪ”ವೆಂದು ಉಲ್ಲೇಖಿಸಿರುವ ಹೇಳಿಕೆ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಹೇಳಿಕೆಗೆ ಭಾರತ ಸರ್ಕಾರ ಕಠಿಣವಾಗಿ ಪ್ರತಿಕ್ರಿಯೆ ನೀಡಿದ್ದು, “ಅಜ್ಞಾನಪೂರ್ಣ ಹೇಳಿಕೆ” ಎಂದು ಖಂಡಿಸಿದೆ.

ಈ ವಿವಾದಕ್ಕೆ ಕಾರಣವಾದದ್ದು ಟ್ರಂಪ್ ಅವರು ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೊಂಡ ಅಮೆರಿಕದ ಪ್ರಮುಖ ಸಂಪ್ರದಾಯವಾದಿ ಲೇಖಕ ಮತ್ತು ರೇಡಿಯೋ ನಿರೂಪಕ ಮೈಕೆಲ್ ಸ್ಯಾವೇಜ್ ಅವರ ಪಾಡ್‌ಕಾಸ್ಟ್.

ಅದರಲ್ಲಿ ಭಾರತ ಸೇರಿದಂತೆ ಕೆಲವು ದೇಶಗಳನ್ನು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ ವಲಸೆ ನೀತಿ ಮತ್ತು ಜನ್ಮಸಿದ್ಧ ಪೌರತ್ವದ ಕುರಿತು ತೀವ್ರ ಟೀಕೆಗಳನ್ನು ಮಾಡಲಾಗಿತ್ತು.

ಟ್ರಂಪ್ ಟೀಕೆ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟ ಪ್ರತಿಕ್ರಿಯೆ ನೀಡಿದ್ದು, ಇಂತಹ ಹೇಳಿಕೆಗಳು ಅಜ್ಞಾನಪೂರ್ಣವಾಗಿದ್ದು, ಅಸಮಂಜಸ ಹಾಗೂ ಕೆಟ್ಟ ಅಭಿರುಚಿಯುಳ್ಳದ್ದಾಗಿದೆ ಎಂದು ಹೇಳಿದ್ದಾರೆ.

ಭಾರತ–ಅಮೆರಿಕ ಸಂಬಂಧಗಳು ದೀರ್ಘಕಾಲದಿಂದ ಪರಸ್ಪರ ಗೌರವ ಮತ್ತು ಹಂಚಿಕೊಂಡ ಹಿತಾಸಕ್ತಿಗಳ ಮೇಲೆ ನಿರ್ಮಿತವಾಗಿವೆ, ಈ ರೀತಿಯ ಮಾತುಗಳು ಆ ಸಂಬಂಧದ ನೈಜ ಸ್ವರೂಪವನ್ನು ಪ್ರತಿಬಿಂಬಿಸುವುದಿಲ್ಲ ಎಂದು ತಿಳಿಸಿದ್ದಾರೆ.

PM Modi, Donald Trump Casual Images
'ಭಾರತ, ಚೀನಾದಂತಹ ನರಕದಿಂದ ಬಂದು ಜನ್ಮಸಿದ್ಧ ಪೌರತ್ವ ಪಡೀತಾರೆ': ನಿರೂಪಕ ಸೀವೇಜ್ sorry ಸ್ಯಾವೇಜ್ ಟೀಕೆಗೆ ಧ್ವನಿಗೂಡಿಸಿದ ಟ್ರಂಪ್!

ವಿವಾದ ಹೆಚ್ಚಾಗುತ್ತಿದ್ದಂತೆ ಅಮೆರಿಕಾ ಕೂಡ ಸ್ಪಷ್ಟನೆ ನೀಡಲು ಮುಂದಾಗಿದೆ. ಅಮೆರಿಕದ ರಾಯಭಾರ ಕಚೇರಿ, ಟ್ರಂಪ್ ಭಾರತವನ್ನು “ಮಹಾನ್ ದೇಶ” ಎಂದು ಹಾಗೂ ತಮ್ಮ “ಒಳ್ಳೆಯ ಸ್ನೇಹಿತನ ದೇಶ” ಎಂದು ಹೇಳಿರುವುದಾಗಿ ತಿಳಿಸಿದೆ. ಆದರೆ, ಈ ಹೇಳಿಕೆ ಯಾವ ಸಂದರ್ಭದಲ್ಲಿ ನೀಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟನೆ ನೀಡಲಾಗಿಲ್ಲ.

ಈ ಘಟನೆ ಭಾರತದಲ್ಲಿ ರಾಜಕೀಯ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ. ವಿರೋಧ ಪಕ್ಷಗಳು ಟ್ರಂಪ್ ಅವರ ಹೇಳಿಕೆಯನ್ನು ತೀವ್ರವಾಗಿ ಟೀಕಿಸಿದ್ದು, ಕೇಂದ್ರ ಸರ್ಕಾರವು ಈ ವಿಚಾರ ಕುರಿತು ಧ್ವನಿ ಎತ್ತಬೇಕು ಎಂದು ಆಗ್ರಹಿಸಿವೆ. ಭಾರತೀಯರು ಅಮೆರಿಕದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳನ್ನೂ ಕೆಲವರು ನೆನಪಿಸಿದ್ದಾರೆ.

.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಟ್ರಂಪ್ ಅವರ ಪೋಸ್ಟ್ ಅನ್ನು ಉಲ್ಲೇಖಿಸಿ, “ಮೋದಿಯ ಆತ್ಮೀಯ ಸ್ನೇಹಿತ” ಇಂತಹ ಅವಮಾನಕಾರಿ ಭಾಷೆಯನ್ನು ಹಂಚಿಕೊಂಡಿರುವುದು ಗಂಭೀರ ವಿಷಯ ಎಂದು ಹೇಳಿದ್ದಾರೆ.

ಮೈಕಲ್ ಸಾವೇಜ್ ಅವರ ಪಾಡ್‌ಕಾಸ್ಟ್‌ನಲ್ಲಿ ಭಾರತ, ಚೀನಾ ಸೇರಿದಂತೆ ಹಲವು ದೇಶಗಳಿಂದ ಆಗುವ ವಲಸೆಯನ್ನು ತೀವ್ರವಾಗಿ ಟೀಕಿಸಲಾಗಿದ್ದು, “ಹೆಲ್‌ಹೋಲ್ಸ್” ಎಂದು ಹೀಯಾಳಿಸಲಾಗಿದೆ. ಅಲ್ಲದೆ, ಭಾರತ ಮತ್ತು ಚೀನಾದ ವಲಸಿಗರನ್ನು “ಲ್ಯಾಪ್‌ಟಾಪ್ ಹೊಂದಿರುವ ಗ್ಯಾಂಗ್ಸ್ಟರ್‌ಗಳು” ಎಂದು ಅವಮಾನಕಾರಿ ರೀತಿಯಲ್ಲಿ ಉಲ್ಲೇಖಿಸಿರುವುದು ಸಾಮಾಜಿಕ ಮತ್ತು ರಾಜಕೀಯ ವಲಯಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ಈ ಹೇಳಿಕೆಗಳು ಅಮೆರಿಕದ ವಲಸೆ ನೀತಿ ಮತ್ತು ಜನ್ಮಸಿದ್ಧ ಪೌರತ್ವದ ಕುರಿತು ನಡೆಯುತ್ತಿರುವ ಚರ್ಚೆಗಳನ್ನು ತೀವ್ರಗೊಳ್ಳುವಂತೆ ಮಾಡಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com