FCRA ಅಲ್ಲ.. ಸರ್ಕಾರದ ಅಜೆಂಡಾದಲ್ಲಿದೆ ಈ ನಾಲ್ಕು ಪ್ರಮುಖ ಮಸೂದೆಗಳು!

ಇದರ ನಡುವೆಯೇ ಅಚ್ಚರಿ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಪ್ರಮುಖ ಮಸೂದೆಗಳ ಪಟ್ಟಿಯಲ್ಲಿ FCRA ಇಲ್ಲ ಎಂದು ಹೇಳಲಾಗಿದೆ.
FCRA Bill not on government agenda as four Bills listed for final week of session
ಸಂಸತ್ ಅಧಿವೇಶನ (ಸಂಗ್ರಹ ಚಿತ್ರ)
Updated on

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಮಂಡಿಸಲು ಪಟ್ಟಿ ಮಾಡಿರುವ ಮಸೂದೆಗಳಲ್ಲಿ FCRA ಪ್ರಮುಖವಾಗಿಲ್ಲ ಎಂದು ಹೇಳಲಾಗುತ್ತಿದೆ.

ಹೌದು.. ಅಚ್ಚರಿಯಾದರೂ ಇದು ಸತ್ಯ.. ವಿವಾದಕ್ಕೆ ಕಾರಣವಾಗಿರುವ ವಿದೇಶಿ ಕೊಡುಗೆಗಳ ನಿಯಂತ್ರಣ ತಿದ್ದುಪಡಿ ಮಸೂದೆ, 2026 ಅನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಬಹುದು ಎಂಬ ಊಹಾಪೋಹಗಳು ಹೆಚ್ಚುತ್ತಿರುವ ನಡುವೆಯೇ, ಈ ಬಗ್ಗೆ ದೇಶ-ವಿದೇಶಗಳಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.

ಇದರ ನಡುವೆಯೇ ಅಚ್ಚರಿ ಬೆಳವಣಿಗೆಯಲ್ಲಿ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಪ್ರಮುಖ ಮಸೂದೆಗಳ ಪಟ್ಟಿಯಲ್ಲಿ FCRA ಇಲ್ಲ ಎಂದು ಹೇಳಲಾಗಿದೆ. ಸೋಮವಾರ ನಡೆಯಲಿರುವ ವ್ಯವಹಾರ ಸಲಹಾ ಸಮಿತಿ ಸಭೆಗೆ ಸರ್ಕಾರ ಸಿದ್ಧಪಡಿಸಿರುವ ಅಜೆಂಡಾದಲ್ಲಿ ಈ ಮಸೂದೆಗೆ ಸ್ಥಾನ ಸಿಕ್ಕಿಲ್ಲ.

ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿಗೆ ಸಂಬಂಧಿಸಿದ ಪ್ರಸ್ತಾವಿತ ಸಂವಿಧಾನ ತಿದ್ದುಪಡಿ ಮಸೂದೆಯ ಬಗ್ಗೆಯೂ ಅಜೆಂಡಾದಲ್ಲಿ ಯಾವುದೇ ಉಲ್ಲೇಖವಿಲ್ಲ. ಆಗಸ್ಟ್ 13ರಂದು ಮುಕ್ತಾಯಗೊಳ್ಳಲಿರುವ ಮುಂಗಾರು ಅಧಿವೇಶನದಲ್ಲಿ ಸರ್ಕಾರ ಈ ಮಸೂದೆಯನ್ನು ತರಬಹುದು ಎಂಬ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದರ ಅನುಪಸ್ಥಿತಿ ಗಮನ ಸೆಳೆದಿದೆ.

ಇದರ ಬದಲಾಗಿ, ನಾಲ್ಕು ಮಸೂದೆಗಳನ್ನು ಮಂಡಿಸಿ ಬಳಿಕ ಪರಿಗಣನೆಗೆ ತೆಗೆದುಕೊಳ್ಳಲು ಸರ್ಕಾರ ಪಟ್ಟಿ ಮಾಡಿದೆ. ಈ ಮಸೂದೆಗಳ ಚರ್ಚೆಗೆ ಎಷ್ಟು ಸಮಯ ನಿಗದಿಪಡಿಸಬೇಕು ಎಂಬುದನ್ನು ವ್ಯವಹಾರ ಸಲಹಾ ಸಮಿತಿ ನಿರ್ಧರಿಸುವ ನಿರೀಕ್ಷೆಯಿದೆ.

FCRA Bill not on government agenda as four Bills listed for final week of session
ಸೋಷಿಯಲ್ ಮೀಡಿಯಾ ಬಳಕೆಯನ್ನು ಹೆಚ್ಚಿಸಿ, Gen Z ಯುವಜನರನ್ನು ತಲುಪಿ, ಕ್ರೀಡೆಗೆ ಉತ್ತೇಜನ ನೀಡಿ: NDA ಸಂಸದರಿಗೆ ಪ್ರಧಾನಿ ಮೋದಿ ಕಿವಿಮಾತು

ಪಟ್ಟಿಯಲ್ಲಿರುವ ನಾಲ್ಕು ಮಸೂದೆಗಳೆಂದರೆ

  • ಖನಿಜಗಳು ಮತ್ತು ಖನಿಜ ಅಭಿವೃದ್ಧಿ ಹಾಗೂ ನಿಯಂತ್ರಣ ತಿದ್ದುಪಡಿ ಮಸೂದೆ, 2026

  • ನ್ಯಾಯಮಂಡಳಿ ಸುಧಾರಣಾ ಮಸೂದೆ, 2026

  • ಕೇರಳ ಹೆಸರು ಬದಲಾವಣೆ ಮಸೂದೆ, 2026

  • ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ತಿದ್ದುಪಡಿ ಮಸೂದೆ, 2026

FCRA ಕಥೆ ಏನು?

ಇನ್ನು ಅಂತಿಮ ವಾರದ ಅಧಿವೇಶನದಲ್ಲಿ ಎಫ್‌ಸಿಆರ್‌ಎ ಮಸೂದೆಯನ್ನು ಚರ್ಚೆಗೆ ತೆಗೆದುಕೊಂಡು ಅಂಗೀಕರಿಸುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿತ್ತು. ಹೀಗಾಗಿ ಸರ್ಕಾರದ ಅಜೆಂಡಾದಲ್ಲಿ ಈ ಮಸೂದೆ ಕಾಣಿಸದಿರುವುದು ಮಹತ್ವ ಪಡೆದುಕೊಂಡಿದೆ.

ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡುವಂತೆ ಕಾಂಗ್ರೆಸ್ ಶುಕ್ರವಾರ ಲೋಕಸಭೆ ಮತ್ತು ರಾಜ್ಯಸಭೆಯ ತನ್ನ ಸಂಸದರಿಗೆ ವಿಪ್ ಜಾರಿ ಮಾಡಿದ್ದು, ಆಗಸ್ಟ್ 10, 11 ಮತ್ತು 12ರಂದು ಸಂಸತ್ತಿನಲ್ಲಿ ‘ಅತ್ಯಂತ ಮಹತ್ವದ’ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆ ಇರುವುದರಿಂದ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿದೆ. ಈ ದಿನಗಳಲ್ಲಿ ತಮ್ಮ ಸಂಸದರು ಸದನದಲ್ಲಿ ಹಾಜರಿರುವಂತೆ ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳಿಗೂ ಕಾಂಗ್ರೆಸ್ ಮನವಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತಾವಿತ ಎಫ್‌ಸಿಆರ್‌ಎ ತಿದ್ದುಪಡಿಗಳ ಹಲವು ಅಂಶಗಳಿಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಆದರೆ ಸರ್ಕಾರ ಮುಂದಿನ ವಾರ ಮಸೂದೆಯನ್ನು ಮಂಡಿಸಿದರೆ ಅದರ ಚರ್ಚೆಯಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಪ್ರತಿಪಕ್ಷಗಳು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.

ಪ್ರಸ್ತಾವಿತ ಮಸೂದೆಗೆ ಕ್ರೈಸ್ತ ಸಂಘಟನೆಗಳಿಂದಲೂ ವಿರೋಧ ವ್ಯಕ್ತವಾಗಿದೆ. ಡಿಎಂಕೆ ರಾಜ್ಯಸಭಾ ಸಂಸದ ಪಿ. ವಿಲ್ಸನ್ ನೇತೃತ್ವದ ಕ್ರೈಸ್ತ ಮುಖಂಡರ ನಿಯೋಗ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿತು. ಮಸೂದೆಯಲ್ಲಿನ ಕೆಲವು ಅಂಶಗಳು ‘ಮುಟ್ಟುಗೋಲು ಹಾಕಿಕೊಳ್ಳುವ ರೀತಿಯವು’ ಎಂದು ನಿಯೋಗ ಆರೋಪಿಸಿತು.

FCRA Bill not on government agenda as four Bills listed for final week of session
ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಬೇಡ: FCRA ವಿರುದ್ಧ ಅಮೆರಿಕದ ಕಾಂಗ್ರೆಸ್ಸಿಗರ ಟೀಕೆಯನ್ನು ತಿರಸ್ಕರಿಸಿದ ಭಾರತ!

ಪ್ರತಿಕೂಲ ಪರಿಣಾಮಗಳಿಗೆ ಕೇಂದ್ರ ಸಿದ್ಧತೆ

ಪ್ರಸ್ತಾವಿತ ತಿದ್ದುಪಡಿಗಳು ದೇಶಾದ್ಯಂತ ಶಾಲೆ, ಕಾಲೇಜು, ಆಸ್ಪತ್ರೆ, ಅನಾಥಾಶ್ರಮ, ವೃದ್ಧಾಶ್ರಮ ಹಾಗೂ ಇತರ ದತ್ತಿ ಸಂಸ್ಥೆಗಳನ್ನು ನಡೆಸುತ್ತಿರುವ ಸಂಸ್ಥೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ನಿಯೋಗ ವಾದಿಸಿದೆ. ಸರ್ಕಾರ ಮಸೂದೆಯನ್ನು ಹಿಂಪಡೆಯಲು ಸಿದ್ಧವಿಲ್ಲದಿದ್ದರೆ, ಈ ಮಸೂದೆಯನ್ನು 2010ರ ಎಫ್‌ಸಿಆರ್‌ಎ ಕಾಯ್ದೆಯ ಸಮಗ್ರ ಪರಿಶೀಲನೆಯೊಂದಿಗೆ ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಬೇಕು ಎಂದು ನಿಯೋಗ ಒತ್ತಾಯಿಸಿದೆ.

ಅಮಿತ್ ಶಾ ಅವರಿಗೆ ಸಲ್ಲಿಸಿದ ಮನವಿಯಲ್ಲಿ, ವಿದೇಶಿ ಕೊಡುಗೆಗಳ ಮೇಲೆ ಕಾನೂನುಬದ್ಧ ನಿಯಂತ್ರಣಕ್ಕೆ ತಮ್ಮ ಬೆಂಬಲವಿದೆ. ಆದರೆ ಪ್ರಸ್ತಾವಿತ ತಿದ್ದುಪಡಿಗಳು ‘ನಿಯಂತ್ರಣದ ವ್ಯಾಪ್ತಿಯನ್ನು ಮೀರಿವೆ’ ಮತ್ತು ದತ್ತಿ ಸಂಸ್ಥೆಗಳಿಗೆ ಸರಿಪಡಿಸಲಾಗದಷ್ಟು ಸಂಕಷ್ಟ ಉಂಟುಮಾಡಬಹುದು ಎಂದು ನಿಯೋಗ ಹೇಳಿದೆ.

ಗುರುವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಮಿಜೋರಾಂ ಮುಖ್ಯಮಂತ್ರಿ ಲಾಲ್ದುಹೊಮಾ, ಎಫ್‌ಸಿಆರ್‌ಎ ಮಸೂದೆಯನ್ನು ಆಗಸ್ಟ್ 12ರಂದು ಸಂಸತ್ತಿನಲ್ಲಿ ಚರ್ಚೆಗೆ ತೆಗೆದುಕೊಂಡು ಅಂಗೀಕರಿಸುವ ಸಾಧ್ಯತೆಯಿದೆ. ಆದರೆ ಮಸೂದೆಗೆ ಹಿಂಬಾಲಿತ ಪರಿಣಾಮ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಲಾಲ್ದುಹೊಮಾ ಹಾಗೂ ಮಿಜೋರಾಂನ ಚರ್ಚ್ ಮುಖಂಡರ ನಿಯೋಗವು ವಿದೇಶಿ ಕೊಡುಗೆಗಳ ನಿಯಂತ್ರಣ ತಿದ್ದುಪಡಿ ಮಸೂದೆ, 2026ಕ್ಕೆ ಸಂಬಂಧಿಸಿದ ತಮ್ಮ ಆತಂಕಗಳನ್ನು ಅಮಿತ್ ಶಾ ಅವರೊಂದಿಗೆ ಹಂಚಿಕೊಂಡಿದೆ.

ವಿದೇಶಿ ಹಣಕಾಸು ಪಡೆಯುವ ಸಂಸ್ಥೆಗಳ ಮೇಲಿನ ಮೇಲ್ವಿಚಾರಣೆಯನ್ನು ಮಸೂದೆ ಗಣನೀಯವಾಗಿ ಬಿಗಿಗೊಳಿಸುವ ಉದ್ದೇಶ ಹೊಂದಿದೆ. ಅಲ್ಲದೆ, ಪರವಾನಗಿ ಕಳೆದುಕೊಳ್ಳುವ ಲಾಭರಹಿತ ಸಂಸ್ಥೆಗಳ ಆಸ್ತಿಗಳನ್ನು ವಶಪಡಿಸಿಕೊಂಡು ನಿರ್ವಹಿಸಲು ಪ್ರಬಲ ಹೊಸ ಪ್ರಾಧಿಕಾರ ರಚಿಸುವ ಪ್ರಸ್ತಾವವೂ ಮಸೂದೆಯಲ್ಲಿದೆ ಎಂದು ಲಾಲ್ದುಹೊಮಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com