ಮೇಘಾಲಯ: ಫುಟ್ಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ಶಿಲ್ಲಾಂಗ್ ಸಂಸದ ರಿಕಿ ಸಿಂಗ್ಕಾನ್ ಸಾವು

ಮೇಘಾಲಯದ ವಾಯ್ಸ್ ಆಫ್ ಪೀಪಲ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ 54 ವರ್ಷ ವಯಸ್ಸಿನ ರಿಕಿ, ಸ್ನೇಹಿತರ ಜತೆ ಆಟವಾಡುತ್ತಿದ್ದಾಗ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು
ಮೇಘಾಲಯ: ಫುಟ್ಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ಶಿಲ್ಲಾಂಗ್ ಸಂಸದ ರಿಕಿ ಸಿಂಗ್ಕಾನ್ ಸಾವು
Updated on

ಶಿಲ್ಲಾಂಗ್: ಸ್ನೇಹಿತರ ಜೊತೆ ಫುಟ್ಬಾಲ್ ಆಡುತ್ತಿದ್ದಾಗಲೇ ಹೃದಯಾಘಾತ ಸಂಭವಿಸಿ ಶಿಲ್ಲಾಂಗ್ ಲೋಕಸಭಾ ಸದಸ್ಯ ರಿಕಿ ಎಜೆ ಸಿಂಗ್ಕಾನ್ ಮೃತಪಟ್ಟಿರುವ ದಾರುಣ ಘಟನೆ ವರದಿಯಾಗಿದೆ.

ಮೇಘಾಲಯದ ವಾಯ್ಸ್ ಆಫ್ ಪೀಪಲ್ ಪಕ್ಷದಿಂದ ಸಂಸದರಾಗಿ ಆಯ್ಕೆಯಾಗಿದ್ದ 54 ವರ್ಷ ವಯಸ್ಸಿನ ರಿಕಿ, ಸ್ನೇಹಿತರ ಜತೆ ಆಟವಾಡುತ್ತಿದ್ದಾಗ ಕುಸಿದು ಬಿದ್ದರು. ತಕ್ಷಣವೇ ಅವರನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ನಗರದ ಡಾ.ಎಚ್.ಗೋರ್ಡೋನ್ ರಾಬರ್ಟ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ರಾತ್ರಿ 8.42ರ ವೇಳೆಗೆ ಮೃತಪಟ್ಟರು ಎಂದು ಅಧಿಕೃತ ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಕೊನ್ರಾಡ್ ಕೆ.ಸಂಗ್ಮಾ ಈ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಸಿಂಗ್ಕಾನ್ ಅತ್ಯಂತ ಬದ್ಧತೆಯ ಜನಪ್ರತಿನಿಧಿಯಾಗಿದ್ದರು ಎಂದಿದ್ದಾರೆ. ಸಿಂಗ್ಕಾನ್ ಅವರು ಶಿಲ್ಲಾಂಗ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಅವರು 2024ರ ಚುನಾವಣೆಯಲ್ಲಿ ಕಾಂಗ್ರೆಸ್ ಸಂಸದ ವಿನ್ಸೆಂಟ್ ಎಚ್ ಪಾಲಾ ವಿರುದ್ಧ 3.7 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಮೇಘಾಲಯ: ಫುಟ್ಬಾಲ್ ಆಡುತ್ತಿದ್ದಾಗ ಕುಸಿದು ಬಿದ್ದು ಶಿಲ್ಲಾಂಗ್ ಸಂಸದ ರಿಕಿ ಸಿಂಗ್ಕಾನ್ ಸಾವು
ಬಾಲಿವುಡ್ ಖ್ಯಾತ ನಿರ್ಮಾಪಕ, ನಿರ್ದೇಶಕ MM Baig ನಿಗೂಢ ಸಾವು: ಮನೆಯಲ್ಲೇ ಶವ ಪತ್ತೆ!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com