Bhojshala case: ದರ್ಗಾ ಪಕ್ಕದ ಜಾಗದಲ್ಲಿ ಶುಕ್ರವಾರ ನಮಾಜ್‌ ಮಾಡಲು ಮುಸ್ಲಿಮರಿಗೆ ಸುಪ್ರೀಂ ಕೋರ್ಟ್ ಅನುಮತಿ

ರಾಜ್ಯ ಸರ್ಕಾರ ಮತ್ತು ಮುಸ್ಲಿಂ ಸಮುದಾಯ ಪರಸ್ಪರ ಒಪ್ಪಿಗೆಯ ಮೂಲಕ ಮತ್ತೊಂದು ಸೂಕ್ತ ಸ್ಥಳವನ್ನೂ ಗುರುತಿಸಬಹುದೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
Bhojshala case
ಭೋಜ್ ಶಾಲಾ
Updated on

ನವದೆಹಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜ್‌ಶಾಲಾ ಸಂಕೀರ್ಣಕ್ಕೆ ಹೊಂದಿಕೊಂಡಿರುವ ದರ್ಗಾ ಸಮೀಪದ ಜಾಗದಲ್ಲಿ ಮುಸ್ಲಿಮರಿಗೆ ಶುಕ್ರವಾರದ ನಮಾಜ್ ಸಲ್ಲಿಸಲು ಸುಪ್ರೀಂ ಕೋರ್ಟ್ ಗುರುವಾರ ಅನುಮತಿ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ಜೆ.ವಿ. ಮೋಹನಾ ಅವರೊಂದಿಗೆ ಮುಸ್ಲಿಂ ಸಮುದಾಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ನಮಾಜ್ ಸಲ್ಲಿಸಲು ಸೂಕ್ತ ಪರ್ಯಾಯ ಸ್ಥಳ ಒದಗಿಸುವಂತೆ ಮುಸ್ಲಿಂ ಸಮುದಾಯ ಮನವಿ ಮಾಡಿತ್ತು.

ವಿಚಾರಣೆ ವೇಳೆ, ಮಧ್ಯಪ್ರದೇಶ ಸರ್ಕಾರವು ಶುಕ್ರವಾರದ ನಮಾಜ್‌ಗೆ ಅಗತ್ಯ ವ್ಯವಸ್ಥೆ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತು. ಜೊತೆಗೆ, ರಾಜ್ಯ ಸರ್ಕಾರ ಮತ್ತು ಮುಸ್ಲಿಂ ಸಮುದಾಯ ಪರಸ್ಪರ ಒಪ್ಪಿಗೆಯ ಮೂಲಕ ಮತ್ತೊಂದು ಸೂಕ್ತ ಸ್ಥಳವನ್ನೂ ಗುರುತಿಸಬಹುದೆಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

Bhojshala case
ಚುನಾವಣೆಯಲ್ಲಿ ಗೆಲ್ಲದೆ ಸಚಿವರಾಗುವ ನಿಯಮಕ್ಕೆ ಬ್ರೇಕ್? ಸಾಂವಿಧಾನಿಕ ವಿನಾಯಿತಿ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ವಿಚಾರಣೆ

ಮಧ್ಯಪ್ರದೇಶ ಹೈಕೋರ್ಟ್ ಭೋಜ್‌ಶಾಲಾ ಸ್ಥಳವನ್ನು ದೇವಾಲಯ ಎಂದು ಘೋಷಿಸಿದ್ದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ವೇಳೆ, ಹಿಂದಿನ ಸ್ಥಿತಿಯನ್ನು (ಸ್ಟೇಟಸ್ ಕ್ವೋ ಆಂಟೆ) ಪುನಃ ಜಾರಿಗೊಳಿಸುವಂತೆ ಮಧ್ಯಂತರ ಆದೇಶ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿತು.

ಆದರೆ, ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಮುಸ್ಲಿಮರು ಶುಕ್ರವಾರದ ನಮಾಜ್ ಸಲ್ಲಿಸಲು ಭೋಜ್‌ಶಾಲಾ ಸಂಕೀರ್ಣದ ಸಮೀಪದಲ್ಲೇ ಪರ್ಯಾಯ ಸ್ಥಳವನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com