ಇರಾನ್ ಡ್ರೋನ್ ದಾಳಿ: UAE ಕೈಗಾರಿಕಾ ಪ್ರದೇಶದಲ್ಲಿ ಭಾರೀ ಬೆಂಕಿ: ಐವರು ಭಾರತೀಯರಿಗೆ ಗಾಯ

ಅಬುಧಾಬಿಯ ಕೈಗಾರಿಕಾ ವಲಯದಲ್ಲಿ ಘಟನೆ ನಡೆದಿದೆ. ದಾಳಿಯಲ್ಲಿ ಐದು ಮಂದಿ ಭಾರತೀಯರಿಗೆ ಗಾಯಗಳಾಗಿವೆ ಎಂದು ಸರ್ಕಾರದ ಮಾಧ್ಯಮ ಕಚೇರಿ ಮಾಹಿತಿ ನೀಡಿದೆ.
File photo
ಸಂಗ್ರಹ ಚಿತ್ರ
Updated on

ಇರಾನ್‌ ನಡೆಸಿದ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಕೈಗಾರಿಕಾ ವಲಯದಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಐವರು ಭಾರತೀಯರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಅಬುಧಾಬಿಯ ಕೈಗಾರಿಕಾ ವಲಯದಲ್ಲಿ ಘಟನೆ ನಡೆದಿದೆ. ದಾಳಿಯಲ್ಲಿ ಐದು ಮಂದಿ ಭಾರತೀಯರಿಗೆ ಗಾಯಗಳಾಗಿವೆ ಎಂದು ಸರ್ಕಾರದ ಮಾಧ್ಯಮ ಕಚೇರಿ ಮಾಹಿತಿ ನೀಡಿದೆ.

ಯುಎಇ ರಕ್ಷಣಾ ಸಚಿವಾಲಯದ ಮಾಹಿತಿ ನೀಡಿ, ಇರಾನ್‌ನಿಂದ ಹಾರಿಬಂದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ವಾಯು ರಕ್ಷಣಾ ವ್ಯವಸ್ಥೆ ತಡೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದೆ.

ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ನೆಲಕ್ಕೆ ಬಿದ್ದ ಪರಿಣಾಮ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆಂದು ತಿಳಿಸಿದ್ದಾರೆ.

ಈ ಘಟನೆ ಎಮಿರೇಟ್‌ನ ಖಲೀಫಾ ಆರ್ಥಿಕ ವಲಯಗಳ ಪ್ರದೇಶದಲ್ಲಿ ನಡೆದಿದ್ದು, ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

File photo
West Asia Conflict: ಪ್ರಧಾನಿ ಮೋದಿ-ಟ್ರಂಪ್ ದೂರವಾಣಿ ಮಾತುಕತೆ; ಎಲಾನ್ ಮಸ್ಕ್ ಎಂಟ್ರಿ; ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com