ಜನರು ಬರುತ್ತಿದ್ದಾರೆ, ಸಿಂಹಾಸನ ಖಾಲಿ ಮಾಡಿ: ಕೇಂದ್ರ ಸರ್ಕಾರಕ್ಕೆ ಶಶಿ ತರೂರ್ ಪರೋಕ್ಷ ಎಚ್ಚರಿಕೆ!

ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಸಂಸದ ಶಶಿ ತರೂರ್ ಅವರು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಕಿಡಿಕಾರಿದ್ದು, "ಸಿಂಹಾಸನ ಖಾಲಿ ಮಾಡಿ, ಜನತೆ ಬರುತ್ತಿದ್ದಾರೆ" ಎಂದು ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Shashi Tharoor
ಶಶಿ ತರೂರ್
Updated on: 

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ವಿರೋಧಿಸಿ ದೆಹಲಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಭಾರಿ ಬಿಗಿಭದ್ರತೆ ಹಾಗೂ ಕಠಿಣ ನಿಯಂತ್ರಣಗಳನ್ನು ಹೇರಿರುವುದನ್ನು ಖಂಡಿಸಿರುವ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್, ಪ್ರಸಿದ್ಧ ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಐತಿಹಾಸಿಕ ಕವಿತೆಯ ಸಾಲುಗಳನ್ನು ಉಲ್ಲೇಖಿಸಿ "ಸಿಂಹಾಸನ ಖಾಲಿ ಮಾಡಿ, ಜನತೆ ಬರುತ್ತಿದ್ದಾರೆ" ಎಂದು ಪರೋಕ್ಷವಾಗಿ ಕಠಿಣ ಎಚ್ಚರಿಕೆ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಪ್ರಸಿದ್ಧ ಕವನದ ಸಾಲುಗಳ ಉಲ್ಲೇಖ

ಹಿಂದಿ ಸಾಹಿತ್ಯದ ಖ್ಯಾತ ಕವಿ ರಾಮಧಾರಿ ಸಿಂಗ್ ದಿನಕರ್ ಅವರ ಪ್ರಸಿದ್ಧ ಕವಿತೆಯಾದ 'ಜನತಂತ್ರ ಕಾ ಜನ್ಮ' (ಪ್ರಜಾಪ್ರಭುತ್ವದ ಜನನ) ಕವನದ ಸಾಲುಗಳಾದ "ಸಿಂಹಾಸನ ಖಾಲಿ ಕರೋ ಕಿ ಜನತಾ ಆತಿ ಹೈ" (ಸಿಂಹಾಸನ ಖಾಲಿ ಮಾಡಿ, ಜನತೆ ಬರುತ್ತಿದ್ದಾರೆ) ಎಂಬುದನ್ನು ಟ್ವೀಟ್ ಮಾಡುವ ಮೂಲಕ ತರೂರ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಹಿಂದೆ ತುರ್ತು ಪರಿಸ್ಥಿತಿಯ ಸಮಯದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರ ವಿರುದ್ಧದ ಪ್ರತಿಭಟನೆಯಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರು ಇದೇ ಸಾಲುಗಳನ್ನು ಬಳಸಿ ದೇಶಾದ್ಯಂತ ಜನಜಾಗೃತಿ ಮೂಡಿಸಿದ್ದರು ಎಂಬುದು ಗಮನರ್ಹ.

Shashi Tharoor
ಪ್ರಧಾನಿ ಮೋದಿಗೇಕೆ ಭಯ?; ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳ ಪಟ್ಟಿಯಿಂದ ತೆಗೆದುಹಾಕಿದ್ದರ ಕುರಿತು CJP ಪ್ರತಿಕ್ರಿಯೆ

ಮುಂದುವರೆದು, ಕಾಕ್ರೋಚ್ ಜನತಾ ಪಾರ್ಟಿ ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ತಡೆಯಲು ದೆಹಲಿಯನ್ನು ಕೋಟೆಯನ್ನಾಗಿ ಪರಿವರ್ತಿಸಲಾಗಿತ್ತು. ಇದನ್ನು ಖಂಡಿಸಿದ್ದ ತರೂರ್, ಪ್ರಧಾನಿ ನರೇಂದ್ರ ಮೋದಿ ಅವರು 2015 ರಲ್ಲಿ ತುರ್ತು ಪರಿಸ್ಥಿತಿ ಕುರಿತು ಮಾಡಿದ್ದ ಟ್ವೀಟ್ ಅನ್ನೇ ಅವರಿಗೆ ಮರು ನೆನಪಿಸಿ, "ಇಂದಿನ ಯುವ ಪೀಳಿಗೆಗೆ (Gen Z) ಅದೇ ಪಾಠಗಳನ್ನು ಕಲಿಸುತ್ತಿದ್ದಕ್ಕಾಗಿ ಧನ್ಯವಾದಗಳು ಮೋದಿಜೀ, ನಮ್ಮ ಯುವಕರಿಗೆ ಇಂತಹ ಘೋಷಿತವಲ್ಲದ ತುರ್ತು ಪರಿಸ್ಥಿತಿಯ ಅಗತ್ಯವಿಲ್ಲ" ಎಂದು ಲೇವಡಿ ಮಾಡಿದ್ದರು. ಇದಕ್ಕೂ ಮುನ್ನ ಅಕ್ಟೋಬರ್ 12 ರಂದು ರಾಹುಲ್ ಗಾಂಧಿ ಅವರ ಪೋಸ್ಟ್ ಒಂದನ್ನು ಮರುಟ್ವೀಟ್ ಮಾಡಿದ್ದ ಶಶಿ ತರೂರ್, ಈ ಸರ್ಕಾರ ತೊಲಗಲಿದೆ ಎಂದು ಬರೆದುಕೊಂಡು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com