ಇತರೆ
ಫೋಟೋ ಕ್ಲಿಕ್ ಜುಲೈ 2015
ಫೋಟೋ ಕ್ಲಿಕ್ ಜುಲೈ 2015
ಕಲಾಂಗೆ ನಮ್ಮ ಸಲಾಂ... ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರಿಗೆ ಶುಕ್ರವಾರ ಗುರಗಾಂವನ ಶಾಲೆಯೊಂದರಲ್ಲಿ ಮಕ್ಕಳು ಶ್ರದ್ಧಾಂಜಲಿ ಸಲ್ಲಿಸಿದ್ದು ಹೀಗೆ.
Published On :
ಮುಂಬೈನಲ್ಲಿ ನಡೆದ ಜಲಕ್ ದಿಕ್ ಲಾಜಾ ಸೀಸನ್-8ರ ಸೆಟ್ ನಲ್ಲಿದ್ದ ನೃತ್ಯ ಪ್ರದರ್ಶಿಸಿದ ಕ್ರಿಕೆಟಿಗ ಇರ್ಫಾನ್ ಫಠಾಣ್.
ಖ್ಯಾತ ಮರಳು ಶಿಲ್ಪಕಲಾವಿದ ಸುದರ್ಶನ್ ಪಟ್ನಾಯಕ್ ಅವರು <span class=
ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಹಿನ್ನೆಲೆಯಲ್ಲಿ ಬೆಂಗಳೂರಿನ ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕೋರ್ಟ್‍ನಲ್ಲಿ ಅಭ್ಯಾಸ ನಡೆಸುತ್ತಿರುವ ಭಾರತದ ನಂ.1 ಹಾಗೂ ಜಗತ್ತಿನ ನಂ.2 ಆಟಗಾರ್ತಿ ಸೈನಾ ನೆಹ್ವಾಲ್ ಬಿಡುವಿನ ಸಂದರ್ಭದಲ್ಲಿದ್ದ ವೇಳೆ ಛಾಯಾಗ್ರಾಹಕರ ಕಣ್ಣಿಗೆ ಸೆರೆಯಾದ ಸಂದರ್ಭವನ್ನು ಕೋಚ್ ವಿಮಲ್ ಕುಮಾರ
ಮಾಜಿ ರಾಷ್ಟ್ರಪತಿ, ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ನಿಧನದ ಸೂಚಕವಾಗಿ ವಿಧಾನಸೌಧದ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿದೆ. ಚಿತ್ರ-ನಾಗೇಶ್ ಪೊಳಲಿ
ಶತಾಯುಷಿಗೆ ಶತಮಾನದ ಗೌರವ: ಸೋಮವಾರ ನಡೆದ ಮೈಸೂರು ವಿವಿ ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ವಿವಿ ಹಳೆಯ ವಿದ್ಯಾರ್ಥಿಯಾಗಿರುವ ಶತಾಯುಷಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗೌರವಿಸಿದರು.
ಫ್ಯಾಷನ್ ವೀಕ್ 2015... ಬೆಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ಬೆಂಗಳೂರು ಫ್ಯಾಷನ್ ವೀಕ್ 2015ರಲ್ಲಿ ಬಾಲಿವುಡ್ ನಡಿ ಲಿಸಾ ರೇ ನೂತನ ವಿನ್ಯಾಸದ ವಸ್ತ್ರ ತೊಟ್ಟು ಗಮನ ಸೆಳೆದದ್ದು ಹೀಗೆ.
ಅಸ್ಸೆಂಬ್ಲಿಯಲ್ಲೂ ಡ್ರೆಸ್‌ಕೋಡ್... ವಿಧಾನಸಭೆಗೆ ಒಂದೇ ಬಣ್ಣದ ಸೀರೆ ಉಟ್ಟುಬಂದ ಶಾಸಕಿಯರಾದ ಶಕುಂತಲಾ ಶೆಟ್ಟಿ, ಶಾರದಾ ಶೆಟ್ಟಿ ಹಾಗೂ ವಿನಿಶಾ ನೆರೂ ಉಭಯ ಕುಶಲೋಪರಿ.
ಮೈನಾ ಮಲ್ಲ ಯುದ್ಧ...
ಸಂಸತ್ ಭವನದ ಆವರಣದ ಹಚ್ಚ ಹಸಿರ ಹುಲ್ಲು ಹಾಸಿನ ಮೇಲೆ ಮೈನಾ ಹಕ್ಕಿಗಳು ಮಲ್ಲಯುದ್ಧ ಮಾಡಿದ ಪರಿ.
ಮೈನಾ ಮಲ್ಲ ಯುದ್ಧ...ಸಂಸತ್ ಭವನದ ಆವರಣದ ಹಚ್ಚ ಹಸಿರ ಹುಲ್ಲು ಹಾಸಿನ ಮೇಲೆ ಮೈನಾ ಹಕ್ಕಿಗಳು ಮಲ್ಲಯುದ್ಧ ಮಾಡಿದ ಪರಿ.
ದೇವರೇ ಗತಿ... ಸಂಸತ್ ಭವನದಲ್ಲಿ ಭೇಟಿಯಾದ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ಹಾಗೂ ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್. ದಿನವೂ ಕಲಾಪಕ್ಕೆ ಅಡ್ಡಿಯಾದರೆ ದೇವರೇ ಗತಿ ಎಂದು ಜೈರಾಮ್ ರಮೇಶ್, ಆದಿತ್ಯನಾಥ್‌ಗೆ ಹೇಳುವಂತಿದೆ.
ಎಷ್ಟು ಮುದ್ದಾಗಿದ್ದೀಯಾ ಕಣಮ್ಮ... ಕೋಲ್ಕತಾದಲ್ಲಿ ಮಂಗಳವಾರ ನಡೆದ ಹುತಾತ್ಮರ ದಿನದ ರ್ಯಾಲಿ ವೇಳೆ ಟಾಲಿವುಡ್ ನಟಿಯರೊಂದಿಗೆ ಮಾತನಾಡುತ್ತಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ.
ಆತ್ಮಹತ್ಯೆಯ ಅಣಕು ಪ್ರದರ್ಶನ... ರೈತರ ಆತ್ಮಹತ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ಕೃಷಿಕ ಸಮಾಜ ನವದೆಹಲಿ ಸಂಘದ ಕಾರ್ಯಕರ್ತರು ಬೆಂಗಳೂರಿನ ಫ್ರೀಡಂಪಾರ್ಕ್ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ರೈತರ ಆತ್ಮಹತ್ಯೆಯ ಅಣಕು ಪ್ರದರ್ಶನ ನೀಡಿ, ಸರ್ಕಾರದ ವಿರುದ್ಧ ಕಿಡಿಕಾರಿದರು.
ಸಿಎಂ ಸಾಂತ್ವನ... ಮಂಡ್ಯ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಎಚ್.ಎಲ್.ಶಿವಲಿಂಗೇಗೌಡ ಅವರ ನಿವಾಸಕ್ಕೆ ಭೇಟಿ ಮಾಡಿದಾಗ ಮೃತ ರೈತನ ತಾಯಿ ನೋವಿನಿಂದ ಸಿಎಂರನ್ನ ತಬ್ಬಿದ ಕ್ಷಣ.
ಹ್ಯಾಪಿ ರಂಜಾನ್ ಪುಟ್ಟ... ಈದ್-ಉಲ್-ಫಿತರ್ ಹಬ್ಬದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಬಾಂಧವರಿಗೆ ಶುಭಕೋರಿದರು.
ಹ್ಯಾಪಿ ಈದ್... ಮೊರದಾಬಾದ್‌ನ ಶಾಲಾ ಮಕ್ಕಳು ಶುಕ್ರವಾರ ಈದ್-ಉಲ್-ಫಿತರ್ ಹಬ್ಬದ ಪ್ರಯುಕ್ತ ಶುಭಾಶಯ ಕೋರಿದ್ದು ಹೀಗೆ.
ಲೋಕಾಯುಕ್ತರ ರಾಜಿನಾಮೆಗೆ ಒತ್ತಾಯಿಸಿ ಬುಧವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಎಸ್.ಆರ್.ಹಿರೇಮಠ ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು.
ಮಾಡೆಲ್ ಸೆಲ್ಫೀ... ಮುಂಬೈನಲ್ಲಿ ಬುಧವಾರ ನಡೆದ ಲ್ಯಾಕ್ಮೆ ಫ್ಯಾಷನ್ ವೀಕ್‌ನ ಆಡಿಷನ್ ವೇಳೆ ಮಾಡೆಲ್ಸ್ ಸೆಲ್ಫೀ ತೆಗೆದುಕೊಂಡಿದ್ದು ಹೀಗೆ.
ಸೋನಿಯಾ ಗಾಂಧಿ ಇಫ್ತಾರ್ ಕೂಟ... ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಹಾಗೂ ಇತರ ನಾಯಕರು.
ಚಾಂಪಿಯನ್ಸ್ ಡ್ಯಾನ್ಸ್... ಲಂಡನ್ ನಲ್ಲಿ ಭಾನುವಾರ ರಾತ್ರಿ ನಡೆದ ವಿಂಬಲ್ಡನ್ ಔತಣಕೂಟದಲ್ಲಿ ಈ ವರ್ಷದ ಚಾಂಪಿಯನ್ ಗಳಾದ ನೊವಾಕ್ ಜೊಕವಿಚ್ ಮತ್ತು ಸೆರೆನಾ ವಿಲಿಯಮ್ಸ್ ವೇದಿಕೆ ಮೇಲೆ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದು ಹೀಗೆ.
ಯೆಝಡಿ ಮೋಹ...ಬೆಂಗಳೂರಿನಲ್ಲಿ ಭಾನುವಾರ ನಡೆದ 13ನೇ ಅಂತಾರಾಷ್ಟ್ರೀಯ ಜಾವಾ ದಿನಾಚರಣೆಯಲ್ಲಿ ತರುಣಿಯೊಬ್ಬರು ಯೆಝಡಿ ಬೈಕ್ ಮೇಲೆ ಕುಳಿತು ಸಂಭ್ರಮಿಸಿದ ಕ್ಷಣ.
ಸ್ಯಾನ್ ಫರ್ಮಿನ್ ಉತ್ಸವ: ಸ್ಪೇನ್‍ನ ಪ್ಯಾಂಪ್ಲೋನಾದಲ್ಲಿ ಈಗ ಸ್ಯಾನ್ ಫರ್ಮಿನ್ ಉತ್ಸವದ ಸಂಭ್ರಮ. ಪ್ರತಿ ವರ್ಷ ಇಲ್ಲಿ 8 ದಿನಗಳ ಕಾಲ ಗೂಳಿಗಳ ಓಟ ನಡೆಯುತ್ತದೆ. ಇದನ್ನು ನೋಡಲೆಂದೇ ದೇಶ ವಿದೇಶಗಳಿಂದ ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಶನಿವಾರ ನಡೆದ ಗೂಳಿ ಓಟವನ್ನು ಜನರು ಬಾಲ್ಕನಿಯಲ್ಲಿ ನಿಂತು
ರಾಜನೋಟ... ಎತ್ತರದ ಗುಂಬಜ್‌ವೊಂದರ ಮೇಲೆ ನಿಂತು ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನ ಸೌಂಧರ್ಯವನ್ನು ಸವಿಯುತ್ತಿರುವ ಜೋಡಿ. ಈ ಚಿತ್ರದಲ್ಲಿ ಇಸ್ತಾಂಬುಲ್‌ನಲ್ಲಿ ನಿರ್ಮಿಸಲಾಗಿರುವ ಹೊಸ ಮಸೀದಿಯನ್ನು ಕಾಣಬಹುದು.
ಹುಬ್ಬಳ್ಳಿಯಲ್ಲಿ ಕೇಂದ್ರ ಕೃಷಿ ಸಚಿವರ ಎತ್ತಿನ ಗಾಡಿ ಯಾತ್ರೆ: ಹುಬ್ಬಳ್ಳಿಯ ಅಮರಗೋಳದಲ್ಲಿ ಶುಕ್ರವಾರ ನಡೆದ ಎಪಿಎಂಸಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು ಆಗಮಿಸಿದ್ದು ಹೀಗೆ.
ಕಿಂಗ್ ಖಾನ್ ಸೆಲ್ಫೀ : ಬಾಲಿವುಡ್ ನಟ ಶಾರುಖ್ ಖಾನ್ ಕ್ಯಾಲಿಫೋರ್ನಿಯಾ ಪ್ರವಾಸದಲ್ಲಿ ತನ್ನ ಮಗ ಆರ್ಯನ್ ಮತ್ತು ಮಗಳು ಸುಹಾನಾ ಜತೆ ಸೆಲ್ಫಿ ತೆಗೆದು ಖುಷಿ ಪಟ್ಟ ಕ್ಷಣ.
<div style=
ಕಿಂಗ್ ಖಾನ್ ಸೆಲ್ಫೀ : ಬಾಲಿವುಡ್ ನಟ ಶಾರುಖ್ ಖಾನ್ ಕ್ಯಾಲಿಫೋರ್ನಿಯಾ ಪ್ರವಾಸದಲ್ಲಿ ತನ್ನ ಮಗ ಆರ್ಯನ್ ಮತ್ತು ಮಗಳು ಸುಹಾನಾ ಜತೆ ಸೆಲ್ಫಿ ತೆಗೆದು ಖುಷಿ ಪಟ್ಟ ಕ್ಷಣ.<div style=
ಬುಲ್ ಬುಲ್ ಏಟಾಗಕ್ಕಿಲ್ವಾ? ಸ್ಪೇನ್‌ನ ಪಂಪ್ಲೊನಾದಲ್ಲಿ ಆಯೋಜಿಸಲಾಗಿರುವ ಸ್ಯಾನ್ ಫರ್ಮಿನ್ ಫೆಸ್ಟಿವಲ್‌ನಲ್ಲಿ ಗೂಳಿಯನ್ನು ರೇಗಿಸುತ್ತಿರುವ ಉತ್ಸಾಹಿ ಯುವಕರು. ಪ್ರತಿವರ್ಷ ನಡೆಯುವ ಈ ಉತ್ಸವಕ್ಕೆ ವಿಶ್ವದ ಎಲ್ಲೆಡೆಯಿಂದ ಜನ ಆಗಮಿಸುತ್ತಾರೆ. ಒಟ್ಟು 8 ದಿನಗಳ ಕಾಲ ಈ ಕಾರ್ಯಕ್ರಮ ನಡೆಯಲಿದೆ.
ಇದೆಂಥಾ ವಿಪರ್ಯಾಸ! ಬೆಂಗಳೂರಿನ ಮಿನರ್ವ ವೃತ್ತದ ಬಳಿ ಜಲಮಂಡಳಿ ಕಾಮಗಾರಿ ನಿರ್ವಹಿಸುತ್ತಿರುವ ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ನಿದ್ರೆಗೆ ಜಾರಿದ ತನ್ನ ಹಸುಗೂಸನ್ನು ಅಲ್ಲೇ ಇದ್ದ ನೋ ಪಾರ್ಕಿಂಗ್ ಬೋರ್ಡ್‌ಗೆ ಸೀರೆ ಬಳಸಿ ಜೋಲಿ ಕಟ್ಟಿ ಮಲಗಿಸಿದ ಕ್ಷಣ. ಚಿತ್ರ-ಪಿ.ಸುರೇಶ್
ಉಳುವ ಯೋಗಿಯ ನೋಡಿಲ್ಲಿ! ಬೆಳಗಾವಿಯ ಸುವರ್ಣಸೌಧದ ಒಳಗೆ ರೈತರ ಸಮಸ್ಯೆ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಅಲ್ಲೇ ಸ್ವಲ್ಪ ದೂರದಲ್ಲಿ ನೆಲ ಉಳಲು ರೈತರೊಬ್ಬರಿಗೆ ತಾಯಿ ಹಾಗೂ ಮಡದಿ ಹೆಗಲು ಕೊಟ್ಟಿರುವುದು. ಚಿತ್ರ- ಏಕನಾಥ ಅಗಸೀಮನಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ಭಾನುವಾರವೂ ಮುಂದುವರಿದಿದೆ. ಬಾಲ್ತಾಲ್‌ನ ಪರ್ವತ ಪ್ರದೇಶದ ಮೂಲಕ ಸಮುದ್ರ ಮಟ್ಟದಿಂದ 3,880 ಮೀಟರ್ ಎತ್ತರದಲ್ಲಿರುವ ಶಿವಲಿಂಗವನ್ನು ನೋಡಲು ಸಾಲಿನಲ್ಲಿ ತೆರಳುತ್ತಿರುವ ಯಾತ್ರಿಕರು.
ಮೈಸೂರು ಜಿಲ್ಲೆಯ ನಾಗರಹೋಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಜಿಂಕೆಗಳನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ದೃಶ್ಯ ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದು ಹೀಗೆ.
ವಿದೇಶಿ ಕಿಕ್... ಕೋಲ್ಕತಾದ ಬ್ರಿಗೇಡ್ ಮೈದಾನದಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳ ಜತೆಗೆ ಫುಟ್ಬಾಲ್ ಆಡುತ್ತಿರುವ ವಿದೇಶಿ ಎನ್‌ಜಿಒ ಸದಸ್ಯರು.
ಡೆಂಘೀ ಜಾಗೃತಿಗೆ ಮೇಘ ಸಂದೇಶ... ಬೆಂಗಳೂರಿನ ಪ್ರೆಸ್ ಕ್ಲಬ್ ಮತ್ತು ಬಿಬಿಎಂಪಿ ಸಹಯೋಗದಲ್ಲಿ ಬುಧವಾರ ನಡೆದ ಡೆಂಘೀ ರೋಗ ತಡೆ ಜಾಗೃತಿ ವೇಳೆ ಸಿಬ್ಬಂದಿಯೊಬ್ಬ ಸೊಳ್ಳೆ ನಿಯಂತ್ರಿಸುವ ಹೊಗೆ ಹರಡುವ ಮೂಲಕ ಮೇಘದ ಅಲೆಗಳನ್ನು ಸೃಷ್ಟಿಸಿದರು.
ಗುಂಡಿ ಮುಚ್ತೀರೋ ಇಲ್ವೋ? ರಾಜ್ಯದ ರಸ್ತೆಗಳ ದುರವಸ್ಥೆ ಬಗ್ಗೆ ಬಗ್ಗೆ ಬೆಳಗಾವಿಯ ಸದನದಲ್ಲಿ ಗಮನ ಸೆಳೆದ ವಿಧಾನ ಪರಿಷತ್ ಸದಸ್ಯೆ ಜಯಮಾಲಾ.
ತಂಪಾಯ್ತು... ಮಂಗಳವಾರ ವಿಧಾನಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರು ಕುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.