ಯೋಧ ಮಂಜುನಾಥನಿಗೆ ಭಾವಪೂರ್ಣ ವಿದಾಯ... ನವೆಂಬರ್ 26ರಂದು ಛತ್ತೀಸ್ ಗಢದ ನಡೆದ ನಕ್ಸಲ್ ದಾಳಿಯಲ್ಲಿ ಹುತಾತ್ಮರಾದ ಸಿಆರ್ ಪಿಎಫ್ ಯೋಧ ಮಂಜುನಾಥ್ ಜಕ್ಕಣ್ಣನವರ್ ಅವರಿಗೆ ಧಾರವಾಡ ಜಿಲ್ಲೆಯ ಅವರ ಸ್ವಗ್ರಾಮ ಮನಗುಂಡಿಯಲ್ಲಿ ಸಾವಿರಾರು ಜನ ಅಂತಿಮ ನಮನ ಸಲ್ಲಿಸಿ ಭಾವಪೂರ್ಣ ವಿದಾಯ ಹೇಳಿದರು.
ವರ್ಣ ದರ್ಬಾರು... ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ನಡೆಯುತ್ತಿರುವ ವರ್ಣ ದರ್ಬಾರು ಚಿತ್ರಕಲಾ ಪ್ರದರ್ಶನ(ನವೆಂಬರ್ 27ರಿಂದ ಡಿಸೆಂಬರ್ 3ರ ವರೆಗೆ)ವನ್ನು ವೀಕ್ಷಿಸುತ್ತಿರುವ ಮಹಿಳೆಯರು.
ಅಕ್ಷರ ಜಾತ್ರೆಯಲ್ಲಿ ಮಲ್ಲಕಂಬ.... ಮೈಸೂರಿನಲ್ಲಿ ನಡೆಯುತ್ತಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ವಿದ್ಯಾರ್ಥಿಗಳ ಮಲ್ಲಕಂಬ ಪ್ರದರ್ಶನ ಜನರ ಗಮನ ಸೆಳೆಯಿತು.
ಸುವರ್ಣಸೌಧ, ಮಕ್ಕಳಾಟ... ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣಸೌಧದ ಬಳಿ ಬುಧವಾರ ಶಾಲಾ ಮಕ್ಕಳು ಆಟವಾಡುತ್ತಿರುವ ದೃಶ್ಯ ಕಂಡುಬಂದಿದ್ದು ಹೀಗೆ.
ರಜನಿಗೆ ಮಂತ್ರಾಲಯ ಶ್ರೀಗಳ ಆಶೀರ್ವಾದ... ಖ್ಯಾತ ನಟ ರಜನಿಕಾಂತ್ ಅವರು ಸ್ನೇಹಿತರೊಂದಿಗೆ ಮಂಗಳವಾರ ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರಸ್ವಾಮಿ ಮಠದ ದರ್ಶನ ಮಾಡಿಕೊಂಡು, ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಆಶೀರ್ವಾದ ಪಡೆದರು.
ಅಭಿಮಾನದ ಸೆಲ್ಫಿ.... ವಿಶ್ವ ಮಕ್ಕಳ ದಿನಾಚರಣೆ ಅಂಗವಾಗಿ ದೆಹಲಿಯಲ್ಲಿ ಸೋಮವಾರ ಆಯೋಜಿಸಲಾಗಿದ್ದ ಫ್ರೆಂಡ್ಲಿ ಕ್ರಿಕೆಟ್ ಪಂದ್ಯದ ನಂತರ ಕ್ರಿಕೆಟ್ ದಿಗ್ಗಜ ಹಾಗೂ ಯುನಿಸೆಫ್ ದಕ್ಷಿಣ ಏಷ್ಯಾ ರಾಯಭಾರಿ ಸಚಿನ್ ತೆಂಡೂಲ್ಕರ್ ಅವರು ಮಕ್ಕಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ಹಿಮ ಖುಷಿ... ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಚಳಿಗಾಲದ ಮೊದಲ ಹಿಮಪಾತವಾಗುತ್ತಿದ್ದು, ಪ್ರವಾಸಿಗರು ಹಿಮ ಖುಷಿ ಅನುಭವಿಸಿದ್ದು ಹೀಗೆ.
ಖಾಸಗಿ ವೈದ್ಯರ ವಿರುದ್ಧ ಪ್ರತಿಭಟನೆ.... ರಾಜ್ಯ ಸರ್ಕಾರದ ಉದ್ದೇಶಿತ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ(ಕೆಪಿಎಂಇ) ಕಾಯ್ದೆ ವಿರೋಧಿಸಿ ಮುಷ್ಕರ ನಡೆಸುತ್ತಿರುವ ಖಾಸಗಿ ಆಸ್ಪತ್ರೆಗಳ ವೈದ್ಯರು ವಿರುದ್ಧ ಎನ್ ಜಿಒ ಕಾರ್ಯಕರ್ತರು ಗುರುವಾರ ಬೆಂಗಳೂರಿನ ವಿಲ್ಸನ್ ಗಾರ್ಡನ್ ಲ್ಲಿ ಪ್ರತಿಭಟನೆ ನಡೆಸಿ
ಕಡಲೆಕಾಯಿ ಪರಿಷೆ... ಐತಿಹಾಸಿಕ ಹಬ್ಬವೆಂದು ಪ್ರಸಿದ್ಧಿ ಪಡೆದಿರುವ ಬೆಂಗಳೂರು ಬಸವನಗುಡಿಯ ಕಡಲೆಕಾಯಿ ಪರಿಷೆಗೆ ಸೋಮವಾರ ಕೇಂದ್ರ ಸಚಿವ ಅನಂತ್ ಕುಮಾರ್ ಹಾಗೂ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು ಚಾಲನೆ ನೀಡಿದರು.
ದಿಗ್ಗಜ ನಾಯಕರಿಗೆ ಮೋದಿ ಉವಾಚ... ಫಿಲಿಫೈನ್ಸ್ ನ ಮನಿಲಾದಲ್ಲಿ ನಡೆಯುತ್ತಿರುವ ಅಷಿಯಾನ್ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಪಾನ್ ಪ್ರಧಾನಿ ಶಿಂಜೋ ಅಬೆ ಸೇರಿದಂತೆ ಇನ್ನಿತರ ನಾಯಕರಿಗೆ ಉಪದೇಶ ಮಾಡುತ್ತಿರುವ ದೃಶ್ಯ.
ಹೇಗಿದೆ ಟಿಪ್ಪು ಖಡ್ಗ?.... ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ವಿಧಾನಸೌಧದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಖಡ್ಗದೊಂದಿಗೆ ಕಾಣಿಸಿಕೊಂಡಿದ್ದು ಹೀಗೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದ ವೇಳೆ ಮಕ್ಕಳಿಬ್ಬರು ಟಿಪ್ಪು ಸುಲ್ತಾನ್ ವೇಷ ಧರಿಸಿ ಜನರ ಗಮನ ಸೆಳೆದರು.
ಶಿಲ್ಪಾ ಶೆಟ್ಟಿಯ ಗಜಪಡೆ... ಬ್ರಿಟಿಷ್ ಹೈಕಮಿಷನರ್ ಗುರುವಾರ ದೆಹಲಿಯಲ್ಲಿ ಆಯೋಜಿಸಿದ್ದ ಬ್ರಿಟನ್ - ಭಾರತ ದ್ವಿಪಕ್ಷೀಯ ಸಂಬಂಧ ಆಚರಣೆಯ ಔತಣಕೂಟದ ವೇಳೆ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಆನೆಗಳ ಕಲಾಕೃತಿಯೊಂದಿಗೆ ಪೋಸ್ ಕೊಟ್ಟಿದ್ದು ಹೀಗೆ.
ನೋಟ್ ನಿಷೇಧಕ್ಕೆ ಒಂದು ವರ್ಷ.... 500 ಹಾಗೂ 1000 ರುಪಾಯಿ ನೋಟ್ ನಿಷೇಧಕ್ಕೆ ಒಂದು ವರ್ಷ(ನವೆಂಬರ್ 8) ತುಂಬಿದ ಹಿನ್ನೆಲೆಯಲ್ಲಿ ಬಾಟಲ್ ಕಲಾವಿದ ಬಸವರಾಜ್ ಅವರು ಹಳೆ ಮತ್ತು ಹೊಸ ನೋಟ್ ಗಳನ್ನು ತಮ್ಮ ಬಾಟಲ್ ನಲ್ಲಿ ಸೆರೆ ಹಿಡಿದಿದ್ದು ಹೀಗೆ.
ಟೀಂ ಇಂಡಿಯಾ ಆಟಗಾರ ಯಾರು ಗೊತ್ತಾ... ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರು 29ನೇ ವಸಂತಕ್ಕೆ ಕಾಲಿಟ್ಟಿದ್ದು ಈ ವೇಳೆ ಸಹ ಆಟಗಾರರೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಸಿಎಂ ಸಿದ್ದರಾಮಯ್ಯ ಕರಾಟೆ ಪಂಚ್...ಮಂಗಳೂರಿನ ನೆಹರೂ ಮೈದಾನದಲ್ಲಿ ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಬಳಿಕ ವೇದಿಕೆ ಮೇಲೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾಗೆ ಕರಾಟೆ ಪಂಚ್ ನೀಡಿದರು.
ಹ್ಯಾಪಿ ಬರ್ತ್ ಡೇ.... ಬಾಲಿವುಡ್ ನಟ ಶಾರುಖ್ ಖಾನ್ ಅವರು ಗುರುವಾರ ಮುಂಬೈನ ತಮ್ಮ ನಿವಾಸದಲ್ಲಿ ಕೇಕ್ ಕಟ್ ಮಾಡುವ ಮೂಲಕ 52ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು.
ಬಾಲಿವುಡ್ ನಟ ಶಾರುಖ್ ಖಾನ್ ಅವರು ಗುರುವಾರ ಮುಂಬೈನ ತಮ್ಮ ನಿವಾಸದಲ್ಲಿ ಕೇಕ್ ಕಟ್ ಮಾಡುವ ಮೂಲಕ 52ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಬಳಿಕ ತಮ್ಮ ಪುತ್ರನೊಂದಿಗೆ ಅಭಿಮಾನಿಗಳಿಗೆ ಅಭಿನಂದಿಸಿದ್ದು ಹೀಗೆ.
ನವೆಂಬರ್ 3ರಿಂದ 5ರ ವರೆಗೆ ನಡೆಯುವ ಹಂಪಿ ಉತ್ಸವದ ಪ್ರಯುಕ್ತ ಗುರುವಾರ ಹಂಪಿಯಲ್ಲಿ ರೈತರು ಎತ್ತಿನ ಗಾಡಿ ಮೆರವಣಿಗೆ ನಡೆಸಿದರು.