ಫೋಟೋ ಕ್ಲಿಕ್ ಏಪ್ರಿಲ್ 2018

ಕೇದಾರನಾಥ ದರ್ಶನ ಆರಂಭ...  ಚಾರ್ ಧಾಮ್ ಗಳಲ್ಲಿ ಒಂದಾದ ಕೇದಾರನಾಥನ ದರ್ಶನ ಭಾನುವಾರ ಆರಂಭವಾಗಿದ್ದು, ಎಪ್ರಿಲ್ 29ರಿಂದ 6 ತಿಂಗಳ ಕಾಲ ದರ್ಶನ ದೊರೆಯಲಿದೆ.
ಕೇದಾರನಾಥ ದರ್ಶನ ಆರಂಭ...  ಚಾರ್ ಧಾಮ್ ಗಳಲ್ಲಿ ಒಂದಾದ ಕೇದಾರನಾಥನ ದರ್ಶನ ಭಾನುವಾರ ಆರಂಭವಾಗಿದ್ದು, ಎಪ್ರಿಲ್ 29ರಿಂದ 6 ತಿಂಗಳ ಕಾಲ ದರ್ಶನ ದೊರೆಯಲಿದೆ.
Updated on: 
<b>ಸಾಮಾಜಿಕ ಮಾಧ್ಯಮದಲ್ಲಿ ಹಲ್ ಚಲ್ ಮೂಡಿಸುತ್ತಿದೆ ಕೊಹ್ಲಿ-ಧೋನಿ ಅಪ್ಪುಗೆ</b>...ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಅಪ್ಪುಗೆ ಸಾಮಾಜಿಕ ಮಾಧ್ಯಮದಲ್ಲಿ ಹಲ್ ಚಲ್ ಸೃಷ್ಟಿಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಹಲ್ ಚಲ್ ಮೂಡಿಸುತ್ತಿದೆ ಕೊಹ್ಲಿ-ಧೋನಿ ಅಪ್ಪುಗೆ...ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಅಪ್ಪುಗೆ ಸಾಮಾಜಿಕ ಮಾಧ್ಯಮದಲ್ಲಿ ಹಲ್ ಚಲ್ ಸೃಷ್ಟಿಸಿದೆ.
<b>ಡಾ.ರಾಜ್ 89ನೇ ಜನ್ಮದಿನ.... </b>ವರನಟ ಡಾ. ರಾಜ್ ಕುಮಾರ್ ಅವರ 89ನೇ ಜನ್ಮ ದಿನದ ಅಂಗವಾಗಿ ನಟ ಶಿವರಾಜ್ ಕುಮಾರ್, ಸಾರಾ ಗೋವಿಂದು ಹಾಗೂ ಇತರರು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿರುವ ರಾಜ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
ಡಾ.ರಾಜ್ 89ನೇ ಜನ್ಮದಿನ.... ವರನಟ ಡಾ. ರಾಜ್ ಕುಮಾರ್ ಅವರ 89ನೇ ಜನ್ಮ ದಿನದ ಅಂಗವಾಗಿ ನಟ ಶಿವರಾಜ್ ಕುಮಾರ್, ಸಾರಾ ಗೋವಿಂದು ಹಾಗೂ ಇತರರು ಬೆಂಗಳೂರಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿರುವ ರಾಜ್ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದರು.
<b>ಭೂಮಿ ಉಳಿಸಿ...</b> ಅಲಹಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾನುವಾರ ವಿಶ್ವ ಭೂಮಿ ದಿನದ ಅಂಗವಾಗಿ ಭೂಮಿಯ ಮಹತ್ವ ಮತ್ತು ಅದರ ಸಂರಕ್ಷ ಣೆ ಕುರಿತು ಗಂಗಾ ನದಿ ದಂಡೆಯಲ್ಲಿ ಮರಳು ಕಲಾಕೃತಿ ನಿರ್ಮಿಸಿ ಗಮನ ಸೆಳೆದರು.
ಭೂಮಿ ಉಳಿಸಿ... ಅಲಹಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಭಾನುವಾರ ವಿಶ್ವ ಭೂಮಿ ದಿನದ ಅಂಗವಾಗಿ ಭೂಮಿಯ ಮಹತ್ವ ಮತ್ತು ಅದರ ಸಂರಕ್ಷ ಣೆ ಕುರಿತು ಗಂಗಾ ನದಿ ದಂಡೆಯಲ್ಲಿ ಮರಳು ಕಲಾಕೃತಿ ನಿರ್ಮಿಸಿ ಗಮನ ಸೆಳೆದರು.
<b>ಮತದಾನ ಅಭಿಯಾನ...</b> ಮತದಾರರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಶನಿವಾರ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ, ವ್ಯಂಗ್ಯ ಚಿತ್ರ ಕಾರ್ಯಾಗಾರದ ವೇಳೆ ಯಕ್ಷಗಾನ ಕಲಾವಿದರೊಂದಿಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್.
ಮತದಾನ ಅಭಿಯಾನ... ಮತದಾರರಲ್ಲಿ ಜಾಗೃತಿ ಮೂಡಿಸಲು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಶನಿವಾರ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನ, ವ್ಯಂಗ್ಯ ಚಿತ್ರ ಕಾರ್ಯಾಗಾರದ ವೇಳೆ ಯಕ್ಷಗಾನ ಕಲಾವಿದರೊಂದಿಗೆ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್.
<b>ಕಡು ಬಿಸಿಲು-ಮಕ್ಕಳ ಈಜು ಮೋಜು...</b> ದಾವಣಗೆರೆಯಲ್ಲಿ ಬಿಸಿಲ ತಾಪದಿಂದ ರಕ್ಷಿಸಿಕೊಳ್ಳಲು ಬಾಲಕರಿಬ್ಬರು ಗುರುವಾರ ಕಾಲುವೆಗೆ ಜಿಗಿದಿದ್ದು ಹೀಗೆ.
ಕಡು ಬಿಸಿಲು-ಮಕ್ಕಳ ಈಜು ಮೋಜು... ದಾವಣಗೆರೆಯಲ್ಲಿ ಬಿಸಿಲ ತಾಪದಿಂದ ರಕ್ಷಿಸಿಕೊಳ್ಳಲು ಬಾಲಕರಿಬ್ಬರು ಗುರುವಾರ ಕಾಲುವೆಗೆ ಜಿಗಿದಿದ್ದು ಹೀಗೆ.
<b>ಬಸವಣ್ಣ ಬಂದ್ರು ದಾರಿ ಬಿಡಿ.....</b> ಬೆಳಗಾವಿಯಲ್ಲಿ ಬುಧವಾರ ಬಸವ ಜಯಂತಿ ಮೆರವಣಿಗೆಯಲ್ಲಿ ಜಗಜ್ಯೋತಿ ಬಸವಣ್ಣನವರ ವೇಶಧಾರಿ ಬಾಲಕ ಕಾಣಿಸಿಕೊಂಡಿದ್ದು ಹೀಗೆ.
ಬಸವಣ್ಣ ಬಂದ್ರು ದಾರಿ ಬಿಡಿ..... ಬೆಳಗಾವಿಯಲ್ಲಿ ಬುಧವಾರ ಬಸವ ಜಯಂತಿ ಮೆರವಣಿಗೆಯಲ್ಲಿ ಜಗಜ್ಯೋತಿ ಬಸವಣ್ಣನವರ ವೇಶಧಾರಿ ಬಾಲಕ ಕಾಣಿಸಿಕೊಂಡಿದ್ದು ಹೀಗೆ.
<b>ಜಸ್ಟಿಸ್ ಫಾರ್ ಆಸಿಫಾ... </b>ಜಮ್ಮು ಮತ್ತು ಕಾಶ್ಮೀರದ ಕತುವಾ ಬಾಲಕಿ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಬೆಂಗಳೂರಿನ ಟೌನ್ ಹಾಲ್ ಬಳಿ ವಿವಿಧ ಸಂಘಟನೆಯ ಕಾರ್ಯಕರ್ತರು ಹಾಗೂ ಮಕ್ಕಳು ಸೋಮವಾರ ಪ್ರತಿಭಟನೆ ನಡೆಸಿದ್ದು ಹೀಗೆ.
ಜಸ್ಟಿಸ್ ಫಾರ್ ಆಸಿಫಾ... ಜಮ್ಮು ಮತ್ತು ಕಾಶ್ಮೀರದ ಕತುವಾ ಬಾಲಕಿ ಅತ್ಯಾಚಾರ, ಹತ್ಯೆಯನ್ನು ಖಂಡಿಸಿ ಬೆಂಗಳೂರಿನ ಟೌನ್ ಹಾಲ್ ಬಳಿ ವಿವಿಧ ಸಂಘಟನೆಯ ಕಾರ್ಯಕರ್ತರು ಹಾಗೂ ಮಕ್ಕಳು ಸೋಮವಾರ ಪ್ರತಿಭಟನೆ ನಡೆಸಿದ್ದು ಹೀಗೆ.
<b>ದಲಿತರ ಮನೆಯಲ್ಲಿ ಉಪಹಾರ....</b> ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ನೆಲಮಂಗಲದ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದರು.
ದಲಿತರ ಮನೆಯಲ್ಲಿ ಉಪಹಾರ.... ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಅಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ನೆಲಮಂಗಲದ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದರು.
<b>ಮಾಸದ ರಾಜ್ ನೆನಪು...</b> ವರನಟ ಡಾ. ರಾಜ್ ಕುಮಾರ್ ಅವರ 12ನೇ ಪುಣ್ಯತಿಥಿ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅವರ ಪುತ್ರರಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ರಾಜ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಮಾಸದ ರಾಜ್ ನೆನಪು... ವರನಟ ಡಾ. ರಾಜ್ ಕುಮಾರ್ ಅವರ 12ನೇ ಪುಣ್ಯತಿಥಿ ಅಂಗವಾಗಿ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅವರ ಪುತ್ರರಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ ಕುಮಾರ್ ಅವರು ರಾಜ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
<b>ಮತ ಜಾಗೃತಿ.... </b>ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರು ಮಂಗಳವಾರ ವಿಕಾಸ್ ಸೌಧದಲ್ಲಿ ಮತ ಜಾಗೃತಿ ಮೂಡಿಸುವ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದರು.
ಮತ ಜಾಗೃತಿ.... ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಸಂಜೀವ್ ಕುಮಾರ್ ಅವರು ಮಂಗಳವಾರ ವಿಕಾಸ್ ಸೌಧದಲ್ಲಿ ಮತ ಜಾಗೃತಿ ಮೂಡಿಸುವ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿದರು.
<b>ರಾಹುಲ್ ಟೆಂಪಲ್ ರನ್.... </b>ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೇವಸ್ಥಾನ ದರ್ಶನ ಮುಂದುವರೆದಿದ್ದು, ಶನಿವಾರ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡಮಲೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ರಾಹುಲ್ ಟೆಂಪಲ್ ರನ್.... ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ದೇವಸ್ಥಾನ ದರ್ಶನ ಮುಂದುವರೆದಿದ್ದು, ಶನಿವಾರ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡಮಲೆ ಗಣಪತಿ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
<b>ಐಪಿಎಲ್ ತಾಲೀಮು...</b> ಐಪಿಎಲ್ 11ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅದ್ದೂರಿ ಚಾಲನೆಗಾಗಿ ನಟ-ನಿರ್ದೇಶಕ ಪ್ರಭುದೇವ್ ಅವರು ಶುಕ್ರವಾರ ತಾಲೀಮು ನಡೆಸಿದ್ದು ಹೀಗೆ.
ಐಪಿಎಲ್ ತಾಲೀಮು... ಐಪಿಎಲ್ 11ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದ್ದು, ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅದ್ದೂರಿ ಚಾಲನೆಗಾಗಿ ನಟ-ನಿರ್ದೇಶಕ ಪ್ರಭುದೇವ್ ಅವರು ಶುಕ್ರವಾರ ತಾಲೀಮು ನಡೆಸಿದ್ದು ಹೀಗೆ.
<b>ತಮಿಳುನಾಡು ಬಂದ್ ಎಫೆಕ್ಟ್....</b> ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಗುರುವಾರ ತಮಿಳುನಾಡು ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಚೆನ್ನೈನ ಕೊಯಂಬೆಡು ಬಸ್ ನಿಲ್ದಾಣದಲ್ಲಿ ಕೆಎಸ್ ಆರ್ ಟಿಸಿ ಸಿಬ್ಬಂದಿಯೊಬ್ಬರು ಬಿಡುವಾಗಿ ಮರಕ್ಕೆ ಜೋತು ಬಿದ್ದಿದ್ದು ಹೀಗೆ.
ತಮಿಳುನಾಡು ಬಂದ್ ಎಫೆಕ್ಟ್.... ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಒತ್ತಾಯಿಸಿ ಗುರುವಾರ ತಮಿಳುನಾಡು ಬಂದ್ ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಚೆನ್ನೈನ ಕೊಯಂಬೆಡು ಬಸ್ ನಿಲ್ದಾಣದಲ್ಲಿ ಕೆಎಸ್ ಆರ್ ಟಿಸಿ ಸಿಬ್ಬಂದಿಯೊಬ್ಬರು ಬಿಡುವಾಗಿ ಮರಕ್ಕೆ ಜೋತು ಬಿದ್ದಿದ್ದು ಹೀಗೆ.
<b>ಸಿದ್ಧಗಂಗಾ ಶ್ರೀಗಳ ಆರ್ಶೀವಾದ ಪಡೆದ ರಾಹುಲ್.....</b> ರಾಜ್ಯದಲ್ಲಿ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬುಧವಾರ ಸಂಜೆ ಸಿದ್ದಗಂಗಾ ಮಠಕ್ಕೆ ಭೇಟಿ ಶಿವಕಮಾರ ಸ್ವಾಮೀಜಿಗಳ ಆರ್ಶೀವಾದ ಪಡೆದರು.
ಸಿದ್ಧಗಂಗಾ ಶ್ರೀಗಳ ಆರ್ಶೀವಾದ ಪಡೆದ ರಾಹುಲ್..... ರಾಜ್ಯದಲ್ಲಿ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬುಧವಾರ ಸಂಜೆ ಸಿದ್ದಗಂಗಾ ಮಠಕ್ಕೆ ಭೇಟಿ ಶಿವಕಮಾರ ಸ್ವಾಮೀಜಿಗಳ ಆರ್ಶೀವಾದ ಪಡೆದರು.
<b>ಗಮನ ಸೆಳೆದ ಬೈಕ್ ಸ್ಟಂಟ್...</b>  ಬೆಂಗಳೂರಿನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜ್ ನ 21ನೇ ವಾರ್ಷಿಕೋತ್ಸವ ವೇಳೆ ಆಯೋಜಿಸಲಾಗಿದ್ದ ಬೈಕ್ ಸ್ಟಂಟ್ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಗಮನ ಸೆಳೆದ ಬೈಕ್ ಸ್ಟಂಟ್...  ಬೆಂಗಳೂರಿನ ಶ್ರೀ ಸಾಯಿರಾಮ್ ಇಂಜಿನಿಯರಿಂಗ್ ಕಾಲೇಜ್ ನ 21ನೇ ವಾರ್ಷಿಕೋತ್ಸವ ವೇಳೆ ಆಯೋಜಿಸಲಾಗಿದ್ದ ಬೈಕ್ ಸ್ಟಂಟ್ ವಿದ್ಯಾರ್ಥಿಗಳ ಗಮನ ಸೆಳೆಯಿತು.
<b>ಸಿಎಂ ಕೊರಳಿಗೆ 750 ಕೆಜಿ ಆಪಲ್ ಹಾರ...</b> ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ಪ್ರಚಾರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಗರು 750 ಕೆಜಿ ಆಪಲ್ ನಿಂದ ತಯಾರಿಸಿದ ಬೃಹತ್ ಹಾರವನ್ನು ಹಾಕುವ ಮೂಲಕ ಭರ್ಜರಿ ಸ್ವಾಗತ ಕೋರಿದರು.
ಸಿಎಂ ಕೊರಳಿಗೆ 750 ಕೆಜಿ ಆಪಲ್ ಹಾರ... ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾನುವಾರ ಪ್ರಚಾರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಬಲಿಗರು 750 ಕೆಜಿ ಆಪಲ್ ನಿಂದ ತಯಾರಿಸಿದ ಬೃಹತ್ ಹಾರವನ್ನು ಹಾಕುವ ಮೂಲಕ ಭರ್ಜರಿ ಸ್ವಾಗತ ಕೋರಿದರು.
ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ದಲ್ ಸರೋವರದ ಬಳಿಯಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. 
ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ದಲ್ ಸರೋವರದ ಬಳಿಯಿರುವ ಏಷ್ಯಾದ ಅತಿದೊಡ್ಡ ಟುಲಿಪ್ ಗಾರ್ಡನ್ ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತಿದೆ. 
ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವವು ಭಕ್ತಿ, ವಿಜೃಂಭಣೆ ಹಾಗೂ ವೈವಭಯುತವಾಗಿ ನಡೆಯಿತು. 
ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಇತಿಹಾಸ ಪ್ರಸಿದ್ಧ ಕರಗ ಮಹೋತ್ಸವವು ಭಕ್ತಿ, ವಿಜೃಂಭಣೆ ಹಾಗೂ ವೈವಭಯುತವಾಗಿ ನಡೆಯಿತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com