ಕೃಷ್ಣ ವೇಷಧಾರಿ ಪುಟಾಣಿಗಳ ಸಂಭ್ರಮ... ಪಾಟ್ನಾದಲ್ಲಿ ಪುಟಾಣಿಗಳು ಗುರುವಾರ ಶ್ರೀಕೃಷ್ಣನ ವೇಷ ತೊಟ್ಟು ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದು ಹೀಗೆ.
ಅನುಷ್ಕಾ ಸುಯಿ ದಾಗ್... ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ನಟ ವರುಣ್ ಧವನ್ ಅವರು ಸೋಮವಾರ ಜೈಪುರದಲ್ಲಿ ತಮ್ಮ ಸುಯಿ ದಾಗ್ ಚಿತ್ರದ ಪ್ರಚಾರದಲ್ಲಿ ತೊಡಗಿದ್ದು ಹೀಗೆ.
ಪುಟಾಣಿಗಳ ಬಕ್ರೀದ್ ಪ್ರಾರ್ಥನೆ... ಬಕ್ರೀದ್ ಹಬ್ಬದ ಅಂಗವಾಗಿ ಬುಧವಾರ ಧಾರವಾಡದಲ್ಲಿ ಮಕ್ಕಳು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದು ಹೀಗೆ.
ಕೇರಳ ಪ್ರವಾಹ ಸಂತ್ರಸ್ಥರಿಗೆ ಗೌರವ... ಅಮೃತಸರದಲ್ಲಿ ವ್ಯಕ್ತಿಯೊಬ್ಬರು ಮಂಗಳವಾರ ದೀಪಗಳನ್ನು ಬೆಳಗಿಸುವ ಮೂಲಕ ಕೇರಳ ಪ್ರವಾಹ ಸಂತ್ರಸ್ಥರಿಗೆ ಗೌರವ ಸಲ್ಲಿಸಿದರು.
ವಾಟಾಳ್ ಪ್ರತಿಭಟನೆ.... ಕೊಡಗು ಪ್ರವಾಹಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ತಕ್ಷಣ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಮತ್ತು ಮಳೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ 25 ಲಕ್ಷ ರು. ಪರಿಹಾರ ನೀಡಬೇಕೆಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಭಾನುವಾರ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ
ಮಹಾತ್ಮನಿಗೆ ಮೋದಿ ಪುಷ್ಪ ನಮನ.... 72ನೇ ಸ್ವಾಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ದೆಹಲಿಯ ರಾಜಘಾಟ್ ಗೆ ತೆರಳಿ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಸ್ವಾತಂತ್ರ್ಯೋತ್ಸವ ತಾಲೀಮು... ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಶನಿವಾರ ಸೇನಾ ಸಿಬ್ಬಂದಿ 72ನೇ ಸ್ವಾತಂತ್ರ್ಯೋತ್ಸವಕ್ಕೆ ತಾಲೀಮು ನಡೆಸಿದ್ದು ಹೀಗೆ.
ನಿಜಲಿಂಗಪ್ಪಗೆ ಸಿಎಂ ಪುಷ್ಪ ನಮನ.... ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪ ಅವರ ಪುಣ್ಯಸ್ಮರಣೆ ಪ್ರಯುಕ್ತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬುಧವಾರ ವಿಧಾನಸೌಧದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ರಾಫೆಲ್ ವಿರುದ್ಧ ಪ್ರತಿಭಟನೆ... ರಾಫೆಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ದೆಹಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.
ಫಲಪುಷ್ಪ ಪ್ರದರ್ಶನದ ಸಿದ್ಧತೆ... ಲಾಲ್ ಬಾಗ್ ನಲ್ಲಿ ಸ್ವಾತಂತ್ರ ದಿನಾಚರಣೆ ಪ್ರಯುಕ್ತ ಆಗಸ್ಟ್ 4ರಿಂದ 15ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.
ಹಂಪಿಯ ಪ್ರತಿಬಿಂಬ... ಮಳೆ ನೀರಿನಲ್ಲಿ ಹಂಪಿಯ ಶ್ರೀ ವಿರುಪಾಕ್ಷ ದೇವಾಲಯದ ಪ್ರತಿಬಿಂಬ ಕಾಣಿಸಿದ್ದು ಹೀಗೆ.
ಮೈಸೂರಿನಲ್ಲಿ ಆಷಾಢ ಮಾಸದ ಮೂರನೇ ಶುಕ್ರವಾರ ನಡೆದ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವದಲ್ಲಿ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಒಡೆಯರ್ ಹಾಗೂ ಅವರ ಪತ್ನಿ ತೃಷಿಕಾ ಅವರು ಭಾಗವಹಿಸಿದ್ದರು.