2016ರ ಅಕ್ಟೋಬರ್ 16ರಂದು ಮುಂಬೈ ಮೂಲದ ಉದ್ಯಮಿ ಗಗನ್ ದೀಪ್ ಸಿಂಗ್ ಮಾಗೋ ಅವರನ್ನು ವಿವಾಹವಾಗಿದ್ದ ಸ್ಯಾಂಡಲ್ ವುಡ್ ನಟಿ ಸಿಖಿತಾ ತುಕ್ರಾಲ್ ಅವರು ಫೆ.18 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಶಾಹಿದ್ ಕಪೂರ್
2015ರಲ್ಲಿ ದಾಂಪತ್ಯ ಜೀನನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ.
ಸನ್ನಿ ಲಿಯೋನ್
2017ರಲ್ಲಿ ನಿಶಾ ಎಂಬ ಹೆಣ್ಣು ಮಗುವನ್ನು ದತ್ತು ಪಡೆದಿದ್ದ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರು ಬಾಡಿಗೆ ತಾಯ್ತನದ ಮೂಲಕ ಮತ್ತೆರಡು ಮಕ್ಕಳಿಗೆ ತಾಯಿಯಾಗಿದ್ದಾರೆ. ತಮ್ಮ ಇಬ್ಬರು ಮಕ್ಕಳಿಗೆ ಸನ್ನಿ ಕಿರೆನ್ ಮತ್ತು ನೋಹಾ ಎಂದು ಹೆಸರಿಟ್ಟಿದ್ದಾರೆ.
ಅನು ಪ್ರಭಾಕರ್
2016 ಏಪ್ರಿಲ್5 ರಂದು ನಟ ರಘು ಮುಖರ್ಜಿಯವರನ್ನು ವಿವಾಹವಾಗಿದ್ದ ಸ್ಯಾಂಡಲ್ ವುಡ್ ನಟಿ ಅನು ಪ್ರಭಾಕರ್ ಅವರು, ಆಗಸ್ಟ್ 15 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಹೇಮಾ ಪಂಚಮುಖಿ
ರಂಗೋಲಿ ಚಿತ್ರದ ಖ್ಯಾತ ನಟ ಪ್ರಶಾಂತ್ ಗೋಪಾಲ್ ಅವರನ್ನು ವಿವಾಹವಾಗಿದ್ದ ಸ್ಯಾಂಡಲ್ ವುಡ್ ನಟಿ ಹೇಮಾ ಪಂಚಮುಖಿ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ನೇಹಾ ದೂಪಿಯಾ
ತಮ್ಮ ಬಹುಕಾಲದ ಗೆಳೆಯ ಅಂಗದ್ ಬೇಡಿಯವರನ್ನು ವಿವಾಹವಾಗಿದ್ದ ಬಾಲಿವುಡ್ ನಟಿ ನೇಹಾ ದೂಪಿಯಾ ಅವರು ನ.18 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಅಜಯ್ ರಾವ್
ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರ ಪತ್ನಿ ಸ್ವಪ್ನ ಅವರು ನವೆಂಬರ್ 23 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು.
ರಾಧಿಕಾ ಪಂಡಿತ್
ಸ್ಯಾಂಡಲ್ವುಡ್ ಸಿಂಡ್ರೆಲಾ ಎಂದೇ ಹೆಸರು ಪಡೆದಿರುವ ರಾಧಿಕಾ ಪಂಡಿತ್ ಅವರು ಡಿಸೆಂಬರ್ 2 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು.