ನಿಮ್ಮ ಹೃದಯ ಪ್ರೀತಿಸಿ.... ಬೆಂಗಳೂರಿನಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಶುಕ್ರವಾರ ಅಪೊಲೊ ಆಸ್ಪತ್ರೆ ಆಯೋಜಿಸಿದ್ದ ಐ ಲವ್ ಮೈ ಹಾರ್ಟ್ ಕಾರ್ಯಕ್ರಮದಲ್ಲಿ ಮಾನವ ನಿರ್ಮಿತ ಹೃದಯ ಎಲ್ಲರ ಗಮನ ಸೆಳೆಯಿತು.
ಕ್ರೀಡಾ ಸಾಧಕರು... ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನಡೆದ ಕ್ರೀಡಾ ಸಾಧಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ವೇಟ್ಲಿಫ್ಟರ್ ಮೀರಾಬಾಯಿ ಚಾನು ಸೇರಿದಂತೆ ಹಲವು ಕ್ರೀಡಾಪಟುಗಳು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.
ರಾಫೆಲ್ ವಿರುದ್ಧ ಕೈ ಪ್ರತಿಭಟನೆ... ದೆಹಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ರಾಫೆಲ್ ಡೀಲ್ ವಿರುದ್ಧ ಶನಿವಾರ ಪ್ರತಿಭಟನೆ ನಡೆಸಿದರು.
ಮೋದಿ ಮೆಟ್ರೋ ಪ್ರಯಾಣ.... ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ದ್ವಾರಕೆಯಲ್ಲಿ ಆಯೋಜಿಸಿದ್ದ ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಶನ್ ಆಂಡ್ ಎಕ್ಸ್‌ಪೋ ಉದ್ಘಾಟನೆಗೆ ಮೆಟ್ರೋದಲ್ಲಿ ತೆರಳಿದರು. ಈ ವೇಳೆ ತಮ್ಮ ಸಹ ಪ್ರಯಾಣಿಕರ ಜೊತೆ ಮಾತುಕತೆಯನ್ನೂ ನಡೆಸಿದರು.
ವಿಷ್ಣುದಾದಾ ಜನ್ಮದಿನ... ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 68ನೇ ಜನ್ಮದಿನವನ್ನು ಅವರ ಅಭಿಮಾನಿಗಳು ಮಂಗಳವಾರ ಸಂತಸ, ಸಂಭ್ರಮದಿಂದ ಆಚರಿಸಿದರು.
ತಾರೆಯರ ಗೌರಿ ಪೂಜೆ.... ಬೆಂಗಳೂರಿನ ಜಯನಗರದಲ್ಲಿ ನಟಿಯರಾದ ತಾರಾ, ಮಾಳವಿಕ ಹಾಗೂ ಇತರರು ಬುಧವಾರ ಗೌರಿ ಹಬ್ಬ ಆಚರಿಸಿದ್ದು ಹೀಗೆ.
ಕಾಮನೆಗಳ ಬಿಲ್ಲು, ಕಾಮನಬಿಲ್ಲು! ಕೊಲ್ಕತ್ತಾದಲ್ಲಿ ನಡೆದ ರೈನ್ ಬೋ ಕಲರ್ ಆಫ್ ಪ್ರೈಡ್ ಫೇಸ್ ಫೇಮ್ ಫ್ಯಾಷನ್ ನಲ್ಲಿ ಮಾಡೆಲ್ ಗಳ ಪೋಸ್.
ಕ್ಲಿಕ್ ಕ್ಲಿಕ್ ಕ್ಲಿಕ್... ವಿಶ್ವ ಛಾಯಾಚಿತ್ರ ದಿನದ ಅಂಗವಾಗಿ ಮಂಗಳವಾರ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ಛಾಯಾಚಿತ್ರ ಪ್ರದರ್ಶನವನ್ನು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಫೋಟೋ ತೆಗೆಯುವ ಮೂಲಕ ಉದ್ಘಾಟಿಸಿದರು.
ಸೇನೆಗೆ ಸೇರುವ ಸಂಭ್ರಮ.... ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ ಶನಿವಾರ ನಡೆದ ಪಾಸಿಂಗ್ ಔಟ್ ಪರೇಡ್ ನಂತರ ಕೆಡೆಟ್ ಗಳು ಸಹೋದ್ಯೋಗಿಯನ್ನು ಮೇಲಕ್ಕೇಸೆದು ಸಂಭ್ರಮಿಸಿದ್ದು ಹೀಗೆ.
ಕಾಪಾಡು ಕೃಷ್ಣ..... ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶುಕ್ರವಾರ ಉಡುಪಿಯ ಕೃಷ್ಣ ಮಠಕ್ಕೆ ಭೇಟಿ ನೀಡಿ, ಶ್ರೀ ಕೃಷ್ಣನ ದರ್ಶನ ಪಡೆದರು.
ವಿಟ್ಲ ಪಿಂಡಿ ಉತ್ಸವ... ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಸೋಮವಾರ ಉಡುಪಿಯಲ್ಲಿ ನಡೆದ ವಿಟ್ಲ ಪಿಂಡಿ ಉತ್ಸವದಲ್ಲಿ ಯುವಕರು ಮೊಸರಿನ ಕುಡಿಕೆ ಹೊಡೆಯುತ್ತಿರುವುದು.
ಪುಟಾಣಿ ಕೃಷ್ಣರೊಂದಿಗೆ ಸೆಲ್ಫಿ.... ಅಮೃತಸರದಲ್ಲಿ ಶನಿವಾರ ಬಿಎಸ್ ಎಫ್ ಯೋಧರೊಬ್ಬರು ಶ್ರೀಕೃಷ್ಣನ ವೇಷ ತೊಟ್ಟು ಪುಟಾಣಿಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದು ಹೀಗೆ.
ನಂದಿ ಸಂತೆ..... ನಂದಿ ಬೆಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆಯೋಜಿಸಿದ್ದ ನಂದಿ ಸಂತೆ ಉದ್ಘಾಟನೆ ವೇಳೆ ಜನಪದ ಕಲಾವಿದರು ಜನರ ಗಮನ ಸೆಳೆದರು.