ನಾವೇ ಬೆಂಗಳೂರನ್ನು ಸ್ಮಾರ್ಟ್ ಸಿಟಿ ಮಾಡ್ತೇವೆ: ಸಿಎಂ

ಬಿಜೆಪಿಯವರು ಬೆಂಗಳೂರನ್ನು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರುವುದನ್ನು ತಪ್ಪಿಸಿದ್ದರೂ ರಾಜ್ಯ ಸರ್ಕಾರ ಕೇಂದ್ರದ ಪಾಲನ್ನು ಹಾಕಿಕೊಂಡು ಬೆಂಗಳೂರನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ಬಿಜೆಪಿಯವರು ಬೆಂಗಳೂರನ್ನು ಸ್ಮಾರ್ಟ್ ಸಿಟಿ ಪಟ್ಟಿಗೆ ಸೇರುವುದನ್ನು ತಪ್ಪಿಸಿದ್ದರೂ ರಾಜ್ಯ ಸರ್ಕಾರ ಕೇಂದ್ರದ ಪಾಲನ್ನು ಹಾಕಿಕೊಂಡು ಬೆಂಗಳೂರನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿಪಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿಗೆ ಈ ಗೌರವ ತಪ್ಪುವುದಕ್ಕೆ ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದಗೌಡ ಹಾಗೂ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರೇ ಕಾರಣ. ಬಿಬಿಎಂಪಿಯಲ್ಲಿ ಬಿಜೆಪಿ ಸರಿಯಾಗಿ ಆಡಳಿತ ನಿರ್ವಹಿಸಿದ್ದರೆ ಈ ರೀತಿ ಆಗುತ್ತಿರಲಿಲ್ಲ. ಬೆಂಗಳೂರನ್ನು ಪ್ರತಿನಿಧಿಸುವ ಇವರು ನಿಯಮ ಬದಲಾವಣೆ ಮಾಡಿ ರಾಜಧಾನಿಗೆ ಆದ್ಯತೆ ನೀಡಬಹುದಿತ್ತು. ಬೆಂಗಳೂರಿಗೆ ಕೇಂದ್ರ ಸರ್ಕಾರದ ಕೊಡುಗೆ ಏನು? ಎಂದು ಪ್ರಶ್ನಿಸಿದರು.

ವಿಷನ್ ಪೇಪರ್ ಏಕೆ?: ಕಾಂಗ್ರೆಸ್ ವಲಯದಲ್ಲಿ ಜಿಜ್ಞಾಸೆ ಪಕ್ಷದ ಅಧಿಕೃತ ಪ್ರಣಾಳಿಕೆ ಬಳಿಕ ಮತ್ತೊಂದು ವಿಷನ್ ಪೇಪರ್ ಮಂಡನೆಯ ಅಗತ್ಯವೇಕೆ? ಎಂಬ ಪ್ರಶ್ನೆ ಈಗ
ಕಾಂಗ್ರೆಸ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ವಿಷನ್ ಪೇಪರ್ ಮಂಡಿಸಿದ ಬೆನ್ನಲ್ಲೇ ಇಂಥದೊಂದು ಪ್ರಶ್ನೆ ಕಾಂಗ್ರೆಸ್‍ನಲ್ಲಿ ಗಿರಕಿ ಹಾಕಲಾರಂಬಿsಸಿದೆ. ಪ್ರಣಾಳಿಕೆ ಪಕ್ಷದ ಅಧಿಕೃತ ಧೋರಣೆ. ಪಕ್ಷ ಮತ್ತು ಸರ್ಕಾರ ಒಟ್ಟಾಗಿಯೇ ಇದನ್ನು ಸಿದ್ದಪಡಿಸುತ್ತದೆ. ಹೀಗಿರುವಾಗ ಮತ್ತೊಂದು ವಿಷನ್ ಪೇಪರ್ ಏಕೆ? ಪಕ್ಷದ ಪ್ರಣಾಳಿಕೆ ಸಿಎಂ ಸಿದ್ದರಾಮಯ್ಯ ಅವರಿಗೆ ಒಪ್ಪಿಗೆಯಾಗಿರಲಿಲ್ಲವೇ? ಬಿಜೆಪಿ, ಜೆಡಿಎಸ್ ಪ್ರಣಾಳಿಕೆಗಿಂತ ಕಾಂಗ್ರೆಸ್‍ನದ್ದು ಸಪ್ಪೆಯಾಗಿತ್ತೇ? ಅಥವಾ ಪಕ್ಷದೊಂದಿಗಿನ ಬಿsನ್ನ ನಿಲುವು ಇದಕ್ಕೆ ಪ್ರೇರಣೆ ನೀಡಿತೆ ? ಎಂಬ ಪ್ರಶ್ನೆಗಳು ಈಗ ಸುಳಿದಾಡುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com