

ಬೆಂಗಳೂರು: ಬಿಜೆಪಿಗೆ ಏಕಾಏಕಿ ಎರಗಿರುವ ಈ ಆಪತ್ತಿಗೆ ಕಾರಣವಾಗಿದ್ದೇ ಬಿಜೆಪಿಯ ಸಂಸದರು, ಶಾಸಕರೇ ಎಂಬುದು ಅಚ್ಚರಿಯ ಸಂಗತಿ.
ಬಿಜೆಪಿ 100 ಸ್ಥಾನ ಗಳಿಸುತ್ತಿದ್ದಂತೆ ಪಕ್ಷೇತರ ಸದಸ್ಯರ ಪೈಕಿ ಐವರು ಬಿಜೆಪಿಯ ಕದ ತಟ್ಟಿದ್ದರು, ತಾವಾಗಿಯೇ ಪಕ್ಷದ ಕಚೇರಿಗೆ ಬಂದು ಬೆಂಬಲ ಸೂಚಿಸುವುದಾಗಿ ಹೇಳಿದ್ದರು. ಅಲ್ಲದೇ ಮುಖಂಡರೊಂದಿಗೆ ಉತ್ತಮ ರೀತಿಯಲ್ಲಿ ಮಾತುಕತೆ ನಡೆಸಿದ್ದರು. ಈ ವೇಳೆ, ಹೇಗಿದ್ದರೂ ನಮಗೆ ಗರಿಷ್ಠ ಸ್ಥಾನ ಬಂದಿದೆ, ಕಾಂಗ್ರೆಸ್-ಜೆಡಿಎಸ್ ಒಂದಾಗಿ ಪೈಪೋಟಿ ನೀಡಲು ಸಾಧ್ಯವಿಲ್ಲವೆಂದರಿತ ಬಿಜೆಪಿ ಮುಖಂಡರು ಪಕ್ಷೇತರ ಸದಸ್ಯರಿಗೆ ಅಷ್ಟಾಗಿ ಮಣೆ ಹಾಕಲಿಲ್ಲ. ಆದರೆ, ಪರಿಸ್ಥಿತಿಯ ಸುಳಿವರಿತ ನಂತರ ಮಾತನಾಡಿದ್ದಾರೆ.
ಅಷ್ಟರಲ್ಲಾಗಲೇ ಬೆಂಗಳೂರಿನ ಸಂಸದರು ಒಬ್ಬ ಪಕ್ಷೇತರ ಪಾಲಿಕೆ ಸದಸ್ಯರ ವಿರುದ್ಧ ರೇಗಾಡಿದ್ದಾರೆ. ಅದೇ ರೀತಿ ಬೆಂಗಳೂರು ಉತ್ತರ ಭಾಗದ ಇಬ್ಬರು ಶಾಸಕರು ತಮ್ಮ ಭಾಗದ ಇಬ್ಬರು ಪಕ್ಷೇತರ ಸದಸ್ಯರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದರಿಂದ ರೋಸಿಹೋದ ಇಬ್ಬರು ಪಕ್ಷೇತರ ಸದಸ್ಯರು ಜೆಡಿಎಸ್‍ನ ಮೊರೆ ಹೋಗಿದ್ದಾರೆ. ಈ ಬೆಳವಣಿಗೆ ಬಿಜೆಪಿಯ ಒಳಗೂ ಪಸರಿಸಿದ್ದು, ಪಕ್ಷದ ಸಂಸದರು ಮತ್ತು ಶಾಸಕರ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೇಗಾಡುವ ಅಗತ್ಯವೇನಿತ್ತು ಎಂಬ
ಟೀಕೆಗಳು ಕೇಳಿಬಂದಿವೆ.
ಬಿಜೆಪಿ ಲೆಕ್ಕಾಚಾರ