ಬಿಬಿಎಂಪಿ ಮೇಯರ್ ಆಯ್ಕೆಗೆ ಭಾನುವಾರ ಬೆಳವಣಿಗೆಗಳ ನಂತರದ ಅವಕಾಶಗಳು

ಕಳೆದ ಎರಡು ಮೂರು ದಿನಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ತರುವಾಯ ಭಾನುವಾರ ಇಡೀ ಚಿತ್ರಣ ಬದಲಾಗುವ ಮತ್ತು ಮತ್ತೊಂದು ಮಗ್ಗುಲಿಗೆ ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
Updated on: 

ಬೆಂಗಳೂರು: ಕಳೆದ ಎರಡು ಮೂರು ದಿನಗಳಲ್ಲಿ ನಡೆದ ರಾಜಕೀಯ ಬೆಳವಣಿಗೆಗಳ ತರುವಾಯ ಭಾನುವಾರ ಇಡೀ ಚಿತ್ರಣ ಬದಲಾಗುವ ಮತ್ತು ಮತ್ತೊಂದು ಮಗ್ಗುಲಿಗೆ ಹೊರಳುವ ಸೂಚನೆಯೂ ಸಿಕ್ಕಿದೆ. ಭಾನುವಾರ ನಡೆದ ಬೆಳವಣಿಗೆಯ ನಂತರ ಬಿಬಿಎಂಪಿ ಮೇಯರ್ ಆಯ್ಕೆ ಪ್ರಕ್ರಿಯ ವಿಚಾರದಲ್ಲಿ ಮತ್ತೊಂದಿಷ್ಟು ಕವಲು ಹಾದಿಗಳು ಸೃಷ್ಟಿಯಾಗಿದೆ.

 1 ಸೆ.9ರಂದು ನಡೆಯಬಹುದಾದ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ತಟಸ್ಥವಾಗಿ ಉಳಿಯುವ ಸಾಧ್ಯತೆ ದಟ್ಟವಾಗಿದೆ. ಅಂದರೆ, ಎರಡೂ ರಾಜಕೀಯ ಪಕ್ಷಗಳ ವರ್ತನೆಯನ್ನು ಟೀಕಿಸಿ ಜನರ ಮುಂದೆ ಪ್ರತ್ಯೇಕವಾಗಿ ಕಾಣಿಸಿಕೊಳ್ಳುವ ಗುರಿ. ಇದರಿಂದ ಬಿಜೆಪಿಗೆ ಮೇಯರ್ ಪಟ್ಟ ಸುಲಭವಾಗಿ ದಕ್ಕುತ್ತದೆ. ಕೌನ್ಸಿಲ್‍ನಲ್ಲಿ ಹಾಜರಿರುವ ಸದಸ್ಯರ ಸಂಖ್ಯೆಯ ಅನುಗುಣವಾಗಿಯೇ ಬಹುಮತ ನಿರ್ಧಾರವಾಗುತ್ತದೆ. ಇದನ್ನು ಬಿಜೆಪಿ ನಿರೀಕ್ಷಿಸುತ್ತಿದೆ.

2 101 ಸದಸ್ಯಬಲ ಹೊಂದಿರುವ ಬಿಜೆಪಿಗೆ ಇನ್ನಿಬ್ಬರು ಪಕ್ಷೇತರರ ಬೆಂಬಲ ಬೇಕು. ಹಾಗೇನಾದರೂ ಆಗಿಬಿಟ್ಟರೆ, ಈಗಿನ ಲೆಕ್ಕಾಚಾರದ ಪ್ರಕಾರದಂತೆ ಕಾಂಗ್ರೆಸ್-ಜೆಡಿಎಸ್-ಉಳಿದ ಪಕ್ಷೇತರರು ಒಂದಾದರೂ ಬಿಜೆಪಿಯನ್ನು ಸೋಲಿಸಲಾಗಲ್ಲ.

3 ಜೆಡಿಎಸ್ ತಟಸ್ಥ ಧೋರಣೆ ಅನುಸರಿಸುವ ಬದಲು ನೇರವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದರೆ ಬಿಜೆಪಿ ಹಾದಿ ಸುಗಮ. ಕಾಂಗ್ರೆಸ್‍ಗೆ ತೀವ್ರ ಮುಖಭಂಗವಾಗಲಿದೆ. ಈ ಸಂದರ್ಭದಲ್ಲಿ ಇಡೀ ಚಿತ್ರಣಕ್ಕೆ ರಂಗುತಂದ ಪಕ್ಷೇತರ ಸದಸ್ಯರು ನಗಣ್ಯರಾಗುತ್ತಾರೆ. ಇದು ಕಾಂಗ್ರೆಸ್ ಪಕ್ಷದೊಳಗೆ ಇನ್ನೊಂದಿಷ್ಟು ಬೇಗುದಿಗೆ ಕಾರಣವಾದರೂ ಆಶ್ಚರ್ಯವಿಲ್ಲ. ಈ ಬೆಳವಣಿಗೆ ನಡೆಯಬಾರದೆಂದೇನೂ ಇಲ್ಲ.

4 ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯೇ ಮುಂದುವರಿದರೆ ಬಿಜೆಪಿ ಪ್ರಯತ್ನ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ. ಅಂದರೆ, ಜೆಡಿಎಸ್ ಸದಸ್ಯರು, ಎಲ್ಲ ಪಕ್ಷೇತರ ಸದಸ್ಯರು, ಕಾಂಗ್ರೆಸ್ ಸದಸ್ಯರು ಒಂದಾಗಿ ಕಣಕ್ಕಿಳಿದರೆ ಬಿಜೆಪಿ ಮೇಯರ್ ಅಭ್ಯರ್ಥಿಗೆ ಸೋಲು ಖಚಿತವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com