

ಮೈಸೂರು: ಬೆಂಗಳೂರು ಸೇರಿದಂತೆ ನಾನಾ ಕಡೆ ನಿರ್ಬಂಧಿಸಲಾಗಿದ್ದ ವಿಶ್ವ ಹಿಂದೂ ಪರಿಷದ್ನಕ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ. ಪ್ರವೀಣ್ ಭಾಯಿತೊಗಾಡಿಯಾ ಅವರಿಗೆ ಈಗ ಮೈಸೂರು ಜಿಲ್ಲೆ ಪ್ರವೇಶಿಸುವು ದನ್ನು ಸಹ ನಿರ್ಬಂಧಿಸಲಾಗಿದೆ. ಮೈಸೂರಿನ ದೊಡ್ಡಕೆರೆ ಮೈದಾನ ದಲ್ಲಿ ಮಾ.11 ರಂದು ವಿರಾಟ್ ಹಿಂದೂ ಸಮಾಜೋತ್ಸವ ಆಯೋಜನೆಗೊಂಡಿದ್ದು, ಡಾ. ಪ್ರವೀಣ್ ಭಾಯಿ ತೊಗಾಡಿಯಾ ಭಾಗವಹಿಸಲಿದ್ದರು. ಮೈಸೂರು ಜಿಲ್ಲೆಯಾದ್ಯಂತ ಮಾ.9 ರಿಂದ 13 ರವರೆಗೆ ಒಟ್ಟು ಐದು ದಿನ ನಿಷೇಧಾಜ್ಞೆ ಜಾರಿಗೊಳಿಸ ಲಾಗಿದ್ದು, ಕಾರ್ಯಕ್ರಮದಲ್ಲಿ ತೊಗಾಡಿಯಾ ಅವರ ಭಾಷಣದ ವಿಡಿಯೋ ಮತ್ತು ಆಡಿಯೋ ಯಾವುದೇ ರೂಪದಲ್ಲಿ ಪ್ರಸಾರ ಮಾಡದಂತೆ ನಿರ್ಬಂಧಿ ಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.