

ಬೆಂಗಳೂರು: ಬೆಂಗಳೂರು- ಮೈಸೂರು ಅಷ್ಟ ಪಥ ರಸ್ತೆ ನಿರ್ಮಾಣ ಕಾರ್ಯ ಚುರುಕುಗೊಳಿಸಿರುವ ರಾಜ್ಯ ಸರ್ಕಾರ, ಮಂಡ್ಯ ಬಳಿ ರು. 1200 ಕೋಟಿ ವೆಚ್ಚ ದಲ್ಲಿ ಬೈಪಾಸ್ ರಸ್ತೆ ನಿರ್ಮಿಸಲು ಮುಂದಾಗಿದೆ. ಲೋಕೋಪಯೋಗಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ಪತ್ರಿಕಾಗೋಷ್ಠಿ ಯಲ್ಲಿ ಗುರುವಾರ ಈ ವಿಷಯ ತಿಳಿಸಿದ್ದು,ಈ ಹಿಂದೆ ಮಂಡ್ಯ ಬಳಿ ಪ್ಲೈ ಓವರ್ ನಿರ್ಮಿಸಲು ತೀರ್ಮಾನಿಸಲಾಗಿತ್ತು.ಆದರೆ ಈಗ ಅದನ್ನು ಕೈ ಬಿಟ್ಟು ಬೈಪಾಸ್ ರಸ್ತೆ ನಿರ್ಮಿಸಲು ಯೋಚಿಸಲಾಗುತ್ತದೆ. ಬಿಡದಿ , ರಾಮನಗರ ಚನ್ನಪಟ್ಟ ಣ ಗಳಲ್ಲಿ ಮಂಡ್ಯದ ತನಕ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ ಎಂದು ಹೇಳಿ ದರು.ಈ ಮುಂಚೆ ತೀರ್ಮಾನಿಸಿ ದಂತೆ ಫ್ಲೈ ಓವರ್ ನಿರ್ಮಿಉದ್ದೇಶಿಸಿರುವುದರಿಂದ ರು. 12,000 ಕೋಟಿ ವೆಚ್ಚವಾಗಲಿದೆ. ಅಷ್ಟಪಥದ ಜತೆಗೆ ಸರ್ವಿಸ್ ರಸ್ತೆಯೂ ಇರುತ್ತದೆ. ಎಲ್ಲಿಂದ ಎಲ್ಲಿಗೆ ಪ್ರಯಾಣಿಸುತ್ತಾರೆ ಎಂಬುದನ್ನು ಗಮನದಲ್ಲಿಟ್ಟು ಕೊಂಡು ಪ್ರಯಾಣಿಕರ ಬಳಿ ಟೋಲ್ ಸಂಗ್ರಹಿಸಲಾಗುವುದು ಎಂದ ಅವರು, ಮೈಸೂರು- ಬೆಂಗಳೂರು ನಡುವೆ ಪರ್ಯಾಯ ರಸ್ತೆ ನಿರ್ಮಿಸುವುದಕ್ಕೆ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ವಿರೋಧ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಅಶೋಕ್ ಖೇಣಿ ಕೇಂದ್ರ ಸರ್ಕಾರಕ್ಕೆ ಮನವಿ ನೀಡಿರುವ ಬಗ್ಗೆ ಸಂಸದರ ಜತೆ ನಡೆದ ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪವಾಗಿಲ್ಲ. ಈ ಯೋಜನೆ ಮುಂದುವರಿಸು ವಂತೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದೆ. ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನುಮಂಗಳವಾರ ದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ನಿರಾತಂಕವಾಗಿ ಕೆಲಸ ಮಾಡಿಕೊಂಡು ಹೋಗುವಂತೆ ಅಭಯ ನೀಡಿದ್ದಾರೆ ಎಂದರುಬಂಟ್ವಾಳ- ಮಡಿಕೇರಿ, ಜೇವರ್ಗಿ-ಚಾಮರಾಜನಗರ ಸೇರಿದಂತೆ ಹಲವು ರಸ್ತೆಕಾಮಗಾರಿಗಳು ಪ್ರಗತಿಯಲ್ಲಿವೆ. ಶಿರಾಡಿರಸ್ತೆಯನ್ನು ಜೈಕೋ ಕಂಪನಿಯ ವತಿಯಿಂದಪರಿಸರ ಸ್ನೇಹಿ ರಸ್ತೆಯನ್ನಾಗಿ ಅಬಿsವೃದಿಟಛಿಪಡಿಸಲಾಗುವುದು.ಬೆಂಗಳೂರಿನಿಂದ ಕನಕಪುರದವರೆಗೆನಾಲ್ಕು ಪಥದ ರಸ್ತೆ ಹಾಗೂ ಮಳವಳ್ಳಿ,ಸತ್ಯಮಂಗಲ ಹಾಗೂ ಕೊಳ್ಳೆಗಾಲದ ತನಕಎರಡು ಪಥದ ರಸ್ತೆಯನ್ನು ನಿರ್ಮಿ ಸಲಾಗುವುದು ಎಂದು ವಿವರಿಸಿದರು.ಶಿರಾಡಿ ಘಾಟ್‍ನ 29 ಕಿಮೀ ರಸ್ತೆಯ ನಿರ್ಮಾ ಣ ಕಾರ್ಯಕ್ಕೆ ಹತ್ತು ಸಾವಿರ ಕೋಟಿ ರು. ವೆಚ್ಚವಾಗಲಿದೆ. ಯಾವುದೇ ಮರಗಳನ್ನು ಕಡಿಯದೆ ಪರಿಸರ ಸ್ನೇಹಿ ವಾತಾವರಣವನ್ನು ಉಳಿಸಿಕೊಳ್ಳಲಾ ಗುವುದು ಎಂದು ಸಚಿವರು ಹೇಳಿದರು.