

ವಿಧಾನಸಭೆ: ಈ ಹಿಂದೆ, ಈವರೆಗೆ ಹೇಗೆ, ಏನು ಕೊಡಲಾಗುತ್ತಿತ್ತೋ ಅದನ್ನೇ ನಾವು ಕೊಡುತ್ತಿದ್ದೇವೆ. ಹೆಚ್ಚಿಗೆ ಕೇಳಿದ್ದಾರೆ, ನೋಡುತ್ತೇವೆ...
ಅರಣ್ಯ ಸಚಿವ ಬಿ. ರಮಾನಾಥ ರೈ ಅವರು ಇದೊಂದು ಸಾಲನ್ನು ನಾಲ್ಕಾರು ಬಾರಿ ಹೇಳಿ ಇಡೀ ಸದನದಲ್ಲಿ ಅಪ ಹಾಸ್ಯಕ್ಕೆ ಗುರಿಯಾದರು.ಸ್ಪೀಕರ್ ಕಾಗೋಡು ತಿಮ್ಮಪ್ಪ
ಅವರು ಸಮಚಿತ್ತರಾಗಿ, ಕೋಪ ದಿಂದ ಪ್ರಶ್ನೆ ಕೇಳಿದರೂ ಮೇಲಿನ ಸಾಲನ್ನೇ ಪುನರುಚ್ಚರಿಸಿದರು. `ನಿಮಗೆ ಗೊತ್ತಿಲ್ಲ ದಿದ್ದರೆ ಕೇಳಿ ನಾಳೆ ಹೇಳ್ರೀ ಮಾರಾಯ್ರೆ
ಎಂದು ಸ್ಪೀಕರ್ ಹೇಳಿದರೂ ಮತ್ತದೇ ಮಾತನ್ನಾಡಿದರು. ಆಗ, ಇಡೀ ಸದನವೇ ನಗೆಗಡಲಲ್ಲಿ ತೇಲಿತು. ಸ್ಪೀಕರ್ ನಗುತ್ತಲೇ ಆ ವಿಷಯವನ್ನು ಬಿಟ್ಟು ಬೇರೆ ಕಲಾಪ
ತೆಗೆದು ಕೊಂಡರು.ಆಗಿದ್ದು ಇಷ್ಟು: ಬಿಜೆಪಿಯ ಸುನೀಲ್ ಕುಮಾರ್ ಅವರು ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಕುಟುಂ ಬಗಳು ಹೊರ ಹೋಗುತ್ತಿದ್ದು, ಅವರಿಗೆ ಯಾವ ರೀತಿಯ
ಪುನರ್ವಸತಿ ಕಲ್ಪಿಸಲಾಗು ತ್ತಿದೆ. ಅವರಿಗೆ ಏನೇನು ಕೊಡುತ್ತಿದ್ದೀರಿ ಎಂದು ಪ್ರಶ್ನಿಸಿ ದ್ದರು. ಇದಕ್ಕೆ ಉತ್ತರಿಸಿದ ಸಚಿವರು ಹಿಂದೆ ಏನಿತ್ತೋ ಅದನ್ನೇ ಕೊಡುತ್ತಿದ್ದೇವೆ. ಅದೇ ರೀತಿ ಮಾಡುತ್ತಿದ್ದೇವೆ. ಏನಿತ್ತೋ ಅದೇ ಎಂದು ಹೇಳಿದರು. `ಏನದು, ಎಂತಹ ಪರಿಹಾರ ವಿವರ ನೀಡಿ ಎಂದು ಸುನೀಲ್‍ಕುಮಾರ್ ಪ್ರಶ್ನಿಸಿದರೂ ಅದೇ ಉತ್ತರ ಬಂತು. ಆಗ
ಮಧ್ಯೆಪ್ರವೇಶಿಸಿದ ಸ್ಪೀಕರ್ `ನೋಡ್ರೀ ಸಚಿವರೇ, ಒಂದು ಪುನರ್ವಸತಿ ಅಂದರೆ ಭೂಮಿ ಕೊಡೋದು, ಹಣ ಕೊಡೋದು ಅಂತಾ ಇರುತ್ತದೆ. ಅದೇನು ಕೊಡುತ್ತಿದ್ದೀರಿ, ಹೇಳ್ರಿ ಅಂದರು . ಅದೇ, ಹಿಂದಿನಂತೆ ಹೇಗಿದೆಯೋ ಅದನ್ನೇ ಕೊಡುತ್ತಿದ್ದೇವೆಎಂದು ರಮಾ ನಾಥ ರೈ ಹೇಳಿದರು.