ಬಿಎಸ್‍ವೈ ನಿರಾಳ

ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದಕ್ಕೆ ಕಾರಣವಾಗಿದ್ದ ಅಕ್ರಮ ಡಿನೋಟಿಫಿಕೇಷನ್ ಆರೋಪಗಳ...
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ
Updated on: 
ಬೆಂಗಳೂರು:  ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ  ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವುದಕ್ಕೆ ಕಾರಣವಾಗಿದ್ದ ಅಕ್ರಮ ಡಿನೋಟಿಫಿಕೇಷನ್ ಆರೋಪಗಳ ಸಂಬಂಧ ದೂರು ದಾಖಲಿಸುವುದಕ್ಕೆ ಅಂದಿನ ರಾಜ್ಯಪಾಲ ಎಚ್.ಆರ್. ಭಾರಾದ್ವಾಜ್ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶಿಸಿದೆ. ತಮ್ಮ ವಿರುದಟಛಿ ಅಕ್ರಮ ಡಿನೋಟಿಫಿಕೇಶನ್  ಆರೋಪ ಕುರಿತು ಖಾಸಗಿ ದೂರು ದಾಖಲಿಸಲು ವಕೀಲರಾದ ಸಿರಾಜಿನ್ ಬಾಷಾ ಮತ್ತು ಕೆ.ಎನ್. ಬಾಲರಾಜ್ ಅವರಿಗೆ ರಾಜ್ಯಪಾಲರು ನೀಡಿದ್ದ ಅನುಮತಿ ರದ್ದು ಕೋರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾ. ವಿನೀತ್ ಸರಣ್ ಅವರಿದ್ದ ವಿಭಾಗೀಯ ಪೀಠ ತೀರ್ಪು ನೀಡಿ ರಾಜ್ಯಪಾಲರ ಅನುಮತಿ ರದ್ದುಪಡಿಸಿದೆ. ರಾಜ್ಯಪಾಲರು ಪ್ರಕರಣ ದಾಖಲಿಸಲು ಪೂರ್ವಾ-ನುಮತಿ ನೀಡಿರುವುದು ಕಾನೂನುಬಾಹಿರ, ಜತೆಗೆ ನ್ಯಾಯಸಮ್ಮತವಲ್ಲ.
ಪ್ರಾಸಿಕ್ಯೂಷನ್‍ಗೆ ಅನುಮತಿ ನೀಡಬಹುದಾದ ನಿಯಮಗಳ ಅನುಸಾರವಾಗಿಲ್ಲ ಎಂದು ನ್ಯಾಯಪೀಠ ತೀರ್ಪು ನೀಡಿದೆ. ರಾಜ್ಯಪಾಲರು ಯಡಿಯೂರಪ್ಪ ವಿರುದಟಛಿ ಪ್ರಾಸಿಕ್ಯೂಷನ್
ಗೆ ನೀಡಿದ ಪೂರ್ವಾನುಮತಿಗೆ ಸಕಾರಣ ನೀಡಿಲ್ಲ. ಡಿನೋ ಟಿಫಿಕೇಷನ್ ಅಕ್ರಮಗಳ ಕುರಿತು ತನಿಖೆಗೆ 2010ರ ಡಿ.22 ರಂದು ಸಚಿವ ಸಂಪುಟ ನ್ಯಾ. ಬಿ.ಪದ್ಮರಾಜ್ ಆಯೋಗ  ನೇಮಿಸಿದ್ದ ಹೊರತಾಗಿಯೂ ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‍ಗೆ ಏಕೆ ಪೂರ್ವಾನುಮತಿ ನೀಡಲಾಯಿತು? ಎಂಬುದರ ಕುರಿತು ಸಮರ್ಪಕ ಚರ್ಚೆ ನಡೆದಿಲ್ಲ
ಎಂದು ಪೀಠ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ. ಆದರೆ, ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್‍ಗೆ ಹಿಂದಿನ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ನೀಡಿದ್ದ
ಅನುಮತಿಯನ್ನು ರದ್ದುಗೊಳಿಸಿದ್ದರೂ, ತೀರ್ಪಿನಲ್ಲಿ ಚರ್ಚಿಸಲಾದ ಅಂಶಗಳ ಆಧರಿಸಿದ ಪ್ರಕರಣವನ್ನು ಮರು ಪರಿಶೀಲಿಸಲು ನ್ಯಾಯಪೀಠ ಅದನ್ನು ಮತ್ತೆ ರಾಜ್ಯಪಾಲರಿಗೆ
ಹಿಂದಿರುಗಿಸಿದೆ.
ಬಿಎಸ್‍ವೈ ಮನವಿ
ನಾನು ಮುಖ್ಯಮಂತ್ರಿಯಾಗಿದ್ದ ವೇಳೆ, ಸಂಪುಟದ ಕೆಲವು ಸಚಿವರ ವಿರುದ್ಧ ಆರೋಪಗಳಿದ್ದು ಅವರನ್ನು ಕೈಬಿಡಬೇಕು ಎಂದು ಪತ್ರಬರೆಯುವ ಮೂಲಕ ರಾಜ್ಯಪಾಲರು ಒತ್ತಡ ಹೇರುತ್ತಿದ್ದರು. ನನ್ನ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದು, ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಹೇಳುತ್ತಿದ್ದರು. ಪ್ರಕರಣ ದಾಖಲಿಸುವುದಕ್ಕೆ ಅನುಮತಿ ನೀಡುವುದಕ್ಕೂ ಮುನ್ನ ನಾನು ಸಚಿವ ಸಹೋದ್ಯೋಗಿಗಳ ಬೆಂಬಲ ಪಡೆದು ಮುಖ್ಯಮಂತ್ರಿಯಾಗಿದ್ದೇನೆ ಎಂದು ಮನವಿ ಮಾಡಿದ್ದರೂ ಪರಿಗಣಿಸಲಿಲ್ಲ ಎಂದು ಬಿಎಸ್‍ವೈ ಅರ್ಜಿಯಲ್ಲಿ ಆರೋಪಿಸಿದ್ದರು.
ಏನಿದು ಪ್ರಕರಣ? 
ಯಡಿಯೂರಪ್ಪ ಸಿಎಂ ಆಗಿದ್ದ ಅವಧಿಯಲ್ಲಿ ರಾಚೇನ ಹಳ್ಳಿ ಸೇರಿದಂತೆ ನಗರದ ವಿವಿಧೆಡೆ ಬಿಡಿಎ ವಶಪಡಿಸಿ ಕೊಂಡಿದ್ದ ಜಮೀನನ್ನು ಅಕ್ರಮವಾಗಿ ಡಿನೋಟಿಫಿ ಕೇಷನ್ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಐದು ಪ್ರತ್ಯೇಕ ಖಾಸಗಿ ದೂರು ದಾಖಲಿಸಲುವಸಿರಾಜಿನ್ ಬಾಷಾ ಮತ್ತು ಕೆ.ಎನ್. ಬಾಲರಾಜ್‍ಗೆ 2011ರ ಜ.21ರಂದು ಅಂದಿನ ರಾಜ್ಯಪಾಲ ಎಚ್.
ಆರ್. ಭಾರದ್ವಾಜ್ ಅನುಮತಿ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com