ರಾಜಕೀಯ

ಮೋದಿ ಉದ್ಯಮಿಗಳ ಪ್ರಧಾನಿ, ಸಿದ್ದು ಜನಸಾಮಾನ್ಯರ ನಾಯಕ ರಾಹುಲ್

ಸಿದ್ದರಾಮಯ್ಯ ಸೂಟ್ ಬೂಟ್ ನಾಯಕರಲ್ಲ, ಅವರು ರೈತರ ಮನದಾಳವನ್ನು ಅರ್ಥಮಾಡಿಕೊಳ್ಳಬಲ್ಲ ನಾಯಕ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ...

ಮೋದಿ ಉದ್ಯಮಿಗಳ ಪ್ರಧಾನಿ, ಸಿದ್ದು ಜನಸಾಮಾನ್ಯರ ನಾಯಕ ರಾಹುಲ್
ಹಾವೇರಿಯಲ್ಲಿ ರಾಹುಲ್ ಗಾಂಧಿ
Published On :

ಹಾವೇರಿ: ಸಿದ್ದರಾಮಯ್ಯ ಸೂಟ್ ಬೂಟ್ ನಾಯಕರಲ್ಲ, ಅವರು ರೈತರ ಮನದಾಳವನ್ನು ಅರ್ಥಮಾಡಿಕೊಳ್ಳಬಲ್ಲ ನಾಯಕ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮುಖ್ಯಮಂತ್ರಿಯವರನ್ನು ಹಾಡಿ ಹೊಗಳಿದ್ದಾರೆ.

ಹಾವೇರಿಯ ರಾಣೆಬೆನ್ನೂರಿನ ಗುಡಗೂರಿನಲ್ಲಿ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ದಿನಬೆಳಗಾದರೆ ವಿದೇಶ ಪ್ರವಾಸದಲ್ಲೇ ಇರುತ್ತಾರೆ. ಅವರಿಗೆ ದೇಶದ ರೈತರ ಕಷ್ಟ ಕೇಳಉವ ವ್ಯವಧಾನವಿಲ್ಲ. ಮೋದಿ ಸದಾ ಉದ್ಯಮಿಗಳ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆಯೇ ಹೊರತು ಬಡವರ, ರೈತರ ಜೊತೆ ಅವರು ಫೋಟೊ ತೆಗೆಸಿಕೊಳ್ಳೋದಿಲ್ಲ ಎಂದು ವಾಗ್ದಾಳಿ ನಡೆಸಿದರು. ಸಚಿವ, ಕಾಂಗ್ರೆಸ್ ಮುಖಂಡ ಕೃಷ್ಣಭೈರೇಗೌಡ ರಾಹುಲ್ ಗಾಂಧಿ ಭಾಷಣವನ್ನು ಕನ್ನಡಕ್ಕೆ ಭಾಷಾಂತರಿಸಿದರು.

ಸದಾ ಉದ್ಯಮಿಗಳ ಪರವಾಗಿಯೇ ಮೋದಿ ಓಡಾಡುತ್ತಿರುತ್ತಾರೆ. ರೈತರು, ಜನಸಾಮಾನ್ಯರು ಬೇಕಾಗಿಲ್ಲ. ಆದರೆ ಬಿಜೆಪಿಯವರು ನಮ್ಮ ಪ್ರಧಾನಿ ರೈತರು, ಬಡವರ ಬಳಿ ಹೋಗುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ ಅಷ್ಟೇ ಎಂದು ತಿರುಗೇಟು ನೀಡಿದರು. ವಿದೇಶಗಳಿಗೆ ತೆರಳುವ ನಮ್ಮ ಮೋದಿಜೀಯವರು ಅಲ್ಲಿರುವ ಅನಿವಾಸಿ ಭಾರತೀಯರ ಎದುರು ಮನದಾಳದ ಮಾತುಗಳನ್ನು ಆಡುತ್ತಾರೆ. ಆದರೆ ದೇಶದಲ್ಲಿ ಮನ್ ಕಿ ಬಾತ್ ನಲ್ಲಿ ಬರೇ ಕಾಟಾಚಾರದ ಮಾತುಗಳನ್ನಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ಕರ್ನಾಟಕದ ರೈತರು ಏನೇ ಬೇಕಾದರೂ ಆಗಲಿ, ಕೇಂದ್ರ ಸರ್ಕಾರ ಅಥವಾ ಬಿಜೆಪಿಯವರಿಗೆ ಏನು ತೊಂದರೆ ಇಲ್ಲ. ಈ ರಾಜ್ಯದ ರೈತರನ್ನು ಭಾರತದ ರೈತರಂತೆ ಅವರಿಗೆ ಕಾಣಿಸುತ್ತಿಲ್ಲ. ಕೇಂದ್ರ ಸರ್ಕಾರ ಕರ್ನಾಟಕದ ಮೇಲೆ ತಾರತಮ್ಯ ತೋರಿಸುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.