ತಾಂತ್ರಿಕ್ ನನ್ನು ಭೇಟಿ ಮಾಡಿದ ನಿತೀಶ್ ಕುಮಾರ್ ವಿಡಿಯೋ ಬಿಜೆಪಿಯಿಂದ ಬಹಿರಂಗ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಾಂತ್ರಿಕ್ ಓರ್ವರನ್ನು ಭೇಟಿ ಮಾಡಿರುವ ವಿಡಿಯೋ ಬಹಿರಂಗವಾಗಿದೆ.
ತಾಂತ್ರಿಕ್ ನನ್ನು ಭೇಟಿ ಮಾಡಿದ ನಿತೀಶ್ ಕುಮಾರ್
ತಾಂತ್ರಿಕ್ ನನ್ನು ಭೇಟಿ ಮಾಡಿದ ನಿತೀಶ್ ಕುಮಾರ್

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಾಂತ್ರಿಕ್ ಓರ್ವರನ್ನು ಭೇಟಿ ಮಾಡಿರುವ ವಿಡಿಯೋ ಬಹಿರಂಗವಾಗಿದೆ. ಬಿಜೆಪಿ ನಾಯಕ, ಕೇಂದ್ರ ಸಚಿವ ಗಿರಿರಾಜ್ ಸಿಂಗ್ ನಿತೀಶ್ ಕುಮಾರ್ ತಾಂತ್ರಿನ್ ನನ್ನು ಭೇಟಿ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾರೆ.
ಬಿಹಾರದಲ್ಲಿ ಮೂರನೇ ಹಂತದ ಚುನಾವಣೆ ನಡೆಯಲಿರುವ ವೇಳೆಯಲ್ಲೇ ವಿಡಿಯೋ ಬಿಡುಗಡೆಯಾಗಿದೆ. ತಾಂತ್ರಿಕ್ ನಿತೀಶ್ ಕುಮಾರ್ ಪರ ಘೋಷಣೆಗಳನ್ನು ಕೂಗುತ್ತಿರುವುದು ಹಾಗೂ ಚುನಾವಣೆಯ ಫಲಿತಾಂಶದ  ಬಗ್ಗೆ ಚಿಂತಿಸದಂತೆ ಸಲಹೆ ನೀಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ನಿತೀಶ್ ಕುಮಾರ್ ಪರ ಘೋಷಣೆ ಕೂಗಿರುವ ತಾಂತ್ರಿಕ್, ಲಾಲೂ ಪ್ರಸಾದ್ ವಿರುದ್ಧ ಘೋಷಣೆ ಕೂಗಿರುವುದು ಅಚ್ಚರಿ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಲಾಲೂ ಪ್ರಸಾದ್ ಯಾದವ್ ನಾನು ಎಲ್ಲಾ ತಾಂತ್ರಿಕ್ ಗಿಂತ ದೊಡ್ಡ ತಾಂತ್ರಿಕ್ ಯಾವುದಕ್ಕೂ ಹೆದರುವುದಿಲ್ಲ ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗಿರುವ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಲು ನಿತೀಶ್ ಕುಮಾರ್ ಹಾಗೂ ಜೆಡಿಯು ನಾಯಕರು ನಿರಾಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com