63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿರುವ ಬಿಹಾರ ಮಾಜಿ ಸಿಎಂ ಮಾಂಝಿ

ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅಸ್ತಿ ವಿವರ ಘೋಷಿಸಿದ್ದು, 63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
ಜಿತನ್ ರಾಮ್ ಮಾಂಝಿ
ಜಿತನ್ ರಾಮ್ ಮಾಂಝಿ

ಪಾಟ್ನಾ:ಬಿಹಾರ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅಸ್ತಿ ವಿವರ ಘೋಷಿಸಿದ್ದು, 63 ಲಕ್ಷ ರೂಪಾಯಿ ಮೌಲ್ಯದ ಸ್ಥಿರಾಸ್ತಿ  ಹೊಂದಿದ್ದಾರೆ.

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿರುವ ಮಾಂಝಿ, 13 ಲಕ್ಷ ರೂಪಾಯಿ ಮೌಲ್ಯದ ಮನೆ, 10 ವರ್ಷಗಳ ಹಿಂದಿನ ಅಂಬಾಸಿಡರ್ ಕಾರ್, 2011 ರ ಮಾಡೆಲ್ ನ ಮಹೀಂದ್ರಾ ಸ್ಕಾರ್ಪಿಯೋ ಎಸ್.ಯು.ವಿ ಯನ್ನು ಹೊಂದಿದ್ದಾರೆ.
ಮಾಂಝಿಯ ತಂದೆ ಗಯಾ ಜಿಲ್ಲೆಯ ಗ್ರಾಮದಲ್ಲಿ ಭೂರಹಿತ ಕಾರ್ಮಿಕನನಾಗಿದ್ದರು. ಕೆಲ ವರ್ಷಗಳ ಹಿಂದೆ 37 ಲಕ್ಷ ರೂ ಮೌಲ್ಯದ ಕೃಷಿ ಭೂಮಿಯ ಒಡೆಯನಾಗಿದ್ದರು.
ಈ ವರ್ಷ ತಮ್ಮ ವಯಸ್ಸು ಹಾಗೂ ಆಸ್ತಿ ಬಗ್ಗೆ  ಜಿತನ್ ರಾಮ್ ಮಾಂಝಿ ತಪ್ಪು ಮಾಹಿತಿ ವಿವಾದಕ್ಕೀಡಾಗಿದ್ದರು. ಹಿಂದುಸ್ಥಾನ್ ಅವಾಂ ಮೋರ್ಚಾದ ಅಧ್ಯಕ್ಷರಾಗಿರುವ ಜಿತನ್ ರಾಮ್ ಮಾಂಝಿ, ಎರಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com