ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ: ಜೆಡಿಎಸ್ ನ 8 ಶಾಸಕರಿಗೆ ಅಗ್ನಿಪರೀಕ್ಷೆ

ಜೆಡಿಎಸ್ 8 ಬಂಡಾಯ ಶಾಸಕರನ್ನು ಅಮಾನತು ಸಂಬಂಧ ಸ್ಪೀಕರ್ ಕೆ.ಬಿ ಕೋಳಿವಾಡ್ ಇಂದು ವಿಚಾರಣೆ ನಡೆಸಲಿದ್ದಾರೆ..
ಜಮೀರ್ ಅಹಮದ್, ಬಾಲಕೃಷ್ಣ, ಚಲುವರಾಯಸ್ವಾಮಿ
ಜಮೀರ್ ಅಹಮದ್, ಬಾಲಕೃಷ್ಣ, ಚಲುವರಾಯಸ್ವಾಮಿ
Updated on: 

ಬೆಂಗಳೂರು: ಜೆಡಿಎಸ್ 8 ಬಂಡಾಯ ಶಾಸಕರನ್ನು ಅಮಾನತು ಸಂಬಂಧ ಸ್ಪೀಕರ್ ಕೆ.ಬಿ ಕೋಳಿವಾಡ್  ಇಂದು ವಿಚಾರಣೆ ನಡೆಸಲಿದ್ದಾರೆ.

8 ಶಾಸಕರನ್ನು ಅನರ್ಹಗೊಳಿಸಬೇಕೆಂದು ಮನವಿ ಸಲ್ಲಿಸಿದ್ದ ಜೆಡಿಎಸ್ ನ ಇಬ್ಬರು ಶಾಸಕರುಗಳಾದ ಬಿ.ಬಿ ನಿಂಗಯ್ಯ ಮತ್ತು ಸಿಎನ್ ಬಾಲಕೃಷ್ಣ ಅವರಿಗೆ ಸ್ಪೀಕರ್ ಕೋಳಿವಾಡ್ ನೋಟೀಸ್ ನೀಡಿ ವಿವರಣೆ ನೀಡುವಂತೆ ಸೂಚಿಸಿದ್ದಾರೆ.

1986ರ ಕರ್ನಾಟಕ ವಿಧಾನಸಭೆ ನಿಯಮಗಳ ಪ್ರಕಾರ ಶಾಸಕರುಗಳಾದ ಜಮೀರ್ ಅಹಮದ್ ಖಾನ್, ಚಲುವರಾಯ ಸ್ವಾಮಿ, ಇಕ್ಬಾಲ್ ಅನ್ಸಾರಿ, ಎಚ್. ಸಿ ಬಾಲಕೃಷ್ಣ,  ರಮೇಶ್ ಬಂಡಿಸಿದ್ದೇಗೌಡ,  ಗೋಪಾಲಯ್ಯ,  ಭೀಮಾ ನಾಯಕ್ ಮತ್ತು ಅಖಂಡ ಶ್ರೀನಿವಾಸ್ ಮೂರ್ತಿ ಅವರುಗಳನ್ನು ಅನರ್ಹಗೊಳಿಸಬೇಕೆಂದು ಸ್ಪೀಕರ್ ಗೆ ಮನವಿ ಸಲ್ಲಿಸಲಾಗಿತ್ತು.

ಈ ಸಂಬಂಧ ಕರ್ನಾಟಕ ವಿಧಾನಸಭೆ ನ್ಯಾಯಾಂಗ ಆಯೋಗವು ಶ್ರವಣಬೆಳಗೊಳದ ಜೆಡಿಎಸ್ ಶಾಸಕ ಬಾಲಕೃಷ್ಣ ಮತ್ತು ಮುದಿಗೆರೆ ಶಾಸಕ ಬಿ.ಬಿ ನಿಂಗಯ್ಯ ಅವರಿಗೆ ನೋಟೀಸ್ ನೀಡಿ ಸ್ಪೀಕರ್ ಮುಂದೆ ತಮ್ಮ ವಕೀಲರ ಜೊತೆ ಹಾಜರಾಗಬೇಕೆಂದು ತಿಳಿಸಿತ್ತು. ಇನ್ನು ಪಕ್ಷದಿಂದ ಅಮಾನತುಗೊಂಡಿರುವ 8 ಜೆಡಿಎಸ್ ಶಾಸಕರಿಗೂ ಸ್ಪೀಕರ್ ಮುಂದೆ ತಮ್ಮ ವಾದ ಮಂಡಿಸುವ ಅವಕಾಶ ನೀಡಲಾಗಿದೆ.

ಇತ್ತೀಚೆಗೆ ನಡೆದ ರಾಜ್ಯಸಭೆ ಚುನಾವಣೆ ವೇಳೆ ಜೆಡಿಎಸ್ ಅಭ್ಯರ್ಥಿ ಬಿಎಂ ಫಾರೂಕ್ ಗೆ ಮತಚಲಾಯಿಸಬೇಕೆಂದು ಪಕ್ಷ ವಿಪ್ ಜಾರಿ ಮಾಡಿತ್ತು,  ವಿಪ್ ಉಲ್ಲಂಘಿಸಿ 8 ಶಾಸಕರು ಅಡ್ಡಮತದಾನ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com