ಬೆಳಗಾವಿ ಜಿಲ್ಲಾ ಪಂಚಾಯ್ತಿ ಒಟ್ಟು 90 ಸದಸ್ಯರನ್ನು ಹೊಂದಿದ್ದು, ಕಾಂಗ್ರೆಸ್ 43, ಬಿಜೆಪಿ 39, ಪಕ್ಷೇತರರು 6(ಎಂಇಎಸ್) ಹಾಗೂ ಇಬ್ಬರು ಜೆಡಿಎಸ್ ಸದಸ್ಯರು ಗೆದ್ದು ಬಂದಿರುವುದರಿಂದ ಅಧ್ಯಕ್ಷರಾಗಿ ಆಯ್ಕೆಯಾಗುವುದಕ್ಕೆ ಸ್ಪಷ್ಟ ಬಹುಮತವಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಓರ್ವ ಪಕ್ಷೇತರ, ಇಬ್ಬರು ಜೆಡಿಎಸ್ ಸದಸ್ಯರು ಸೇರಿ ಮೂವರು ಸದಸ್ಯರ ಬೆಂಬಲ ಪಡೆದು ಜಿಲ್ಲಾ ಪಂಚಾಯ್ತಿ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.