ಕರ್ನಾಟಕ ಯೂತ್ ಕಾಂಗ್ರೆಸ್ ಚುನಾವಣೆಗೆ ವೇದಿಕೆ ಸಿದ್ಧ

ಕೆಪಿಸಿಸಿ ಅಧ್ಯಕ್ಷರಾಗಿ 2ನೇ ಅವಧಿಗೆ ಅಧಿಕಾರ ಪೂರ್ಣಗೊಂಡರೂ ಜಿ. ಪರಮೇಶ್ವರ್ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಸದ್ಯ ಕರ್ನಾಟಕದಲ್ಲಿ ಯೂತ್ ಕಾಂಗ್ರೆಸ್ ...
ರಿಜ್ವಾನ್ ಅರ್ಷದ್
ರಿಜ್ವಾನ್ ಅರ್ಷದ್
Updated on: 

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ 2ನೇ ಅವಧಿಗೆ ಅಧಿಕಾರ ಪೂರ್ಣಗೊಂಡರೂ ಜಿ. ಪರಮೇಶ್ವರ್ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಸದ್ಯ ಕರ್ನಾಟಕದಲ್ಲಿ ಯೂತ್ ಕಾಂಗ್ರೆಸ್ ಚುನಾವಣೆಗೆ ವೇದಿಕೆ ಸಿದ್ಧಗೊಳ್ಳುತ್ತಿದೆ.

ಮೇ 9 ಮತ್ತು 13 ರಂದು ಚುನಾವಣೆ ನಡೆಯಲಿದ್ದು. ಏಪ್ರಿಲ್ 21 ರಿಂದ ಪದಾಧಿಕಾರಿಗಳ ಆಯ್ಕೆಗೆ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿದು ಬಂದಿದೆ, ಮೇ 14 ರಂದು ಕೌಂಟಿಂಗ್ ನಡೆಯಲಿದೆ.

ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಿಜ್ವಾನ್ ಅರ್ಷದ್ ಅವರ ಎರಡನೇ ಅವಧಿ ಮುಗಿದಿದ್ದು, ಅವರು ರೇಸ್ ನಿಂದ ಹೊರಗಿದ್ದಾರೆ. ಆರು ವರ್ಷಗಳ ನಂತರ 2018ರ ವಿಧಾನ ಸಭೆ ಚುನಾವಣೆ ಗಮನದಲ್ಲಿರಿಸಿಕೊಂಡು ಹೊಸ ಮುಖದ ಹುಡುಕಾಟ ಆರಂಭವಾಗಿದೆ.

ಕಾಂಗ್ರೆಸ್ ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಿದೆ. ನಾವು ಈಗಾಗಲೇ 13 ಲಕ್ಷ ಹೊಸ ಕಾರ್ಯಕರ್ತರನ್ನು ನೋಂದಣಿ ಮಾಡಿಸಿದ್ದೇವೆ, 6.5 ಲಕ್ಷ ಇದ್ದ ಸದಸ್ಯತ್ವ 19.30 ಲಕ್ಷಕ್ಕೇರಿದೆ, ಪಕ್ಷದ ಚುನಾವಣೆಗಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ ಎಂದು ರಿಜ್ವಾನ್ ಅರ್ಷದ್ ಹೇಳಿದ್ದಾರೆ,

ಯುವನಾಯಕರಾದ ಅಮೃತ್ ರಾಜ್, ಮಧುಗಿರಿ ಶಾಸಕ ಕೆ.ಎನ್ ರಾಜಣ್ಣ ಅವರ ಪುತ್ರ ರಾಜೇಂದ್ರ, ಸಿಂಧನೂರಿನ ಮತ್ತೊಬ್ಬ ಶಾಸಕ ಹಂಪನಗೌಡ ಬದರ್ಲಿ ಅವರ ಮಗ ಬಸವನಗೌಡ ಬದರ್ಲಿ ಮತ್ತು ಕೆಂಪರಾಜ್ ಯೂತ್  ಕಾಂಗ್ರೆಸ್ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com