ಜೆಡಿಎಸ್ ಜೊತೆ ಮೈತ್ರಿ ಮುಂದುವರಿಯಲಿದೆ- ಕಾಂಗ್ರೆಸ್: ಮೇಯರ್ ಸ್ಥಾನ ನೀಡಿ, ಇಲ್ಲ ಮೈತ್ರಿ ಮರೆತು ಬಿಡಿ- ಜೆಡಿಎಸ್

ಕೋಮುವಾದಿಗಳ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಲಿದೆ ಎಂದು ಹೇಳಿದ ಅವರು, ಜೆಡಿಎಸ್ ಮೇಯರ್ ಹುದ್ದೆಗೆ ಪಟ್ಟು ಹಿಡಿದಿದೆಯಲ್ಲ ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ
Updated on: 
ಬೆಂಗಳೂರು: ಬಿಬಿಎಂಪಿ ಮೇಯರ್ ಹುದ್ದೆಗೆ ಸೆಪ್ಟಂಬರ್ 28 ರಂದು ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ತನಗೆ ಬೆಂಬಲಿಸುತ್ತದೆ ಎಂಬ ಆತ್ಮ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ. 
ಜೆಡಿಎಸ್ ಮತ್ತು ಪಕ್ಷೇತರರ ಬೆಂಬಲದಿಂದ ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಮೇಯರ್ ಸ್ಥಾನ ಗಿಟ್ಟಿಸಿಕೊಂಡಿದೆ. ಈ ಬಾರಿ ನಡೆಯುವ ಮೇಯರ್ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ ಮತ್ತು ರಾಜ್ಯಾಧ್ಯಕ್ಷ ಎಚ್.ಡಿ ಕುಮಾರ ಸ್ವಾಮಿ ಅವರನ್ನು ಕೋರುವುದಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ತಿಳಿಸಿದ್ದಾರೆ.
ಕೋಮುವಾದಿಗಳ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾಗಲಿದೆ ಎಂದು ಹೇಳಿದ ಅವರು, ಜೆಡಿಎಸ್ ಮೇಯರ್ ಹುದ್ದೆಗೆ ಪಟ್ಟು ಹಿಡಿದಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಬೆಂಗಳೂರು ನಗರದಲ್ಲಿ ನಾವು ಉತ್ತಮ ಕೆಲಸಗಳನ್ನು ಮಾಡಿದ್ದೇವೆ, ಹಾಗೂ ಈ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು,  ಮೈತ್ರಿ  ಮುಂದುವರಿಸುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಮೇಯರ್ ಹುದ್ದೆಗೆ ಜೆಡಿಎಸ್ ಬೇಡಿಕೆ ಇಡುವುದರಲ್ಲಿ ತಪ್ಪಿಲ್ಲ ಎಂದ ಅವರು, ಈ ಸಂಬಂಧ ಸಭೆ ಸೇರಿ ಮಾತುಕತೆ ಮೂಲಕ ಬಗೆ ಹರಿಸಿಕೊಳ್ಳುತ್ತೇವೆ ಎಂದು ಹೇಳಿದರು.
ಇನ್ನೂ ಈ ಬಾರಿ ಮೇಯರ್ ಹುದ್ದೆ ಬೇಕೇ ಬೇಕು ಎಂದು ಪಟ್ಟು ಹಿಡಿದಿರುವ ಜೆಡಿಎಸ್ ತಮ್ಮ ಷರತ್ತುಗಳಿಗೆ ಒಪ್ಪಿದರೇ ಮಾತ್ರ ಮೈತ್ರಿ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದೆ. 
ಬಿಬಿಎಂಪಿಯಲ್ಲಿ ಕಿಂಗ್ ಮೇಕರ್ ಆಗಿರುವ ಜೆಡಿಎಸ್, ಬಿಬಿಎಂಪಿಯ  ಒಟ್ಟು 198 ಸ್ಥಾನಗಳಲ್ಲಿ ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರು ಸೇರಿದಂತೆ 24 ಸೀಟುಗಳನ್ನು ಹೊಂದಿ ಪ್ರಮುಖ ಪಾತ್ರ ವಹಿಸಿದೆ.
ಕಳೆದ ಎರಡು ವರ್ಷಗಳಿಂದ ಕಾಂಗ್ರೆಸ್ ಮೇಯರ್ ಹುದ್ದೆ ಅನುಭವಿಸಿದೆ. ಮೂರನೇ ವರ್ಷದ ಮೈತ್ರಿ ಮುಂದುವರಿಯಬೇಕೆಂದರೇ ನಮಗೆ ಮೇಯರ್ ಸ್ಥಾನ ನೀಡಬೇಕು ಹಾಗೂ ಅದರ ಜೊತೆಗೆ ಮತ್ತಿತರ ಬೇಡಿಕೆಗಳನ್ನು ಕಾಂಗ್ರೆಸ್ ಈಡೇರಿಸಬೇಕು, ಹಾಗಿದ್ದರೇ ಮಾತ್ರ ಮೈತ್ರಿ ಮುಂದುವರಿಯುತ್ತದೆ, ಇಲ್ಲದಿದ್ದರೇ ನಾವು ನೀಡಿರುವ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ಜೆಡಿಎಸ್ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
ಬಿಜೆಪಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ, ಒಂದು ವೇಳೆ ನಮ್ಮ ಬೇಡಿಕೆಗೆ ಕಾಂಗ್ರೆಸ್ ಒಪ್ಪದಿದ್ದರೇ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
12 ಸ್ಥಾಯಿ ಸಮಿತಿಗಳಲ್ಲಿ ಜೆಡಿಎಸ್ ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದೆ. ಕಳೆದ ವರ್ಷ ಹಲವು ಪಕ್ಷೇತರರಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ನಮಗೂ ಕೂಡ ಕೆಲ ಅಧ್ಯಕ್ಷ ಸ್ಥಾನ ನೀಡಿದ್ದರು, ಆದರೆ ಆಯವ್ಯಯ ಮಂಡಿಸಲು ಅವಕಾಶ ನೀಡಿರಲಿಲ್ಲ, ಆದರೆ ಈ ಬಾರಿ ನಗರ ಬಜೆಟ್ ನಾವೇ ಮಂಡಿಸಬೇಕು ಎಂದು ಜೆಡಿಎಸ್ ಪಟ್ಟು ಹಿಡಿದಿದೆ.
ಜೆಡಿಎಸ್ 14 ಬಿಬಿಎಂಪಿ ಕೌನ್ಸಿಲರ್, ಮೂರು ಶಾಸಕರು, ಆರು ವಿಧಾನ ಪರಿಷತ್ ಸದಸ್ಯರು ಹಾಗೂ ಒಬ್ಬ ಸಂಸದರನ್ನು ಹೊಂದಿದ್ದು, ಮಾರಪ್ಪನಪಾಳ್ಯದ ಮಹಾದೇವ ಮತ್ತು ನಾಗಪುರ ವಾರ್ಡ್  ನ ಭದ್ರೇಗೌಡ ಮೇಯರ್ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com