ಬೆಂಗಳೂರು: ನಿರೀಕ್ಷೆಯಂತೆಯೇ ಬಿಬಿಎಂಪಿ ನೂತನ ಮೇಯರ್ ಆಗಿ ಸಂಪತ್ ರಾಜ್ ಆಯ್ಕೆಯಾಗಿದ್ದಾರೆ. ಸಂಪತ್ ರಾಜ್ ಮೇಯರ್ ಆಗಿ ಆಯ್ಕೆಯಾಗಿರುವುದನ್ನು ಚುನಾವಣಾಧಿಕಾರಿ ಅಧಿಕೃತವಾಗಿ ಘೋಷಿಸಿದ್ದಾರೆ.
ಬಿಬಿಎಂಪಿಯ 51ನೇ ಮೇಯರ್ಆಗಿ ಸಂಪತ್ ರಾಜ್ಆಯ್ಕೆಯಾಗುವ ಮೂಲಕ ಮತ್ತೊಮ್ಮೆ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗೆ ಜಯವಾಗಿದೆ. ಈ ಮೂಲಕ ಅಧಿಕಾರದ ಕನಸು ಕಂಡಿದ್ದ ಬಿಜೆಪಿಗೆ ತೀವ್ರ ನಿರಾಸೆಯಾಗಿದೆ. 139 ಮತ ಪಡೆದು ಸಂಪತ್ ರಾಜ್ ಆಯ್ಕೆಯಾಗಿದ್ದಾರೆ.
ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಮುಗಿದಿದ್ದು, ಕಾಂಗ್ರೆಸ್-ಜೆಡಿಎಸ್ಗೆಲುವು ಸಾಧಿಸಿದೆ ಉಪ ಮೇಯರ್ ಹುದ್ದೆ ಜೆಡಿಎಸ್ ಪಾಲಾಗಿದೆ. ಜೆಡಿಎಸ್ ನ ಪದ್ಮಾವತಿ ನರಸಿಂಹ ಮೂರ್ತಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಡಿ.ಜೆ.ಹಳ್ಳಿಯಿಂದ 2 ಬಾರಿ ಕಾರ್ಪೊರೇಟರ್ ಆಗಿರುವ ಸಂಪತ್ ರಾಜ್ಈ ಬಾರಿ ಬಿಬಿಎಂಪಿಯ ಮೇಯರ್ಆಗಿದ್ದಾರೆ. ಬಿಜೆಪಿ ಸಭಾತ್ಯಾಗ ಮಧ್ಯೆಯೇ ಚುನಾವಣಾಧಿಕಾರಿ ಜಯಂತಿಯವರು ಸಂಪತ್ ರಾಜ್'ರನ್ನು ನೂತನ ಮೇಯರ್ ಆಗಿ ಅಧಿಕೃತವಾಗಿ ಘೋಷಿಸಿದ್ದಾರೆ.