ಪ್ರಬಲ ಪೈಪೋಟಿಯ ಕ್ಷೇತ್ರಗಳನ್ನು ಗೆಲ್ಲಲು ವಲಸಿಗರು ನೆರವಾಗುತ್ತಾರೆ: ಮುರುಳೀಧರ್ ರಾವ್

: ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆ ಬಿಸಿ ಆರಂಭವಾಗಿದೆ. ಬೇಸಿಗೆ ಜೊತೆಗೆ ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರದ ಕಾವು ರಂಗೇರುತ್ತಿದೆ..
ಮುರುಳಿಧರ್ ರಾವ್
ಮುರುಳಿಧರ್ ರಾವ್
Updated on: 
ಬೆಂಗಳೂರು: ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆ ಬಿಸಿ ಆರಂಭವಾಗಿದೆ. ಬೇಸಿಗೆ ಜೊತೆಗೆ ರಾಜಕೀಯ ಪಕ್ಷಗಳ ಬಿರುಸಿನ ಪ್ರಚಾರದ ಕಾವು ರಂಗೇರುತ್ತಿದೆ. ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಈ ವೇಳೆ ಪಕ್ಷದ ಕಾರ್ಯತಂತ್ರ ಹಾಗೂ ಆಕಾಂಕ್ಷಿಗಳ ಅಸಮಾಧಾನ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ಮುರುಳೀಧರ ರಾವ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಸಂದರ್ಶನ ನೀಡಿದ್ದಾರೆ.
ಪ್ರ: ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ನಂತರ ಪಕ್ಷದಲ್ಲಿ ಬಂಡಾಯ ಹೆಚ್ಚಾಗಿದೆಯಲ್ಲ?
ಉ: ಒಂದು ಪಕ್ಷದ ಜನಪ್ರಿಯತೆ ಹೆಚ್ಚುತ್ತಿದ್ದಾಗ ಹಲವು ಮಂದಿ ಆ ಪಕ್ಷದಿಂದ ಸ್ಪರ್ಧಿಸಲು ಬಯಸುವುದು ಕಾಮನ್, ಅವರ ಆಸೆ ಆಕಾಂಕ್ಷೆಗಳು ಈಡೇರದಿದ್ದಾಗ ಅಸಮಾಧಾನ ಹೊರ ಹಾಕುತ್ತಾರೆ, ಬಿಜೆಪಿ ಈ ಅಸಮಾಧಾನವನ್ನು ಉತ್ತರ ರೀತಿಯಲ್ಲಿ ಸರಿಪಡಿಸುತ್ತಿದೆ. ಬೇರೆ ಪಕ್ಷಗಳಿಗೆ ಹೋಲಿಸಿದರೇ ಬಿಜೆಪಿಯಲ್ಲ ಕಡಿಮೆ ಅಸಮಾಧಾನವಿದೆ, ಹೇಳಬೇಕೆಂದರೇ ನಾವು ಊಹಿಸಿದ ಪ್ರಮಾಣಕ್ಕಿಂತ ಕಡಿಮೆಯಿದೆ
ಪ್ರ: ಹೊರಗಿನವರಿಗೆ ಮಣೆ ಹಾಕುತ್ತಿರುವುದರಿಂದ ಇದು ಪಕ್ಷದ ಮೇಲೆ ಪರಿಣಾಮ ಬೀರುವುದಿಲ್ಲವೇ?
ಉ: ಪರಿಸ್ಥಿತಿಯನ್ನು ನಮ್ಮ ಪಕ್ಷದ ಕಾರ್ಯಕರ್ತರು ಅರ್ಥ ಮಾಡಿಕೊಂಡಿದ್ದಾರೆ, ಸುಮಾರು 50-60 ಕ್ಷೇತ್ರಗಳಲ್ಲಿ ಬಿಜೆಪಿ ಸಾಂಪ್ರಾದಾಯಿಕವಾಗಿ ಬಲಹೀನವಾಗಿದೆ,  ಕೆಲವು ಕ್ಷೇತ್ರಗಳಿಂದ, ಬೇರೆ ಪಕ್ಷಗಳಿಂದ ಬಂದಿರುವ ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್ ನೀಡಲಾಗಿದೆ, ಪಕ್ಷವು ತನ್ನ ಕಾರ್ಯಕರ್ತರ ಹಿತಾಸಕ್ತಿಗೆ ಬದ್ಧವಾಗಿರುತ್ತದೆ.
ಪ್ರ: ಯಡಿಯೂರಪ್ಪ ಅವರ ಪರಿವರ್ತನಾ ಯಾತ್ರೆ ಸ್ವಲ್ಪ ದಿನಗಳಲ್ಲಿಯೇ ತನ್ನ ವರ್ಚಸ್ಸು ಕಳೆದುಕೊಂಡಿದೆಯಲ್ಲ?
ಉ: ಈ ಮಾತನ್ನು ನಾನು ಒಪ್ಪುವುದಿಲ್ಲ, ಸೇವ್ ಬೆಂಗಳೂರು ಮೊದಲನೇ ಹಂತದ ಅಭಿಯಾನ ಪೂರ್ಣಗೊಂಡಿದ್ದು, 2ನೇ ಹಂತದ ಅಭಿಯಾನವನ್ನು ವಾರ್ಡ್ ಗಳ ಮಟ್ಟದಲ್ಲಿ ನಡೆಸಲಾಗಿದೆ, 165 ವಾರ್ಡ್ ಗಳಲ್ಲಿ ಸೇವ್ ಬೆಂಗಳೂರು 2ನೇ ಹಂತದ ಅಭಿಯಾನ ಪೂರ್ಣಗೊಂಡಿದೆ, ಸ್ಥಳೀಯ ಜನತೆಯೊಂದಿಗೆ ಹಲವು ಮುಖಂಡರು ಚರ್ಚಿಸಿದ್ದಾರೆ, ಆದರೆ ಇದು ಮಾಧ್ಯಮಗಳ ಗಮನಕ್ಕೆ ಬಂದಿಲ್ಲ.
ಪ್ರ: ಫೆಬ್ರವರಿ 27 ರ ನಂತ್ರ ಪ್ರಧಾನಿ ಮೋದಿ ಪ್ರಚಾರಕ್ಕೆ ಆಗಮಿಸಿಲ್ಲ, ಚುನಾವಣಾ ಕಾರ್ಯತಂತ್ರದಲ್ಲಿ ಬದಲಾವಣೆಯಿದೆಯೇ?
ಉ: ಸುಡುವ ಬೇಸಿಗೆ ನಿಮ್ಮ ಮುಂದಿದೆ, ಮೋದಿ ಅವರನ್ನು ಕಡೆಗಣಿಸಬೇಡಿ,  ಚುನಾವಣಾ ವೇಳಾಪಟ್ಟಿ ಪ್ರಕಟಣೆ 10 ದಿನ ತಡವಾಗಿ ಆಯಿತು, ಹಾಗಾಗಿ ಮೋದಿ ಅವರ ಪ್ರಚಾರದ ವೇಳಾ ಪಟ್ಟಿಯಲ್ಲಿಯೂ ಬದಲಾವಣೆಯಾಯಿತು. ಮೋದಿ ಅವರನ್ನೊಳಗೊಂಡ ಹಲವು ಕಾರ್ಯಕ್ರಮಗಳಿವೆ, ಎಲ್ಲಾ ಜಿಲ್ಲೆಗಳಲ್ಲೂ ಮೋದಿ ಪ್ರಚಾರ ನಡೆಸಲಿದ್ದಾರೆ, ಮೋದಿ ಅವರಿರುವುದೇ ನಮಗೆ ದೊಡ್ಡ  ಪ್ರಯೋಜನ,. ಜೊತೆಗೆ ಪ್ರಭಾವಿ ಶಾಲಿಯಾಗಿರುವ ಸ್ಥಳೀಯ ನಾಯಕರು ಕೂಡ ಇದ್ದಾರೆ, ರಾಜ್ಯ ಹಾಗೂ ರಾಷ್ಟ್ರೀಯ ನಾಯಕರುಗಳು ಒಟ್ಟಿಗೆ ಪ್ರಚಾರ ನಡೆಸಲಿದ್ದಾರೆ,
ಪ್ರ: ಪ್ರದಾನಿ ಮೋದಿ ಯಾವಾಗ ಮತ್ತೆ ಮುಂದಿನ ಹಂತದ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ?
ಉ: ಚುನಾವಣಾ ಪ್ರಚಾರದ ವೇಳಾ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಬೇಕಿದೆ, ಚುನಾವಣೆ ದಿನಾಂಕದ ಕೊನೆಯ ಎರಡು ವಾರಗಳಲ್ಲಿ ಮೋದಿ ಪ್ರಚಾರ ಆರಂಭಿಸುತ್ತಾರೆ. ಈ ತಿಂಗಳ ಕೊನೆಯ ವಾರದಿಂದ ಪ್ರಚಾರ ಕಾರ್ಯ ಆರಂಭಗೊಳ್ಳಲಿದೆ.
ಪ್ರ: ಸಂಸದ ಶ್ರೀರಾಮುಲು ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರಾ?
ಉ: ಶ್ರೀರಾಮುಲು ಅವರನ್ನು ಮೊಳಕಾಲ್ಮೂರು ಅಭ್ಯರ್ಥಿಯಾಗಿ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಘೋಷಿಸಲಾಗಿದೆ  ಅವರು ಸ್ಪರ್ದಿಸುವ ಸ್ಥಾನಗಳ ಸಂಖ್ಯೆಯಿಂದ ಅವರ ಪ್ರಾಮುಖ್ಯತೆ ಅಳೆಯಬೇಕಿಲ್ಲ, ಶ್ರೀರಾಮಲು ನಮ್ಮ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದಾರೆ, ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಲಿದ್ದಾರೆ.
ಪ್ರ: ಬಿಜೆಪಿ ಇಬ್ಬರು ಕ್ರಿಕೆಟ್ ಆಟಗಾರರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ ಎಂಬ ಮಾತುಗಳು ಕೇಳಿ ಬರುತ್ತಿವೆ?
ಉ: ವ್ಯಕ್ತಿಗಳು ಹಾಗೂ ಪಕ್ಷದ ಹಿತಾಸಕ್ತಿಯಿಂದಾಗಿ ಈ ಹಂತದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ, ವಿವಿಧ ಕ್ಷೇತ್ರಗಳ ಹಲವು ಸ್ಟಾರ್ ಗಳು ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾತ್ರ ಹೇಳಬಲ್ಲೆ, ಮುಂದಿನ ವಾರಾಂತ್ಯದಲ್ಲಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com