ಕಳಂಕಿತರಿಗೆ ಬಿಜೆಪಿ ರತ್ನಗಂಬಳಿ: ರೇಣುಕಾಚಾರ್ಯಗೆ ಟಿಕೆಟ್ ನೀಡಿದ್ದಕ್ಕೆ ವಿರೋಧ

ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಪ್ರತಿಪಾದಿಸುತ್ತಿರುವ ಬಿಜೆಪಿ ಕಳಂಕಿತರಿಗೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡು...
ಎಂ.ಪಿ ರೇಣುಕಾಚಾರ್ಯ
ಎಂ.ಪಿ ರೇಣುಕಾಚಾರ್ಯ
Updated on: 
ಹೊನ್ನಾಳಿ: ಭ್ರಷ್ಟಾಚಾರ ರಹಿತ ಹಾಗೂ ಪಾರದರ್ಶಕ ಆಡಳಿತ ನೀಡುವುದಾಗಿ ಪ್ರತಿಪಾದಿಸುತ್ತಿರುವ ಬಿಜೆಪಿ  ಕಳಂಕಿತರಿಗೆ  ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವ ಮೂಲಕ ರತ್ನಗಂಬಳಿ ಹಾಸಿವೆ.
ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯಗೆ ಹೊನ್ನಾಳಿಯಿಂದ ಬಿಜೆಪಿ ಟಿಕೆಟ್ ನೀಡಿರುವುದಕ್ಕೆ ಮಾಜಿ ಶಾಸಕ ಡಿ.ಬಿ ಗಂಗಪ್ಪ ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ.
ಪಕ್ಷದ ಪ್ರಾಮಾಣಿಕರಿಗೆ ಟಿಕೆಟ್ ನೀಡದ ಬಿಜೆಪಿ,ಕೆಜೆಪಿಯಿಂದ ವಲಸೆ ಬಂದಿರುವ ರೇಣುಕಾಚಾರ್ಯಗೆ ಟಿಕೆಟ್ ನೀಡಿದೆ . ಶಿಸ್ತಿನ ಪಕ್ಷ ಎಂದೇ ಪ್ರಸಿದ್ಧವಾಗಿದ್ದ ಬಿಜೆಪಿ ಅಧಿಕಾರದ ಲಾಲಸೆಯಿಂದಾಗಿ ನಿಧಾನವಾಗಿ ತನ್ನ ಸಿದ್ದಾಂತಗಳನ್ನು ಕಳೆದುಕೊಳ್ಳುತ್ತಿದೆ ಎಂದು ಆರೋಪಿಸಿ, ಪಕ್ಷದ ವಿರುದ್ಧ ಘೋಷಣೆ ಕೂಗಿದರು. 
ಪಕ್ಷದ ಹಿತದೃಷ್ಟಿಯಿಂದಾಗಿ ಕೂಡಲೇ ಅಭ್ಯರ್ಥಿಯನ್ನು ಬದಲಾಯಿಸಬೇಕೆಂದು  ಬಿಜೆಪಿ ಹೈ ಕಮಾಂಡ್ ಗೆ  ಕಾರ್ಯಕರ್ತರು ಆಗ್ರಹಿಸಿದ್ದಾರೆ. ರೇಣುಕಾಚಾರ್ಯ ಅವರನ್ನೇ ಅಭ್ಯರ್ಥಿಯನ್ನಾಗಿ ಮುಂದುವರಿಸಿದರೇ ಪಕ್ಷಕ್ಕೆ ಹಾನಿಯಾಗುವುದು ಖಚಿತ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com