ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ ವಲಯದ ಕಾರ್ಯನಿರ್ವಾಹಕ ಸದಸ್ಯರಾದ ಕಲ್ಲಡ್ಕ ಪ್ರಭಾಕರ ಭಟ್, ಕರ್ನಾಟಕ ಕರಾವಳಿಯಲ್ಲಿ ಉದ್ಭವಿಸಿರುವ ಪ್ರಸಕ್ತ ಪರಿಸ್ಥಿತಿಯಲ್ಲಿ ಆರ್ ಎಸ್ ಎಸ್ ಎಂದೂ ನೇರ ರಾಜಕೀಯಕ್ಕೆಇಳಿಯುವುದಿಲ್ಲ ಎಂದಿದ್ದಾರೆ. "ಹಿಂದೆ ನಾವು ಲೋಕಸಭೆ ಚುನಾವಣೆಗಾಗಿ ಕೆಲಸ ಮಾಡಿದ್ದೆವು. ಆದರೆ ರಾಜ್ಯವೊಂದರ ಚುನಾವಣೆಯಲ್ಲಿ ಎಂದೂ ಪ್ರಚಾರ ನಡೆಸಿಲ್ಲ. ಆದರೆ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಗೆಲುವನ್ನು ಖಚಿತಪಡಿಸಿಕೊಳ್ಳಲು ಪರ್ಕ್ಷದ ಪರ ಪ್ರಚಾರ ನಡೆಸುತ್ತೇವೆ, ಕರ್ನಾಟಕದಲ್ಲಿ ಬಿಜೆಪಿ ಗೆಲುವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಪ್ರಭಾವ ಬೀರಲಿದೆ" ಪ್ರಭಾಕರ ಭಟ್ ಹೇಳಿದ್ದಾರೆ.