ನಿಮಗೆ ಓಟು ಹಾಕಲ್ಲ, ನಿಮ್ಮ ಜೊತೆಗೂ ಬರಲ್ಲ; ಸಿಎಂಗೆ ಜಿಲ್ಲಾ ಪಂಚಾಯ್ತಿ ಸದಸ್ಯನ ನೇರ ಸವಾಲು
Published On :
ಹಳೆಕೆಸರೆ(ಮೈಸೂರು): ಚಾಮುಂಡೇಶ್ವರಿ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಬ್ಬಿಣದ ಕಡಲೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಸ್ಥಳೀಯರು ಸಿಎಂ ಪ್ರಚಾರದ ವೇಳೆ ಜೆಡಿಎಸ್ಗೆ ಜೈಕಾರ ಹಾಕಿರುವ ಘಟನೆ ನಡೆಸಿದೆ.
ಮೈಸೂರಿನ ಹಳೆಕೆಸರೆಯಲ್ಲಿ ಸಿದ್ದರಾಮಯ್ಯ ಅವರು ಪ್ರಚಾರ ನಡೆಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಜಿಲ್ಲಾ ಪಂಚಾಯ್ತಿ ಸದಸ್ಯ ಮರಿಸ್ವಾಮಿಯನ್ನು ಕಂಡ ಸಿದ್ದರಾಮಯ್ಯ ಅವರನ್ನು ಹತ್ತಿರಕ್ಕೆ ಬರುವಂತೆ ಕೂಗಿದ್ದಾರೆ. ಈ ವೇಳೆ ಮುಂದೆ ಬಂದ ಮರಿಸ್ವಾಮಿ ಅವರು ನಾನು ಜೆಡಿಎಸ್ ನಲ್ಲಿದ್ದೇನೆ. ನಾನು ಅಲ್ಲಿಗೆ ಬರುವುದಿಲ್ಲ ಎಂದು ಹೇಳಿದ್ದಾರೆ.
ಇದಕ್ಕೆ ಸಿದ್ದರಾಮಯ್ಯ ಅವರು ಸರಿ ಇಲ್ಲಿಗೆ ಬರಬೇಡ ಕಾಂಗ್ರೆಸ್ ಗೆ ಓಟ್ ಹಾಕು ಎಂದು ಹೇಳಿದ್ದರು. ಅದಕ್ಕೆ ಮರಿಸ್ವಾಮಿ ನಾನು ನಿಮಗೆ ಓಟ್ ಹಾಕುವುದಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದರಿಂದ ಕೆರಳಿದ ಸಿದ್ದರಾಮಯ್ಯ ಸರಿ ಇಲ್ಲಿಂದ ಹೋಗು ಎಂದು ಹೇಳಿದ್ದಕ್ಕೆ ನಾನು ಇಲ್ಲೇ ಇರುತ್ತೀನಿ ನೀವು ಹೋಗಿ ಎಂದು ಮತ್ತೆ ಸಿಎಂಗೆ ಟಾಂಗ್ ನೀಡಿದ್ದಾರೆ.
ಇದರಿಂದ ಬೇಸರಗೊಂಡ ಸಿದ್ದರಾಮಯ್ಯ ಪ್ರಚಾರ ವಾಹನವನ್ನು ಬಿಟ್ಟು ಕಾರು ಹತ್ತಿ ಮತ್ತೊಂದು ಗ್ರಾಮಕ್ಕೆ ಪ್ರಚಾರಕ್ಕೆ ತೆರಳಿದರು. ಸಿದ್ದರಾಮಯ್ಯ ಅವರು ಕಾರು ಹತ್ತುವ ವೇಳೆ ಸ್ಥಳೀಯರು ಜೆಡಿಎಸ್ ಗೆ ಜೈಕಾರ ಕೂಗಿದ್ದಾರೆ. ಜೊತೆಗೆ ಜಿಟಿ ದೇವೇಗೌಡ ಪರ ಘೋಷಣೆಗಳನ್ನು ಕೂಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Congressಕಾಂಗ್ರೆಸ್JDSರಾಜಕೀಯSiddaramaiahಸಿದ್ದರಾಮಯ್ಯಜೆಡಿಎಸ್Karnataka Assembly Electionಕರ್ನಾಟಕ ವಿಧಾನಸಭೆ ಚುನಾವಣೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

