ವಂದೇ ಮಾತರಂ ಗೀತೆ ಶುರುವಿಗೂ ಮುನ್ನ ರಾಹುಲ್ ತಮ್ಮ ಕೈ ಗಡಿಯಾರ ನೋಡಿಕೊಂಡು, ಸಮಯದ ಕೊರತೆಯಿದೆ ಎಂದು ಸಂಘಟಕರಿಗೆ ಸನ್ನೆ ಮಾಡುತ್ತಾರೆ. ಬಳಿಕ ಕೇವಲ ಒಂದೇ ಸಾಲಿನಲ್ಲಿ ಈ ಗೀತೆ ಹಾಡಿ ಮುಗಿಸುವಂತೆ ವೇಣುಗೋಪಾಲ್ ಸೂಚನೆಕೊಟ್ಟರು ಎನ್ನಲಾಗಿದ್ದು . ಗಾಯಕಿ ಗೀತೆಯನ್ನು ಹಾಡಲು ಶುರು ಮಾಡಿದರೂ ರಾಹುಲ್ ಕುಳಿತೇ ಇದ್ದರು. ಆಗ ರಾಹುಲ್ ಅವರು ಬಲಭುಜ ಹಿಡಿದ ವೇಣುಗೋಪಾಲ್ ಎಬ್ಬಿಸಿ ನಿಲ್ಲಿಸುವುದು ದೃಶ್ಯದಲ್ಲಿ ಸೆರೆಯಾಗಿದೆ.